ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ 200 ವಿದ್ಯಾ ಸೇತು ಪುಸ್ತಕಗಳನ್ನು ವಿತರಿಸಲಾಯಿತು

0

*ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಜೋನ್ 9 R I ಡಿಸ್ಟ್ರಿಕ್ 3182 ವತಿಯಿಂದ ಜಿಲ್ಲೆಯಲ್ಲಿ ಪ್ರಥಮವಾಗಿ ರೋಟರಿಯ ಶೈಕ್ಷಣಿಕ ಕ್ಷೇತ್ರದ ಅಸ್ತ್ರವಾದ ವಿದ್ಯಾ ಸೇತು ಪುಸ್ತಕವನ್ನು ಹಾಸನ ತಾಲೂಕು ದೊಡ್ಡಕೊಂಡಗುಳ ಮತ್ತು ಸೋಮನಹಳ್ಳಿ ಕಾವಲು ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ* ಪೋಷಕರು ಮತ್ತು ಶಾಲಾ ಶಿಕ್ಷಕರೊಂದಿಗೆ ವಿತರಿಸಲಾಯಿತು, ಸುಮಾರು 200 ಪುಸ್ತಕಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ರೋಟರಿ ರಾಯಲ್ಸ್ ನ ಅಧ್ಯಕ್ಷರಾದ ಎಸ್ ಆರ್ ಮನು ರವರು ಮತ್ತು ಜಿಲ್ಲಾ ಅಸಿಸ್ಟೆಂಟ್ ಗೌರ್ನರ್ ಪ್ರದೀಪ್ ರವರು ಹಾಗೂ ಕ್ಲಬ್ಬಿನ ಸದಸ್ಯರುಗಳು ಹಾಜರಿದ್ದರು ಪುಸ್ತಕದ ಬಗ್ಗೆ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮೆಚ್ಚಿನ ನುಡಿಗಳನ್ನಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಅಧ್ಯಕ್ಷರಾದ ಮನು ರವರು ವಿದ್ಯಾ ಸೇತು ಪುಸ್ತಕದ ಮಹತ್ವವನ್ನು ತಿಳಿಸಿದರು. ಜಿಲ್ಲಾ ಅಸಿಸ್ಟೆಂಟ್ ಪ್ರದೀಪ್ ರವರು ಪುಸ್ತಕವನ್ನ ಅಚ್ಚುಕಟ್ಟಾಗಿ ಇಟ್ಟುಕೊಂಡು ಶಾಲೆಗೆ ಹೆಚ್ಚು ಅಂಕ ಗಳಿಸಿ ಕೀರ್ತಿ ತರಬೇಕು ಎಂದು ತಿಳಿಸಿದರು ಮತ್ತು ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿದ ನಂತರ ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪುಸ್ತಕವನ್ನು ಇಟ್ಟುಕೊಳ್ಳಬೇಕೆಂದು ಕರೆ ನೀಡಿದರು

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯ ಶಿಕ್ಷಕರಾದ ಸಾವಿತ್ರಿಬಾಯಿ ರವರು ರೋಟರಿ ರಾಯಲ್ ಸೇವಾ ಗುಣವನ್ನು ಕೊಂಡಾಡಿದರು.

LEAVE A REPLY

Please enter your comment!
Please enter your name here