ಹಾಸನ ಜಿಲ್ಲೆಯ ಪೋಲೀಸ್ ಇಲಾಖೆಗೆ ಸಾನಿಟೈಸರ್ ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸ್ ಗೌಡ ಹಾಗೂ ಅಡಿಷನಲ್ ಎಸ್. ಪಿ. ನಂದಿನಿ ಅವರ ಮುಖಾಂತರ ವಿತರಿಸಿದ ಹಾಸನ ಲೋಕ ಸಭಾ ಸದಸ್ಯ ಪ್ರಜ್ವಲ್ ರೇವಣ್ಣ

” ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಫ್ರಂಟ್ ಲೈನ್ ಕೆಲಸಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಪೋಲೀಸ್ ಇಲಾಖೆಯವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ” . – @iprajwalrevanna
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಂಸದರು 👇)

ನಂತರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ವಾರ್ ರೂಂ ಆರಂಭಿಸಿ ಸೋಂಕಿತರನ್ನು ಪ್ರತಿನಿತ್ಯ ಸಂಪರ್ಕಿಸಿ ಅವರ ಆರೋಗ್ಯದ ಸ್ಥಿತಿಯನ್ನು ದಾಖಲಿಸಿಕೊಳ್ಳುವ ಬಗ್ಗೆ, ಕೋವಿಡ್ ಪರೀಕ್ಷೆ ಹೆಚ್ಚಿಸಲು ಆದ್ಯತೆ ನೀಡುವ ಬಗ್ಗೆ, 20 ಕ್ಕಿಂತ ಹೆಚ್ಚು ಪ್ರಕರಣ ಕಂಡುಬಂದರೆ ಅದನ್ನು ಕಂಟೈನ್ಮೆಂಟ್ ಜೋನ್ ಗಳೆಂದು ಗುರುತಿಸಿ ಸೂಕ್ತಕ್ರಮ ಕೈಗೊಳ್ಳುವ ಬಗ್ಗೆ, ಗೊಬ್ಬರ ಬಿತ್ತನೆ ಬೀಜ ಪಡೆಯಲು ಬರುವ ರೈತರು ಸುರಕ್ಷತಾ ಕ್ರಮ ಅನುಸರಿಸುವ ಬಗ್ಗೆ ಹಾಗೂ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಅಗತ್ಯತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಅಗತ್ಯ ಕ್ರಮಗಳಿಗೆ ಸೂಚನೆ
ಸಭೆಯಲ್ಲಿ ಕಡೂರು ಶಾಸಕರಾದ ಬೆಳ್ಳಿ ಪ್ರಕಾಶ್ ರವರು, ತಹಶೀಲ್ದಾರ್ ಉಮೇಶ್ ರವರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ನಾಯ್ಕ್ ರವರು, ವೈದ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. – ಪ್ರಜ್ವಲ್ ರೇವಣ್ಣ (ಸಂಸದರು ಹಾಸನ ಲೋಕಸಭಾ ಕ್ಷೇತ್ರ)
ಕಡೂರು(ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಂಸದರು 👇)

ಈ ಕಾರ್ಯಕ್ರಮದಿಂದ ಕಡೂರು ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ವಾರು ಮೆಡಿಕಲ್ ಕಿಟ್ ಗಳನ್ನು ವಿತರಣೆ ಈ ಮೆಡಿಕಲ್ ಕಿಟ್ ಆಕ್ಸಿಮೀಟರ್, ಇನ್ ಫ್ರಾರೆಡ್ ಥರ್ಮೊಮೀಟರ್, n95 ಮಾಸ್ಕ್ ಗಳು, 5 ಲೀಟರ್ ಸ್ಯಾನಿಟೈಸರ್ ಮತ್ತು ಪ್ಯಾರಾಸಿಟಮಾಲ್ ಟ್ಯಾಬ್ಲೆಟ್ ಗಳನ್ನು ಒಳಗೊಂಡಿರುತ್ತದೆ – ಪ್ರಜ್ವಲ್ ರೇವಣ್ಣ (ಹಾಸನ ಲೋಕಸಭಾ ಕ್ಷೇತ್ರ)
ಬೀರೂರು (ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸಂಸದರು 👇)

ಆಸ್ಪತ್ರೆಯಲ್ಲಿ ವೈದ್ಯರು,ದ್ವಿತೀಯ ದರ್ಜೆ ಸಹಾಯಕರು, ಡಿ ಗ್ರೂಪ್ ಸಿಬ್ಬಂದಿ ಹಾಗೂ ಅನಸ್ತೇಷಿಯಾ ತಜ್ಞರ ಕೊರತೆ ಇರುವುದು ಗಮನಕ್ಕೆ ಬಂದಿದ್ದು ಸಂಬಂಧಪಟ್ಟ ಇಲಾಖೆಯ ಜೊತೆಗೆ ಚರ್ಚಿಸಿ ಶೀಘ್ರವಾಗಿ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದ್ದೇನೆ. – ಪ್ರಜ್ವಲ್ ರೇವಣ್ಣ )ಸಂಸದರು ಹಾಸನ ಲೋಕಸಭಾ ಕ್ಷೇತ್ರ