ನದಿ ಜೋಡಣೆಯಿಂದ ಬೃಹತ್ ಬೆಂಗಳೂರಿಗೆ ನೀರಿನ ಬರ ದೆಹಲಿಯ ರಾಜ್ಯಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ HD ದೇವೇಗೌಡ

0

ಹೊಸದಿಲ್ಲಿ : ಬಜೆಟ್‌ನಲ್ಲಿ ಘೋಷಿಸಿರುವ ಕೃಷ್ಣಾ – ಪೆನ್ನಾರ್ ಮತ್ತು ಪೆನ್ನಾರ್ ಕಾವೇರಿ ನದಿಗಳ ಜೋಡಣೆಯಿಂದ ಕರ್ನಾಟಕದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಲಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ರಾಜ್ಯಸಭೆಯಲ್ಲಿ ಬಜೆಟ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ನದಿ ಜೋಡಣೆ ಯೋಜನೆಯಿಂದ ಕರ್ನಾಟಕಕ್ಕೆ ಭಾರಿ ಅನ್ಯಾಯವಾಗಲಿದೆ. ಬೆಂಗಳೂರು ನಗರ ಈಗಾಗಲೇ ಕುಡಿಯುವ ನೀರಿನ ಅಭಾವ ಎದುರಿಸುತ್ತಿದೆ. ಸುಪ್ರೀಂ ಕೋರ್ಟ್ ನೀರಾವರಿಗೆ ಹಂಚಿಕೆ ಮಾಡಿರುವ ಪಾಲಿನ ಮೂಲಕ ನಗರಕ್ಕೆ ನೀರು ಪೂರೈಸಲಾ ಗುತ್ತಿದೆ. ನದಿ ಜೋಡಣೆಯಿಂದ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ,” ಎಂದು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಜನಸಂಖ್ಯೆ 2011ರಲ್ಲಿ 85 ಲಕ್ಷ ಇತ್ತು. ಈಗ ಅದು 1.30 ಕೋಟಿಗೆ ಏರಿಕೆಯಾಗಿದೆ. ಬೆಂಗಳೂರಿಗೆ ಹಂಚಿಕೆ ಮಾಡಿರುವ 4.75 ಟಿಎಂಸಿಯಿಂದ ಏನನ್ನೂ ಮಾಡಲಾಗದು. ಹೀಗಾಗಿ ನೀರಾವರಿ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿರುವ ನೀರಿನಿಂದ 50 ಟಿಎಂಸಿ ಯನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ,” ಎಂದು ವಿವರಿಸಿದ ಗೌಡರು, ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಹೆಚ್ಚಿನ ಹಂಚಿಕೆ ಮಾಡುವ ಅಗತ್ಯವಿದೆ,” ಎಂದರು.

”ಕೃಷ್ಣಾ-ಪೆನ್ನಾರ್ ಕರ್ನಾಟಕದ ನೀರಿನ ಯೋಜನೆಯಲ್ಲಿ ಪಾಲಿನ ಕುರಿತು

ಪ್ರಸ್ತಾಪವೇ ಇಲ್ಲ. ಕೃಷ್ಣಾ-ಪೆನ್ನಾರ್, ಪೆನ್ನಾರ್-ಕಾವೇರಿ ನದಿ ಜೋಡಣೆ ಕುರಿತು ಕೇಂದ್ರ ಸರಕಾರ ಹೆಚ್ಚಿನ ಮಾಹಿತಿ ನೀಡಬೇಕು,” ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here