ಮೊನ್ನೆ ಹಾಸನ ನಗರದ ರಂಗೋಲಿ ಗುಂಡಿ ರಘು ಕೊಲೆ ಮಾಡಿ ಎಸ್ಕೇಪ್ ಆದವರು ಇಂದು ಅಂದರ್ !!

0

ಹಾಸನ ನಗರ ವೃತ್ತ ಪೊಲೀಸರ ಕಾರ್ಯಾಚರಣೆ, ಹಾಸನ ನಗರ ಪೊಲೀಸ್ ಠಾಣಾ ಮೊ. ನಂ: 164/2020 ಕಲಂ 302 ರೆ/ವಿ 34 ಐ.ಪಿ.ಸಿ ಪ್ರಕರಣದಲ್ಲಿ ಹಾಸನ ನಗರದ ರಂಗೋಲಿಹಳ್ಳದ ರಘುನನ್ನು ಕೊಲೆ ಮಾಡಿ, ತಲೆಮರೆಸಿಕೊಂಡಿದ್ದ ಐದು ಜನ ಆರೋಪಿಗಳ ಬಂಧನ.

ಹಾಸನ ನಗರ ವೃತ್ತ ವ್ಯಾಪ್ತಿಯಲ್ಲಿ ಬರುವ ಹಾಸನ ನಗರದ ಸಂಸ್ಕೃತ ಭವನದ ಎದುರು ಇರುವ ಜೆ.ಪಿ ಟೇ ಅಂಗಡಿ ಹತ್ತಿರ ರಂಗೋಲಿಹಳ್ಳದ ರಘು ಬಿನ್ ದೇವರಾಜುರವರನ್ನು ಭವಿತ ಹಾಗೂ ಇತರರು ಸೇರಿಸಿಕೊಂಡು ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಈ ಕೊಲೆಗೆ ಹಳೇದ್ವೇಷವೇ ಕಾರಣವೆಂದು ಈ ಬಗ್ಗೆ ಪಿರಾದಿ ನಂದೀಶರವರು ಭವಿತ ಹಾಗೂ ಇತರರ ಮೇಲೆ ದಿನಾಂಕ: 05-12-2020 ರಂದು ಹಾಸನ ನಗರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣಾ ಮೊ.ನಂ: 164/2020 ಕಲಂ 302 ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ಸರಿಯಷ್ಟೆ. ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡುವ ಸಂಬಂಧ ಹಾಸನ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಶ್ರೀನಿವಾಸ್‌ಗೌಡ, ಐ.ಪಿ.ಎಸ್, ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಬಿ.ಎನ್.ನಂದಿನಿ ರವರ ಮಾಗದರ್ಶನದಲ್ಲಿ, ಹಾಸನ ಉಪ ವಿಭಾಗದ ಡಿ.ವೈ.ಎಸ್.ಪಿ. ರವರಾದ ಶ್ರೀ ಪುಟ್ಟಸ್ವಾಮಿಗೌಡ.ಟಿ.ಆರ್ ರವರ ನೇತೃತ್ವದಲ್ಲಿ ಶ್ರೀ ಕೃಷ್ಣರಾಜ್‌.ಜಿ. ಸಿ.ಪಿ.ಐ, ಹಾಸನ ನಗರ ವೃತ್ತ, ನಗರ ಠಾಣೆಯ ಪಿ.ಎಸ್.ಐ ಅಭಿಜಿತ್ ಮತ್ತು ಸಿಬ್ಬಂದಿಗಳಾದ ಹರೀಶ್, ಹೆಚ್.ಸಿ-121 ಪಿ.ಸಿ-72 ಪ್ರವೀಣ, ಪಿ.ಸಿ-711 ಲತೇಶ್, ಪಿ.ಸಿ-410 ರವಿಕುಮಾರ, ಪಿ.ಸಿ-07 ವೇಣುಗೋಪಾಲ, ಪಿ.ಸಿ-177 ದಿಲೀಪ, ಹೆಚ್.ಸಿ-261 ಜಮೀಲ್ ಅಹಮದ್ ರವರನ್ನೊಳಗಂಡ ತಂಡವನ್ನು ರಚಿಸಲಾಗಿದ್ದು ಸದರಿ ತಂಡವು ಮಾಹಿತಿಯನ್ನು ಸಂಗ್ರಹಿಸಿ ಹೋಳೆನರಸೀಪುರದ ತೇಜಸ್‌ನ ಸ್ನೇಹಿತ ಕಿಶನ್ ಎಂಬುವನ ಮನೆಯಲ್ಲಿದ್ದ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಆರೋಪಿಗಳು ಮತ್ತು ಮೃತ ರಘು ಸ್ನೇಹಿತರಾಗಿದ್ದು ರಘು ತೇಜಸ್‌ನಿಂದ 1,50,000/-ರೂ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು ತನ್ನ ಅಕ್ಕನ ಮದುವೆಗೆ ಹಣವನ್ನು ವಾಪಸ್ ಕೊಡು ಎಂದು ಕೇಳಿದ್ದರಿಂದ ನಾನು ಕೊಡುವುದಿಲ್ಲ. ನೀನು ಏನು ಬೇಕಾದರೂ ಮಾಡಿಕೋ ಎಂದು ಹೇಳಿದ್ದು ಇದೇ ವಿಚಾರದಲ್ಲಿ ಆರೋಪಿಗಳೆಲ್ಲರೂ ರಘುನನ್ನು ಕೊಲೆ ಮಾಡುವ ಉದ್ದೇಶದಿಂದ ದಿನಾಂಕ: 05-12-2020 ರಂದು ಆರೋಪಿಗಳೆಲ್ಲರೂ ಸೇರಿ ಮಚ್ಚುಗಳು ಮತ್ತು ಕಾರದ ಪುಡಿಯನ್ನು ತೆಗೆದುಕೊಂದು ಬೈಕಿನಲ್ಲಿ ಹಾಸನ ನಗರದ ಸಂಸ್ಕೃತ ಭವನದ ಎದುರು ಇರುವ ಜೆ.ಪಿ ಟೀ ಅಂಗಡಿ ಹತ್ತಿರ ಬಂದು ಏಕಾ ಏಕಿ ರಘುವಿನ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಮುಚ್ಚುಗಳಿಂದ ರಘುವಿನ ತೆಲೆಗೆ ಮೈ ಕೈಗೆ ದೇಹದ ಇತರ ಭಾಗಗಳಿಗೆ ಎಲ್ಲಂದರಲ್ಲಿ ಕೊಚ್ಚಿ ಕೊಲೆ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಹಾಸನ ನಗರ ವೃತ್ತ ವ್ಯಾಪ್ತಿಯ ಹಾಸನ ನಗರ ಪೊಲೀಸ್ ಠಾಣೆಯ ಒಂದು ಕೊಲೆ ಪ್ರಕರಣ ಪತ್ತೆಯಾಗಿರುತ್ತೆ.

ಆರೋಪಿಗಳ ವಿವರ.

1) ಭವಿತ @ ಗುಡ್ಡಿ ಬಿನ್ ರಾಜು, 19 ವರ್ಷ, ನಂದಿ ಎಂಟರ್ ಪ್ರೈಸಸ್ ಪೈನಾನ್ಸ್ ನಲ್ಲಿ ಕಲೆಕ್ಷನ್ ಕೆಲಸ, ವಾಸ ರಂಗೋಲಿಹಳ್ಳಿ, ತಿಮ್ಮೇಗೌಡರ ವಠಾರ, ಹಾಸನ ಟೌನ್.

2) ತೇಜಸ್ ಬಿನ್ ಲೋಕೇಶ್, 19 ವರ್ಷ, ಆರ್‌.ಎಂ.ಸಿ ಯಾರ್ಡ್‌ನಲ್ಲಿ ತರಕಾರಿ ವ್ಯಾಪಾರ, ವಾಸ 5ನೇ ಕ್ರಾಸ್, ಶಾಂತಿನಗರ, ಹಾಸನ ಟೌನ್,

3) ಪುನಿತ @ ಬಣ್ಣ ಬಿನ್ ಅರುಣ, 21 ವರ್ಷ, ಎ.ಪಿ.ಎಂ.ಸಿಯಲ್ಲಿ ತರಕಾರಿ

ವ್ಯಾಪಾರ, ವಾಸ ಜಯನಗರ, ಪೆಟ್ರೋಲ್ ಬಂಕ್ ಹತ್ತಿರ, ಹಾಸನ ಟೌನ್,

4) ನವೀನಕುಮಾರ @ ಚಿನ್ನ ಬಿನ್ ವೆಂಕಟೇಶ, 21 ವರ್ಷ, ಐ.ಟಿ.ಐ ವಿದ್ಯಾರ್ಥಿ, ವಾಸ ಚನ್ನಪಟ್ಟಣ ಹೌಸಿಂಗ್ ಬೋರ್ಡ್, 28ನೇ ಕ್ರಾಸ್, ಹಾಸನ ಟೌನ್, ಸ್ವಂತ ಊರು ದೊಡ್ಡಮಂಡಿಗನಹಳ್ಳಿ 3ನೇ ಕ್ರಾಸ್, ಹಾಸನ ಟೌನ್.

5) ವಿವೇಕ @ ಸೊಳ್ಳೆ ಬಿನ್ ಪ್ರಕಾಶ @ ಬೋಂಡಾ, 24 ವರ್ಷ, ಎ.ಪಿ.ಎಂ.ಸಿಯಲ್ಲಿ ತರಕಾರಿ ಓಲ್ ಸೇಲ್ ವ್ಯಾಪಾರ, ವಾಸ 2ನೇ ಕ್ರಾಸ್, ಶಾಂತಿನಗರ, ಹಾಸನ ಟೌನ್,

ಈ ಮೇಲ್ಕಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಈ ಮೇಲ್ಕಂಡ ತನಿಖಾ ತಂಡದ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಶ್ರೀನಿವಾಸ್‌ಗೌಡ, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

LEAVE A REPLY

Please enter your comment!
Please enter your name here