ಹಾಸನ : (ಹಾಸನ್_ನ್ಯೂಸ್) !, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಆರೋಪಕ್ಕೆ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ ಪ್ರತಿಕ್ರಿಯೆ !! 👇
” ಜನತೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಇಷ್ಟಪಡುತ್ತಾರೆ ವರತು ಪಾಳೇಗಾರಿಕೆ ಪದ್ಧತಿಯ ಸಂಸ್ಕೃತಿ ಯಲ್ಲ ” – ಪ್ರೀತಮ್ ಜೆ ಗೌಡ ( ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ)
ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ವಿತರಣಾ ಕಾರ್ಯಕ್ರಮ ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 👉 ‘ ಈ ಹಿಂದೆ ಅವರೇಳಿದ್ದೇ ಶಾಸನ ಎಂಬಂತೆ ನಡೆಸಲಾಗುತಿತ್ತು , ಇಂದು ಹಾಸನದಲ್ಲಿ ಯಾವ ಪಾಳೇಗಾರಿಕೆ ಸಂಸ್ಕೃತಿ ನಡೆಯುವುದಿಲ್ಲ. ಜನರು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಿರೀಕ್ಷೆ ಮಾಡುತ್ತಿದ್ದು, ಇಲ್ಲಿನ ಅಧಿಕಾರಿಗಳು ಕೂಡ ಅಂತಹ ಕೆಲಸ ಮಾಡುತ್ತಿರುವುದಾಗಿ ಹೇಳಿಕೆ ಕೊಟ್ಟರು ‘ ಮಾಜಿ ಸಚಿವರು ಅಧಿಕಾರಿಗಳ ಬಗ್ಗೆ ಕೇವಲವಾಗಿ ಮಾತನಾಡಬಾರದು ಎಂದರು
ಮೊನ್ನೆ ಹಾಸನ / ಅರಸೀಕೆರೆ ನಗರಸಭಾ ಮೀಸಲಾತಿ ಬಿಡುಗಡೆಯಾದ ವರದಿ ಬಗ್ಯೆ ಮಾಜಿ ಸಚಿವ ರೇವಣ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು , ಅದಕ್ಕೆ ಉತ್ತರವಾಗಿ ಇಂದು
ಈ ಹಿಂದೆ ನಗರಸಭೆಯ 25 ವಾರ್ಡುಗಳ ಮೀಸಲಾತಿಯನ್ನು ಕಾಂಗ್ರೆಸ್ ಸರಕಾರದವಧಿಯಲ್ಲಿ ನಿಗಧಿ ಮಾಡಿಲ್ಲ , ಜೆಡಿಎಸ್ ಅಧಿಕಾರಕ್ಕೆ ಬಂದ ನಂತರ ಮೀಸಲಾತಿಯನ್ನು ಏತಕ್ಕಾಗಿ ಬದಲಾವಣೆ ಮಾಡಿದರು? ಇತಿಹಾಸ ಕೆದಕಿದರೆ ಕಾನೂನು ಬಗ್ಗೆ ತಿಳಿಯುತ್ತದೆ ಎಂದು ಟಾಂಗ್ ಕೊಡಲು ಮುಂದಾದರು ಅವರು ತಮಗೆ ಬೇಕಾದಾಗೆ ರಾಜಕಾರಣ ಮಾಡ್ತಾರೆ, ಅದನ್ನೆ ಇತರರು ಮಾಡಿದರೇ ಕಾನೂನು ಬಾಹಿರ ಎಂದು ಹೇಳುವುದಾದರೇ ನಾವು ರಾಜಕಾರಣವನ್ನೇ ಮಾಡಲಾಗುವುದಿಲ್ಲ.
4ನೇ ವಾರ್ಡಿನಲ್ಲಿ ಬಹುತೇಕ ಪರಿಶಿಷ್ಟ ಜನಾಂಗದವರಿದ್ದಾರೆ. ಆದರೇ ಇದನ್ನು ಜನರಲ್ ಗೆ ಬದಲಾಯಿಸಿ ಯಾವ ಕಾನೂನು ಪಾಲನೆ ಮಾಡಿದ್ದರು ಎಂದು ಪ್ರಶ್ನಿಸಿದ ಅವರು, ಅವರು ಮಾಡಿದಾಗೆ ನಾನು ಕೂಡ ಮಾಡಿದ್ದೀನಷ್ಟೆ. ಇಷ್ಟು ಮಾತ್ರಕ್ಕೆ ಹತಾಶರಾಗದೇ ರಾಜಕಾರಣವನ್ನು ಒಪ್ಪಿಕೊಳ್ಳಬೇಕು ಎಂದು ಟೀಕಿಸಿದರು.