ಅರಸೀಕೆರೆ ತುರ್ತು ಪರಿಸ್ಥಿತಿ ತೊಂದರೆ ಸಹಾಯ ಕೇಂದ್ರ ಮಾಹಿತಿ

0

ಅರಸೀಕೆರೆ: ನಗರ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆ ಉಂಟಾಗಿರುವ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರ ಮಾಡಲು ಆರೈಕೆ ಕೇಂದ್ರವನ್ನು ಜೇನುಕಲ್ ನಗರದ ಪರಿಶಿಷ್ಟ ವರ್ಗದ ಪ್ರಿ ಮೆಟ್ರಿಕ್ ಬಾಲಕರ ವಿದ್ಯಾಥಿ೯ ನಿಲಯದಲ್ಲಿ ತೆರೆಯಲಾಗಿರುತ್ತದೆ. ಎಂದು ತಹಶೀಲ್ದಾರ್ ವಿಭಾವಿದ್ಯಾರಾಥೋಡ್ ತಿಳಿಸಿರುತ್ತಾರೆ.

ಯಾವುದೇ ಸಮಯದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆ ಉಂಟಾದಲ್ಲಿ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡುವಂತೆ ಕೋರಿದ ಅವರು ಸಹಾಯವಾಣಿ ಸಂಖ್ಯೆ 9738070918 ಕ್ಕೆ ಕರೆ ಮಾಡಿ ಸಂಪರ್ಕಿಸಲು ತಹಶೀಲ್ದಾರ್ ತಿಳಿಸಿರುತ್ತಾರೆ.

ತುರ್ತು ಪರಿಸ್ಥಿತಿ ಸಹಾಯಕ್ಕಾಗಿ: ಪ್ರಭಾರಿ ಕಂದಾಯ ನಿರೀಕ್ಷಕರು ಶಿವಾನಂದ್ ನಾಯ್ಕ ಅರಸೀಕೆರೆ 9738070918

LEAVE A REPLY

Please enter your comment!
Please enter your name here