500 ಕೋಟಿ ಅನುದಾನ: ಶಾಸಕ ಮನವಿ

0

ಸಕಲೇಶಪುರ: ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ಶೇ.90 ಮುಗಿದಿದ್ದು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಉಪ ಮುಖ್ಯಮಂತ್ರಿ ಬೃಹತ್‌ ಮತ್ತು ಮಧ್ಯಮ ನೀರಾವರಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್‌ಗೆ ಶಾಸಕ ಸಿಮೆಂಟ್ ಮಂಜುನಾಥ್ ಮನವಿ ಸಲ್ಲಿಸಿದ್ದಾರೆ.
ಗುರುವಾರ ಡಿಸಿಎಂ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ಶಾಸಕರು, ರಾಜ್ಯ ಸರ್ಕಾರದ ಪ್ರತಿಷ್ಠಿತ ಯೋಜನೆಗಳಲ್ಲಿ ಎತ್ತಿನ ಹೊಳೆ ತಿರುವು ಯೋಜನೆ ಒಂದಾಗಿದೆ.
ಸಕಲೇಶಪುರ, ಅಲೂರು ಕಡ್ಡಾಯ ಹಾಗೂ ಹಾಸನ ಕ್ಷೇತ್ರದ 7 ಗ್ರಾಪಂ ವ್ಯಾಪ್ತಿಯಲ್ಲಿ ಸದರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆ ಜಾರಿಯಾಗುತ್ತಿರುವ ಭಾಷಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಅಪಾರವಾಗಿದೆ ಎಂದರು.

ಎತ್ತಿನಹೊಳೆ ಯೋಜನೆ ಕಾರ್ಯಾರಂಭ ವಾಗುವ ವೇಳೆ ಸಕಲೇಶಪುರ ತಾಲೂಕಿಗೆ ಅಗತ್ಯ ಸಮಗ್ರ ಸೌಕರ್ಯ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ತಾಲ್ಲೂಕಿನ ಜನತೆ
ಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಯೋಜನೆ ಕಾಮಗಾರಿ ತಾಲ್ಲೂಕು ಭಾಗದಲ್ಲಿ ಶೇ.90 ರಷ್ಟು ಮುಕ್ತಾಯಗೊಂಡು, ಟ್ರಯಲ್ ರನ್ ಹಂತಕ್ಕೆ ತಲುಪಿದ್ದರೂ ಇರುವರೆಗೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಮನವರಿಕೆ ಮಾಡಿದರು.

ಇನ್ನೂ ಸಾಕಷ್ಟು ಕಡೆಗಳಲ್ಲಿ ಕುಡಿಯುವ ನೀರು, ರಸ್ತೆಗಳ ಸಮಸ್ಯೆಗಳಿವೆ. ಆದ್ದರಿಂದ ಸರ್ಕಾರ ಯೋಜನೆ ಆರಂಭದ ವೇಳೆ ನೀಡಿದ್ದ ಭರವಸೆಯಂತೆ ತಾಲ್ಲೂಕಿನ ಜನರಿಗೆ ನೀಡಿದ್ದ ಬೇಡಿಕೆ ಸಂಪೂರ್ಣ ಈಡೇರುವವರೆಗೂ ಟ್ರಯಲ್ ರನ್‌ ಅವಕಾಶ ನೀಡುವುದಿಲ್ಲ ಎಂದು ಮಂಜು ಅವರು ತಿಳಿಸಿದ್ದು, ತಾಲ್ಲೂಕಿನ ಜನತೆ ಕೂಡ ಅಗತ್ಯವಾಗಿ ಬೇಕಿರುವ ಕುಡಿಯುವ ನೀರಿನ ಸೌಲಭ್ಯ, ರಸ್ತೆಗಳ ನಿರ್ಮಾಣ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊಟ್ಟರು. ಎತ್ತಿನಹೊಳೆ ಯೋಜನೆ ಕಾರ್ಯಾ `ರಂಭವಾಗುವ ವೇಳೆ ಸಕಲೇಶಪುರ ತಾಲ್ಲೂಕಿಗೆ ಅಗತ್ಯ ಸಮಗ್ರ ಸೌಕರ್ಯ ಕಲ್ಪಿಸುವುದಾಗಿ ಸರ್ಕಾರ ಹಿಂದೆ ಭರವಸೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಯೋಜನೆ ಕಾಮಗಾರಿ ತಾಲೂಕು ಭಾಗದಲ್ಲಿ 3.90 ಟ್ರಯಲ್ ಕಾರ್ಯಗಳು ನಡೆದಿಲ್ಲ. ಇನ್ನೂ ಸಾಕಷ್ಟು ಕಡೆಗಳಲ್ಲಿ ಮುಕ್ತಾಯಗೊಂಡು, ಇರುವರೆಗೂ ಹಂತಕ್ಕೆ ತಲುಪಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕುಡಿಯುವ ನೀರು, ರಸ್ತೆಗಳ ಸಮಸ್ಯೆಗಳಿವೆ. ಆದ್ದರಿಂದ ಸರ್ಕಾರ ಯೋಜನೆ ಆರಂಭದ ವೇಳೆ ನೀಡಿದ ಭರವಸೆಯಂತೆ ತಾಲೂಕಿನ ಜನರಿಗೆ ನೀಡಿದ್ದ ಬೇಡಿಕೆ ಸಂಪೂರ್ಣ ಈಡೇರುವವರೆಗೂ ಟ್ರಯಲ್ ರನ್ ಗೆ ಅವಕಾಶ ನೀಡುವುದಿಲ್ಲ ಎಂದು ಸಿಮೆಂಟ್ ತಿಳಿಸಿದರು. ಮಂಜು ಸ್ಪಷ್ಟವಾಗಿ ತಾಲೂಕಿನ ಜನತೆ ಕೂಡ ಅಗತ್ಯವಾಗಿ ಬೇಕಿರುವ ಕುಡಿಯುವ ಆಗಬೇಕು.

ಆದ್ದರಿಂದ ತಕ್ಷಣಕ್ಕೆ ಯೋಜನೆಯ ಅನುದಾನದಲ್ಲಿ ಕನಿಷ್ಠ 500 ಕೋಟಿ ರೂ. ಬಿಡುಗಡೆ ಮಾಡುವಂತೆ ಡಿ.ಕೆ ಶಿವಕುಮಾರ್ ರವರಿಗೆ ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಉಪ ಮುಖ್ಯಮಂತ್ರಿಗಳು ಕೂಡಲೇ ಅಧಿಕಾರಿಗಳೊಂದಿಗೆ ನಡೆಸಿ ಅನುದಾನ ಚರ್ಚೆ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಶಾಸಕರಿಗೆ ಭರವಸೆ ಎನ್ನಲಾಗಿದೆ.

“ರಾಜ್ಯದ ಉಪ ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕುರಿತು ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು. ಮಾನ್ಯ ಉಪ ಮುಖ್ಯಮಂತ್ರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು ” – ಸಿಮೆಂಟ್ ಮಂಜು

ಇತ್ತೀಚೆಗೆ ತಾಲೂಕಿಗೆ ಭೇಟಿ ನೀಡಿದ್ದ ಎತ್ತಿನಹೊಳೆ ಯೋಜನೆಯ ನೂತನ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಅವರಿಗೆ ಟ್ರಯಲ್ ರನ್ ನಡೆಸುವ ಮೊದಲು ಮೂಲಭೂತ ಸೌಕರ್ಯ ಒದಗಿಸಲು ಅನುದಾನ ನೀಡುವಂತೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಶಾಸಕರು ವಿವರಿಸಿದ್ದರು.

LEAVE A REPLY

Please enter your comment!
Please enter your name here