ನುಡಿದಂತೆ ನಡೆದ ಸಂಸದ ಪ್ರಜ್ವಲ್ ರೇವಣ್ಣ

0

ನೆನ್ನೆ ಚನ್ನರಾಯಪಟ್ಟಣ ತಾಲ್ಲೂಕಿನ ಲೋಕೇಶ್ ಎಂಬ ಅಲೆಮಾರಿ ಹಂದಿಜೋಗಿ ಸಮುದಾಯದ ಬಡ ಕುಟುಂಬದ ಸಂಕಷ್ಟದ ಕುರಿತು GoodNews Kannada ಮಾಧ್ಯಮ ಬೆಳಕು ಚೆಲ್ಲಿತ್ತು. ಕಾರ್ಯಕ್ರಮ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ ಸಂಸದ ಪ್ರಜ್ವಲ್ ರೇವಣ್ಣ ನವರು ಇಂದು ಆ ಕುಟುಂಬಕ್ಕೆ ಬೇಕಾಗುವ ದಿನಸಿ ಪದಾರ್ಥಗಳನ್ನು ತಲುಪಿಸಿ, ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದರು.

ಸಂಸದರು ನುಡಿದಂತೆ ಇಂದು ಅವರ ತಾಯಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಭವಾನಿ ರೇವಣ್ಣ ನವರು ಕುಟುಂಬವನ್ನು ಭೇಟಿಮಾಡಿ ಅವರ ಸಮಸ್ಯೆಗಳನ್ನು ಆಲಿಸಿ ಬೇಕಾಗುವ ದಿನಸಿ ಪದಾರ್ಥ ಮತ್ತು ತರಕಾರಿಗಳನ್ನು ನೀಡಿ ಧೈರ್ಯ ತುಂಬಿದರು.

ಶಾಸಕರಾದ ಸಿ.ಎನ್. ಬಾಲಕೃಷ್ಣ ರವರೊಂದಿಗೆ ಭೇಟಿ ನೀಡಿದ ಭವಾನಿ ರೇವಣ್ಣ ನವರು ಮನೆ ವ್ಯವಸ್ಥೆ ಕುರಿತು ಸಂಸದರು ಮತ್ತು ಶಾಸಕರು ಶೀಘ್ರ ಕ್ರಮಕೈಗೊಳ್ಳಲ್ಲಿದ್ದಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here