ಕೈದಿಗಳಿಂದ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

0

ಹಾಸನ: ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಜಿಲ್ಲಾ ಉಪ ಕಾರಾಗೃಹ, ಈಗ ಮತ್ತೊಂದು ರೀತಿಯಲ್ಲಿ ಸುದ್ದಿಯಾಗಿದೆ. ವಿಚಾರಣಾಧೀನ ಕೈದಿಗಳಿಂದ ಜೈಲ್ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಇತರೆ ಕೈದಿಗಳೊಂದಿಗೆ ಜಗಳ ಆಡಿದ ಆರೋಪ ಕೇಳಿ ಬಂದಿದೆ. ಸೆ.30 ರ ಸಂಜೆ 4 ಗಂಟೆಯಲ್ಲಿ ಬಂಧಿಖಾನೆಯ ಕೈದಿಗಳನ್ನು ಬ್ಯಾರನಿಂದ ಹೊರಗೆ ಬಿಡಲಾಗಿತ್ತು. ಈ ಸಮಯದಲ್ಲಿ ಸಿ ಬ್ಯಾರಕ್‌ನಲ್ಲಿದ್ದ ವಿಚಾರಣಾಧೀನ ಕೈದಿ ಸಂಖ್ಯೆ 8223 ಭರತ್, ಆತನ ಸಹ ಕೈದಿ ಸಂಖ್ಯೆ 8210 ಮಂಜಶೆಟ್ಟಿ ಅಲಿಯಾಸ್ ದ್ವಾರಿಕಾ ಅಲಿಯಾಸ್ ರಾಹುಲ್ ಎಂಬುವವರು ಸೆ.29 ರಂದು ಹೊಸದಾಗಿ ಬಂದ ಕೈದಿ ಸಂಖ್ಯೆ 12151 ಲೋಹಿತ್‌ ಅಲಿಯಾಸ್ ಕಿರಿಕ್ ಲೋಹಿತ್ ಎಂಬಾತನೊಂದಿಗೆ ಬಿ ಮತ್ತು ಸಿ ಬ್ಯಾರಕ್‌ಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಜಗಳ ಮಾಡಿ ಆತನಿಗೆ ಹೊಡೆದು, ಹೆಚ್ಚಿಗೆ ಮಾತನಾಡಿದರೆ ನಿನ್ನನ್ನು ಸಾಯಿಸುತ್ತೇವೆಂದು ಗಲಾಟೆ ಮಾಡುತ್ತಿದ್ದರು.

ಕಾಲ್ಪನಿಕ ಚಿತ್ರಗಳು

ಕೂಡಲೇ ಕರ್ತವ್ಯದಲ್ಲಿದ್ದ ಪುಟ್ಟಣ್ಣ ಆಚಾರಿ ಹಾಗೂ ಇತರೆ ಸಿಬ್ಬಂದಿ ಜಗಳ ಬಿಡಿಸಲು ಹೋದಾಗ ವಿಚಾರಣಾಧೀನ ಕೈದಿಗಳಾದ ಭರತ್ ಹಾಗೂ ಮಂಜಶೆಟ್ಟಿ ಅವರು ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ನಾವು ಕೊಲೆ ಕೇಸಿನಲ್ಲಿ ಬಂದವರು ಹೊರಗೆ ಹೋದಾಗ ನಿಮ್ಮನ್ನು ಕೊಲೆ ಮಾಡುತ್ತೇವೆಂದು ಹೆದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕೂಡಲೇ ಲೋಹಿತ್ ಎಂಬಾತನನ್ನು ಅವರಿಂದ ಬಿಡಿಸಿಕೊಂಡು ಎಲ್ಲರನ್ನೂ ಅವರವರ ಬ್ಯಾರಕ್ ಒಳಗೆ ಕಳುಹಿಸಲಾಗಿದೆ.

ಕಾಲ್ಪನಿಕ ಚಿತ್ರಗಳು

ಈ ಸಂಬಂಧ ಕಾರಾಗೃಹದ ಒಳಗೆ ಕರ್ತವ್ಯ ನಿರ್ವಹಿಸುತ್ತಿದ್ದ, ಜಿಲ್ಲಾ ಬಂಧಿಖಾನೆ ಸಹಾಯಕ ಜೈಲರ್ ಪುಟ್ಟಣ್ಣ ಆಚಾರಿ ಅವರು ನಗರ ಠಾಣೆಗೆ ಹಾಜರಾಗಿ, ನಗರಠಾಣೆಗೆ ದೂರು ನೀಡಿದ್ದಾರೆ. ನನ್ನ ಜೊತೆ ಚಂದ್ರಶೇಖರ್, ರಘು ಆರ್.ಕೆ, ಸತ್ಯ ಹಾಗೂ ಪ್ರಕಾಶ್ ಎಂಬುವರೂ ಇದ್ದರು., ಭರತ್,ಮಂಜಶೆಟ್ಟಿ ಹಾಗೂ ಇತರೆ ಕೈದಿಗಳು ಆಗಾಗ ಪಿಸುಮಾತಿನಲ್ಲಿ ಏನೇನೋ ಮಾತನಾಡಿ ಕೊಳ್ಳುತ್ತಿದ್ದು, ಇವರ ವರ್ತನೆ ಗಮನಿಸಿದರೆ ಗುಂಪು ಘರ್ಷಣೆ ಉಂಟು ಮಾಡುವ ಸಾಧ್ಯತೆ ಜೊತೆಗೆ ಉಳಿದ ಕೈದಿಗಳಿಗೂ ತೊಂದರೆ ಉಂಟು ಸಾಧ್ಯತೆ ಇರುತ್ತದೆ. ಆದ್ದರಿಂದ ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ, ದುಂಡಾ ವರ್ತನೆ ತೋರಿದ ವಿಚಾರಣಾಧೀನ ಕೈದಿಗಳಾದ ಭರತ್ ಮತ್ತು ಮಂಜಶೆಟ್ಟಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪುಟ್ಟಣ್ಣ ಅವರು ನೀಡಿದ ದೂರು ಆಧರಿಸಿ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಲ್ಪನಿಕ ಚಿತ್ರಗಳು

ಕಾಲ್ಪನಿಕ ಚಿತ್ರಗಳು

LEAVE A REPLY

Please enter your comment!
Please enter your name here