₹2,170 ಕೋಟಿ ವೆಚ್ಚದಲ್ಲಿ ಇದನ್ನು ಕಾರ್ಯಗತಗೊಳಿಸಲಾಗಿದೆ. ಈ ಪೈಪ್‌ಲೈನ್ ಕರ್ನಾಟಕದ ಹಾಸನದಿಂದ ಹೈದರಾಬಾದ್‌ನ ಹೊರವಲಯ ಚೆರ್ಲಪಲ್ಲಿಗೆ ಅನಿಲ ಸರಬರಾಜು ಮತ್ತು ವಿತರಣೆ ಮಾಡುತ್ತದೆ., ಕೃಷ್ಣ ನಿಲ್ದಾಣದಿಂದ ಹೈದರಾಬಾದ್ (ಕಾಚಿಗುಡ)- ರಾಯಚೂರು- ಹೈದರಾಬಾದ್ (ಕಾಚಿಗುಡ) ರೈಲು ಸೇವೆಗೆ ಹಸಿರು ನಿಶಾನೆ ತೋರಿದರು. ಈ ರೈಲು ತೆಲಂಗಾಣದಲ್ಲಿ ಹೈದರಾಬಾದ್, ರಂಗಾರೆಡ್ಡಿ, ಮೆಹಬೂಬ್‌ನಗರ ಮತ್ತು ನಾರಾಯಣ್‌ಪೇಟೆ ಜಿಲ್ಲೆ ಹಾಗೂ ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ. ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ; ಹಾಸನ-ಚರ್ಲಪಲ್ಲಿ ಗ್ಯಾಸ್ ಪೈಪ್‌ಲೈನ್ ಸೇರಿದಂತೆ 13,500 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಘೋಷಣೆ, ಕರ್ನಾಟಕದ ಹಾಸನದಿಂದ ತೆಲಂಗಾಣದ ಚರ್ಲಪಲ್ಲಿವರೆಗಿನ ಎಲ್‌ಪಿಜಿ ಪೈಪ್‌ಲೈನ್ ಯೋಜನೆ ಸೇರಿದಂತೆ 13,500 ಕೋಟಿ ರೂಗೂ ಹೆಚ್ಚು ಮೊತ್ತದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆ ಮಾಡುವುದಾಗಿ ಮೋದಿ ಹೇಳಿದ್ದಾರೆ. 900 ಕೋಟಿ ರೂ ವೆಚ್ಚದಲ್ಲಿ ಸಮ್ಮಕ್ಕ ಸಾರಕ್ಕ ಬುಡಕಟ್ಟು ವಿಶ್ವವಿದ್ಯಾಲಯ ನಿರ್ಮಾಣವಾಗುವುದನ್ನೂ ಮೋದಿ ಘೋಷಿಸಿದ್ದಾರೆ. ರಾಯಚೂರಿನಿಂದ ಕಾಚಿಗುಡದ ಮಾರ್ಗದಲ್ಲಿ ಹೊಸ ರೈಲನ್ನು ಮೋದಿ ಬಿಡುಗಡೆ ಮಾಡಿದ್ದಾರೆ. ಹೈದರಾಬಾದ್, ಅಕ್ಟೋಬರ್ 1: ತೆಲಂಗಾಣದಲ್ಲಿ ಚುನಾವಣಾ ಬೇಟೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ. ಭಾನುವಾರ ಮೆಹಬೂಬನಗರದಲ್ಲಿ ನಡದ ಬಿಜೆಪಿ ಪ್ರಜಾಘರ್ಜನೆ ಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಹಾಸನದಿಂದ ತೆಲಂಗಾಣದ ಚರ್ಲಪಲ್ಲಿವರೆಗಿನ ಎಲ್‌ಪಿಜಿ ಪೈಪ್‌ಲೈನ್ (Hassan – Cherlapalli LPG Pipeline project) ಯೋಜನೆ ಸೇರಿದಂತೆ 13,500 ಕೋಟಿ ರೂಗೂ ಹೆಚ್ಚು ಮೊತ್ತದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆ ಮಾಡುವುದಾಗಿ ಮೋದಿ ಹೇಳಿದ್ದಾರೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣಕ್ಕೆ ಪ್ರಧಾನಿ ನೀಡಿದ್ದ ಪ್ರಮುಖ ಭರವಸೆಗಳಲ್ಲಿ ನ್ಯಾಷನಲ್ ಟರ್ಮರಿಕ್ ಬೋರ್ಡ್ (National Turmeric Board) ಸ್ಥಾಪನೆಯೂ ಒಂದು. ಇದೇ ನವೆಂಬರ್ ಮತ್ತು ಡಿಸೆಂಬರ್ನಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ತೆಲಂಗಾಣ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಆಡಳಿತದಲ್ಲಿರುವ ಕೆಸಿಆರ್ ನೇತೃತ್ವದ ಟಿಆರ್ಎಸ್ ಪಕ್ಷವನ್ನು ಸೋಲಿಸಲು ಬಿಜೆಪಿ ಹರಸಾಹಸ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಇಂದು ಮಾಡಿದ ಘೋಷಣೆಗಳು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಕಾದುನೋಡಸ್ಥಾಪನೆ, ಪ್ರಧಾನಿ ನರೇಂದ್ರ ಮೋದಿ ತೆಲಂಗಾಣಕ್ಕೆ ಮಾಡಿದ ಘೋಷಣೆಗಳು. ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪನೆ. ಸಮ್ಮಕ್ಕ ಸಾರಕ್ಕೆ ಬುಡಕಟ್ಟು ವಿಶ್ವವಿದ್ಯಾಲಯ (ಸೆಂಟ್ರಲ್ ಟ್ರೈಬಲ್ ಯೂನಿವರ್ಸಿಟಿ) 900 ಕೋಟಿ ರೂ ವೆಚ್ಚದಲ್ಲಿ ಸ್ಥಾಪನೆ.
ಹಾಸನದಿಂದ ಚರ್ಲಪಲ್ಲಿವರೆಗೆ ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್, ಕಾಚಿಗುಡ ರಾಯಚೂರು ಮಾರ್ಗದಲ್ಲಿ ಹೊಸ ರೈಲಿಗೆ ಚಾಲನೆ. ವಾರಂಗಲ್, ಖಮ್ಮಂ, ವಿಜಯವಾಡ ಹೆದ್ದಾರಿ ಕಾಮಗಾರಿಗೆ ಶಂಕು ಸ್ಥಾಪನೆ. ಸೂರ್ಯಪೇಟ್ ಮತ್ತು ಖಮ್ಮಂ ಹೆದ್ದಾರಿ ಉದ್ಘಾಟನೆ. ಹನುಮಕೊಂಡದಲ್ಲಿ ಜವಳಿ ಪಾರ್ಕ್ ಸ್ಥಾಪನೆ, ಏನಿದು ಹಾಸನ ಚರ್ಲಪಲ್ಲಿ ಗ್ಯಾಸ್ ಪೈಪ್‌ಲೈನ್ ಯೋಜನೆ? ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಸಂಸ್ಥೆ (ಎಚ್ಪಿಸಿಎಲ್) ಕರ್ನಾಟಕದ ಹಾಸನದಿಂದ ತೆಲಂಗಾಣದ ಚೆರ್ಲಪಲ್ಲಿ ನಡುವೆ 649 ಕಿಮೀ ಉದ್ದದ ಎಲ್‌ಪಿಜಿ ಪೈಪ್‌ಲೈನ್ ಯೋಜನೆ ಕೈಗೊಳ್ಳಲಿದೆ. ಹಾಸನ, ತಿಪಟೂರು, ಶಿರಾ, ಅನಂತಪುರಂ, ಕರ್ನೂಲು, ಮೆಹಬೂಬನಗರ ಮತ್ತು ಹೈದರಾಬಾದ್‌ನ ಚೆರ್ಲಪಲ್ಲಿಯವರೆಗೆ ಈ ಪೈಪ್‌ಲೈನ್ ಸಾಗಿ ಹೋಗುತ್ತದೆ. ಅನಂತಪುರಂನಲ್ಲಿ ಬಾಟ್ಲಿಂಗ್ ಪ್ಲಾಂಟ್ ಇರಲಿದೆ.