ಹಾಸನ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ನಾಳೆ 13.02.2022 ಕರೆಂಟ್ ಇರಲ್ಲ

0

13ಕ್ಕೆ ವಿದ್ಯುತ್ ವ್ಯತ್ಯಯ ಹಾಸನ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಹಾಸನ ನಗರಸಭೆ ವತಿಯಿಂದ ರಸ್ತೆ ಅಗಲೀಕರಣ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 11 ಕೆ.ವಿ ಹಾಸನಾಂಬ ಮಾರ್ಗದ ವಿತರಣಾ ಜಾಲವನ್ನು ಸ್ಥಳಾಂತರಿಸುವ ಅಗತ್ಯವಿರುತ್ತದೆ. ಆದ್ದರಿಂದ ಫೆ. 13 ರಂದು ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಗಮನಿಸಿ ಈ ಕೆಳಕಂಡ ಪ್ರದೇಶದ ಸಾರ್ವಜನಿಕರು :
ನಗರದ ಹಾಸನಾಂಬ ಸರ್ಕಲ್, ಸಂತೇಪೇಟೆ, ವಲ್ಲಬಾಯಿ ರಸ್ತೆ, ಹೊಸಲೈನ್ ರಸ್ತೆ, ದೊಡ್ಡಗರಡಿ ರಸ್ತೆ, ಈಶ್ವರ ದೇವಸ್ಥಾನದ ರಸ್ತೆ, ಪಾಯಣ್ಣ ಛತ್ರ ರಸ್ತೆ, ಕಟ್ಟಿನಕೆರೆ ಮಾರ್ಕೆಟ್, ಮಹಾರಾಜ ಪಾರ್ಕ್ ಹತ್ತಿರ, AVK ಕಾಲೇಜು ರಸ್ತೆ, ಹಳೇ ಬಸ್ ನಿಲ್ದಾಣದ ಎದುರು ಅಪೂರ್ವ ಹೋಟೆಲ್ ಹತ್ತಿರ, ಹರ್ಷಮಹಲ್ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯ ಮಿತವಾಗಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here