ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ 1,54,37,940 ಹಣ ಸಂಗ್ರಹ

0

ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಹುಂಡಿ ಹಣ ಹಾಗೂ ಟಿಕೆಟ್ ಮತ್ತಿತರ ಮೂಲಗಳಿಂದ ಒಟ್ಟಾರೆ 1,54,37,940 ಹಣ ಸಂಗ್ರಹವಾಗಿದೆ .

ಹಾಸನಾಂಬಾ ದೇವಾಲಯದ ಹುಂಡಿಯಲ್ಲಿ 83,89,770, ಸಿದ್ದೇಶ್ವರ ದೇವಾಲಯದ ಹುಂಡಿಯಲ್ಲಿ- 6,50,355 ಸೇರಿದಂತೆ ಹುಂಡಿಯಲ್ಲಿ 90,40,125 ರೂ ಸಂಗ್ರಹವಾಗಿದೆ. ಅಲ್ಲದೆ ಟಿಕೆಟ್ ಮಾರಾಟದಿಂದ 63,97,815 ರೂ ಸಂಗ್ರಹವಾಗದೆ ಎಂದು ದೇವಾಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಬಿ.ಎ ಜಗದೀಶ್ ತಿಳಿಸಿದ್ದಾರೆ.

ಅ 28 ರಿಂದ ನ 6ರ ವರಗೆ ಹಾಸನಾಂಬ ,ಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆದಿತ್ತು .ನ 6ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲು ಹಾಕಲಾಗಿತ್ತು. ಇಂದು ಬೆಳಿಗ್ಗೆ 8 ಗಂಟೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ಪ್ರಾರಂಭಿಸಲಾಯಿತು.ಸಂಜೆ 4:30ರ ವೇಳೆಗೆ ಎಣಿಕೆ ಮುಕ್ತಾಯಗೊಂಡಿದೆ.

ಜಾತ್ರ ಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಜನಪ್ರತಿನಿಧಿಗಳು ,ಸಂಘ ಸಂಸ್ಥೆ ಗಳು ,ಮಾಧ್ಯಮ ಪ್ರತಿನಿಧಿಗಳು ಸಾರ್ವಜನಿಕರು ಹಾಗೂ ಹಣ ಎಣಿಕೆ ಕಾರ್ತವ್ಯದಲ್ಲಿ ತೊಡಗಿದ ಎಲ್ಲಾ ಅಧಿಕಾರಿ,ಸಿಬ್ಬಂದಿ, ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಅರ್.ಗಿರೀಶ್ ಮತ್ತು ಉಪ ವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಬಿ.ಎ ಜಗದೀಶ್ ಮತ್ತೊಮೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here