ಡಾ!! ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಹಾಸನದ ದೊಡ್ಡ ಮಂಡಿಗನಹಳ್ಳಿ , ವಿಜಯನಗರದ ಯುವಕರ ಬಳಗದ ವತಿಯಿಂದ , ಯುವ ಪುನೀತ ಬ್ರಿಗೇಡ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿ 113 ಜನರು ರಕ್ತ ನೀಡಿದ್ದು ಇದನ್ನು ಹಾಸನದ ಸಂಜೀವಿನಿ ರಕ್ತ ನಿಧಿಗೆ ಕಳುಹಿಸಿ ಕೊಡಲಾಯಿತು , ಹಾಗೂ
ಇಂದು ಮಧ್ಯಾಹ್ನ ಒಂದು ಸಾವಿರ ಜನರಿಗೆ ಅನ್ನದಾನ ಕಾರ್ಯಕ್ರಮ ನಡೆಸಿ ದಿ!! ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಸಾರ್ಥಕ ಗೊಳಿಸಿದರು .
ಈ ಸಂದರ್ಭದಲ್ಲಿ ಸ್ಥಳೀಯರಾದ ಚಂದನ್ ಗೌಡ , ಅಮಿತ್ ಗೌಡ , ಅರುಣ್ ಗೌಡ , ಸುನೀಲ್ ಗೌಡ , ದೀಕ್ಷಿತ್ ಇತರರು ಇದ್ದರು
ಇಂತಹ ಸಮಾಜ ಮುಖಿ ಕೆಲಸಗಳು ಮುಂದಿನ ಪೀಳಿಗೆಗೆ ಆದರ್ಶವಾಗಲೆಂದು ಈ ಮೂಲಕ ಹಾಸನ ಜನತೆಗೆ ಸಂದೇಶ ರವಾನಿಸಿದರು