ಕನ್ನಡಿಗರಿಗೂ ರಾಗಿಯಮುದ್ದೆಗೂ ಇರುವ ನಂಟು ಬಹಳ ಭಿನ್ನವಾದದ್ದು. ಕರ್ನಾಟಕದಲ್ಲಿ ರಾಗಿ ಬಹಳ ಹೆಸರು ಹೊಂದಿರುವ ಧಾನ್ಯ.ರಾಗಿ ಧಾನ್ಯ ಬಹಳ ಪೌಷ್ಟಿಕವಾಗಿರುವಂತದ್ದಾಗಿದೆ. ಅದರಲ್ಲೂ ರಾಗಿ ಸಣ್ಣ ಮಕ್ಕಳಿಗೆ ಬಹಳ ಉಪಯೋಗಕಾರಿ ಇದು ಬಹಳ ಸುಲಭವಾಗಿ ಕರಗುವುದರಿಂದ ಮಕ್ಕಳಿಗೆ ಇದನ್ನು ಕೊಟ್ಟರೆ ಅವರು ಬಹಳ ಬಲವಂತರಾಗುತ್ತಾರೆ.
ರಾಗಿಯಲ್ಲಿ ಕಾರ್ಬೊಹೈಡ್ರೇಟ್, ನಾರಿನಾಂಶಗಳು ಹೆಚ್ಚಿವೆ ಹಾಗಾಗಿ ಇದು ಜೀರ್ಣಕ್ರಿಯೆಗೂ ಕೂಡ ಬಹಳ ಸುಲಭ ಯಾರಾದರೂ ತೂಕ ಇಳಿಸಬೇಕೆಂದರೆ ಇದು ಅದಕ್ಕೆ ಹೇಳು ಮಾಡಿಸಿದ ಆಹಾರ.
ಪ್ರಯೋಜನಗಳು:
• ರಕ್ತದೊತ್ತಡವನ್ನು ಕಡಿಮೆ ಮಾಡುವುದರಲ್ಲಿ ಸಹಾಯಕಾರಿ:
ಅಧಿಕ ರಕ್ತದೊತ್ತಡದಿಂದ ನಮ್ಮ ದೇಹಕ್ಕೆ ಬಹಳ ತೊಂದರೆಗಳುಂಟಾಗುತ್ತವೆ.ರಾಗಿ ಪದಾರ್ಥಗಳು ಸೇವಿಸುವುದರಿಂದ ಈ ಸಮಸ್ಯೆಯಿಂದ ನೀವು ಪಾರಾಗಬಹುದು.
• ತೂಕ ಇಳಿಸೋಕೆ ಉಪಯೋಗಕಾರಿ:
ರಾಗಿಯಲ್ಲಿರುವ ಪೋಷಕಾಂಶಗಳು ನಿಧಾನವಾಗಿ ನಮ್ಮ ದೇಹಕ್ಕೆ ಲಭ್ಯವಾಗುವುದರಿಂದ ಹೆಚ್ಚಿನ ಕೊಬ್ಬು ಖರ್ಚಾಗುತ್ತದೆ ಇದರಿಂದ ನಮ್ಮ ಕ್ಯಾಲೋರಿಗಳು ಬಹಳ ನಿಧಾನವಾಗಿ ಲಭ್ಯವಾಗುತ್ತದೆ ಹಾಗಾಗಿ ತೂಕ ಎಣಿಸಲು ಗೋಧಿ ಮತ್ತು ಅಕ್ಕಿ ಪದಾರ್ಥಗಳಿಗಿಂತ ರಾಗಿ ಪದಾರ್ಥಗಳನ್ನು ಸೇವಿಸಿದರೆ ಬಹಳ ಸುಲಭವಾಗಿ ತೂಕವನ್ನು ಕಡಿಮೆಗೊಳಿಸಬಹುದು.
• ಇದರಲ್ಲಿರುವ ಪ್ರೋಟೀನ್ ಅಂಶ ನಮ್ಮ ದೇಹಕ್ಕೆ ಬಹಳ ಮುಖ್ಯ:
ಪ್ರೋಟೀನ್ ನಮ್ಮದೇ ದಿನದ ಚಟುವಟಿಕೆಗಳಿಗೆ ಬಹಳ ಮುಖ್ಯ.ರಾಗಿಯಲ್ಲಿ ಅಧಿಕ ಪ್ರೋಟೀನ್ ಅಡಗಿದೆ. ಮೊಟ್ಟೆ ಅಥವಾ ಮೀನು ಸೇವಿಸದಿರುವವರು ರಾಗಿಯನ್ನು ಸೇವಿಸಿದರೆ ನಮಗೆ ಪ್ರೋಟೀನ್ ಸುಲಭವಾಗಿ ಲಭ್ಯವಾಗುತ್ತದೆ.
• ರಕ್ತದಲ್ಲಿರುವ ಅಧಿಕ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸುತ್ತದೆ:
ರಾಗಿಯಲ್ಲಿ ಅಗತ್ಯವಿರುವ ಪ್ರಮಾಣದಲ್ಲಿ ಸಕ್ಕರೆ ಬಿಡುಗಡೆಯಾಗುತ್ತದೆ ಹಾಗಾಗಿ ಇದು ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸುತ್ತದೆ.ಅಕ್ಕಿ ಮತ್ತು ಗೋಧಿ ಸಕ್ಕರೆ ಅಂಶ ಅತಿ ಶೀಘ್ರದಲ್ಲಿ ರಕ್ತಕ್ಕೆ ಲಭ್ಯವಾಗುವುದರಿಂದ ಇದರ ಬದಲು ರಾಗಿಯನ್ನು ಉಪಯೋಗಿಸುವುದು ಬಹಳ ಒಳ್ಳೆಯದು.
ರಾಗಿಮುದ್ದೆಯನ್ನು ಮುರಿದು ಸೊಪ್ಪಿನ ಸಾರಿನೊಂದಿಗೆ ನಂಚಿಕೊಂಡು ತಿಂದರೆ ಆಹಾ! ಎಂಥ ರುಚಿ. ನಾವು ರಾಗಿಯೊಂದಿಗೆ ರಾಗಿ ದೋಸೆ, ರಾಗಿಮುದ್ದೆ, ರಾಗಿರೊಟ್ಟಿ ಹಲವಾರು ಪದಾರ್ಥಗಳನ್ನು ತಯಾರಿಸಿಕೊಂಡು ರಾಗಿ ಸೇವನೆಯನ್ನು ಮಾಡಬಹುದು.
-ತನ್ವಿ .ಬಿ