ಹಾಸನ: ಇತ್ತೀಚೆಗೆ ನಡೆದ ನಗರಸಭೆ ಜೆಡಿಎಸ್ ಸದಸ್ಯ ದಿ.ಪ್ರಶಾಂತ್ ನಾಗರಾಜ್ ಕೊಲೆ ಪ್ರಕರಣ ಸಂಬಂಧ ಬಂಧಿತ ಆರೋಪಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು ., ಕೊಲೆ ಹಿನ್ನಲೆ ಇಂಚಿಂಚು ಮಾಹಿತಿ ಕಲೆಹಾಕಿ ಸಮಗ್ರ ಮಾಹಿತಿ ತಿಳಿದು . ಸಮಗ್ರ ಸಾಕ್ಷಿ ಸಮೇತ ಕೊಲೆಗಾರರು ಅಲ್ಲದೇ ಅವರಿಗೆ ಹಿಂಬದಿಯಿಂದ ಸಾಥ್ ಕೊಟ್ಟವರನ್ನು ಬೆಂಬಿಡದೇ ಹುಡುಕಾಟ ನಡೆಯುತ್ತಿದೆ .
ಈ ಮೂಲಕ ಕೊಲೆಗೆ ಸಾಥ್ ನೀಡಿದನಾಲ್ಕು ಸಹ ಸ್ನೇಹಿತರನ್ನು ಜಿಲ್ಲೆಯಲ್ಲಿ ಬೀಡುಬಿಟ್ಟಿರುವ CID ತಂಡ ಬಂಧಿಸಿ ವಿಚಾರಣೆ ತೀವ್ರಗೊಳಿಸಿದೆ ಎಂದು ತಿಳಿದು ಬಂದಿದೆ. ನಗರದಪ್ರವಾಸಿಮಂದಿರದಲ್ಲಿ ಬೀಡುಬಿಟ್ಟಿರುವ CID ತಂಡದ DSP, ಇನ್ಸ್ ಪೆಕ್ಟರ್, ನಗರ ಠಾಣೆಯ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಒಟ್ಟು 25+ ಅಧಿಕಾರಿಗಳು ಮತ್ತು ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಕೊಲೆ ನಡೆದ ನಂತರ ತಲೆಮರೆಸಿಕೊಂಡು ಹೊರ ಜಿಲ್ಲೆಗಳಲ್ಲಿದ್ದ ಆ ಆರೋಪಿಗೆ ಊಟ- ತಿಂಡಿ ಸೇರಿದಂತೆ ಇತರೆ ನೆರವು ನೀಡಿದ್ದ ನಾಲ್ಕು ಮಂದಿ ಸಹಚರರನ್ನು ಕೂಡ ಬಿಡದೇ ತಂಡ ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ ಎಂದು ಮೂಲ ತಿಳಿಸಿದೆ. , ಇನ್ನೊದೆಡೆ
ಕೆಲ ದಿನಗಳ ಹಿಂದೆ ಹತ್ಯೆಯಾದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜುರವರ ಚಿಕ್ಕಪ್ಪನಾದ ವಾಸು (ವಾಸಣ್ಣ) 65 ವರ್ಷ ಎಂಬುವವರು ಮಂಗಳವಾರ ರಾತ್ರಿ ಸಮಯದಲ್ಲಿ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

ಕೊಲೆಯಾದ ಪ್ರಶಾಂತ್ ತಂದೆ ನಾಗರಾಜು ಅವರ ತಮ್ಮನಾದ ವಾಸು ಅವರು ಕಳೆದ ಹಲವಾರು ದಿನಗಳಿಂದ ಹೃದಯ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಇತ್ತಿಚಿಗೆ ಸಾವನ್ನಪ್ಪಿದ ತನ್ನ ಸ್ವಂತ ಅಣ್ಣನ ಮಕ್ಕಳಾದ ಮಯೂರ್, ಕೆಲ ದಿನಗಳ ಹಿಂದೆಯಷ್ಟೆ ಕೊಲೆಯಾದ ನಗರಸಭೆ ಸದಸ್ಯ ಪ್ರಶಾಂತ್ ಸಾವಿನ ಸುದ್ದಿ ಕೇಳಿ ಮನಸ್ಸಿಗೆ ಆಘಾತ ಉಂಟು ಮಾಡಿತ್ತು. ಈತನ 11ನೇ ದಿನದ ಪುಣ್ಯ ಸ್ಮರಣೆ ನಡೆದ ಮೇಲೆ ಅದೇ ನೋವಿನಲ್ಲಿದ್ದ ವಾಸು ಅವರು ರಾತ್ರಿ ಹೃದಯಾಘಾತವಾಗಿ ಕೊನೆ ಉಸಿರುವ ಎಳೆದಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಹಾಸನ ನಗರದ ಸಮೀಪ ಬಿಟ್ಟಗೌಡನಹಳ್ಳಿಯಲ್ಲಿರುವ ಸ್ಮಶಾನದಲ್ಲಿ ನೆರವೇರಿಸಲಾಯಿತು.