ನಗರದಲ್ಲಿ ತಲ್ಲಣ ಮೂಡಿಸಿದ ನಗರಸಭೆ ಸದಸ್ಯ ಪ್ರಶಾಂತ್ ಹತ್ಯೆ ಪ್ರಕರಣ ಇದೀಗ ಗುರುವಾರ ಅಧಿಕೃತವಾಗಿ ಆರೋಪಿಗಳನ್ನು CID ತಂಡದ ವಶಕ್ಕೆ ನೀಡಲಾಗಿದ್ದು, ತನಿಖೆ ಚುರುಕುಗೊಂಡಿದೆ. ಪ್ರಶಾಂತ್ ಹತ್ಯೆಯಲ್ಲಿ ಭಾಗಿಯಾದ ಬಹುತೇಕ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು , ಮೊದಲ ಆರೋಪಿಯ ವಯಕ್ತಿಕ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ , ಸಾರ್ವಜನಿಕ ವಲಯದಲ್ಲಿರುವ ಊಹಾಪೋಹಗಳ ಮದ್ಯೆ ಸಾಕ್ಷಿ ಸಮೇತ ಪ್ರಕರಣದ ಸಂಪೂರ್ಣ ಚಿತ್ರಣ ಇನ್ನು ಕೆಲವೇ ದಿನಗಳಲ್ಲಿ ಹಾಸನದ ಜನ ನಿರೀಕ್ಷಿಸಬಹುದಾಗಿದೆ ., ಹತ್ಯೆ ನಂತರ ಕೆಲವೇ ಗಂಟೆಯಲ್ಲಿ ಇಬ್ಬರು ಆರೋಪಿಗಳ ಹಾಸನ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಪ್ರಕರಣವನ್ನು CIDಗೆ ವಹಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದರು.
ಕೆಲ ದಿನದಿಂದ CID ತಂಡ ಹಾಸನದಲ್ಲಿ ಬೀಡುಬಿಟ್ಟಿದ್ದು, ಆರೋಪಿಗಳ ಮಾಹಿತಿ ಖಚಿತ ಮಾಹಿತಿ ಬೆನ್ನೇರಿದೆ . ಇದಕ್ಕೆ ಹಾಸನ ಪೊಲೀಸರು ತಮ್ಮ ಪ್ರಕರಣ ಬೇಧಿಸುವಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ .
ಇಂದು ನ್ಯಾಯಾಲಯಕ್ಕೆ ಆರೋಪಿಗಳ ಹಾಜರುಪಡಿಸಲಾಗಿತ್ತು