ಅರಸೀಕೆರೆ ರಸ್ತೆ ದುರಂತ , ಗಣ್ಯರಿಂದ ಸಂತಾಪ , ಮುಗಿಲು‌ ಮುಟ್ಟಿದ ಗ್ರಾಮಸ್ಥರ ಆಕ್ರಂದನ

0

ಹಾಸನ/ಅರಸೀಕೆರೆ : ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಾಂಧಿನಗರ ಬಳಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟ ಪ್ರಕರಣದಲ್ಲಿ ಘಟನೆಯ ಹಿನ್ನೆಲೆ ಹುಡುಕುವಾಗ ರಾಂಗ್ ರೂಟ್ನಲ್ಲಿ ಬಂದ ಹಾಲಿನ ಲಾರಿಯೇ ಮುಖ್ಯ ದೋಷಿ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ . ಲಾರಿ ಚಾಲಕ ಮಿಲ್ಕ್ ಟ್ಯಾಂಕರ್ ಅನ್ನು ರಾಂಗ್ ರೂಟ್ನಲ್ಲಿ ತಂದಿದ್ದರಿಂದ ಟೆಂಪೊ ಹಾಲಿನ ಲಾರಿ, ಸರ್ಕಾರಿ ಬಸ್ಗೆ ಡಿಕ್ಕಿ ಹೊಡೆಯಿತು. ಜಿಗ್-ಜಾಗ್ ರೀತಿಯಲ್ಲಿ ಟೆಂಪೊದ ಹಿಂದೆ ಮತ್ತು ಮುಂದೆ ಹಾನಿಯಾಯಿತು.

ಹೀಗಾಗಿಯೇ ಸಾವಿನ ಸಂಖ್ಯೆ ಹೆಚ್ಚಾಯಿತು. ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಹಾಗೂ ಟೆಂಪೊ ಡಿಕ್ಕಿಯಾಗಿದ್ದರಿಂದ ಬಸ್ನಲ್ಲಿದ್ದ ಹಲವರಿಗೂ ಗಾಯಗಳಾಗಿವೆ ಎಂದು ಬಸ್ನಲ್ಲಿದ್ದ ಪ್ರಯಾಣಿಕ ಮತ್ತು ಅಪಘಾತದ ಪ್ರತ್ಯಕ್ಷದರ್ಶಿ ಜಾವಗಲ್ ಗ್ರಾಮದ ಯತೀಶ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ . ಅಪಘಾತಕ್ಕೀಡಾದ ಟಿಟಿ ವಾಹನದಲ್ಲಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದರು. ನಿನ್ನೆ ( 15Oct 2022 ಶನಿವಾರ )ರಾತ್ರಿ 10.50 ರ ವೇಳೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು ., ಅರಸೀಕೆರೆ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇವರಲ್ಲಿ ನಾಲ್ವರು ಪುಟ್ಟ ಮಕ್ಕಳು ಮೃತಪಟ್ಟಿರುವುದು

ಎಂಥವರ ಮನಸ್ಸನ್ನೂ ಕರಗಿಸುತ್ತಿದೆ ನಿಜ . ಪುಟ್ಟ ಮಕ್ಕಳ ಮೃತದೇಹ ಕಂಡ ನೆಂಟರಲ್ಲದೆ ಗ್ರಾಮಸ್ಥರು ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ನಿನ್ನೆ-ಮೊನ್ನೆಯವರೆಗೂ ಮನೆಯಂಗಳದಲ್ಲಿ ಆಡಿಕೊಂಡಿದ್ದ ಪುಟಾಣಿಗಳು ಎರಡು ದಿನಗಳ ಹಿಂದಷ್ಟೇ ಹಬ್ಬ ಮುಗಿಸಿ ಧರ್ಮಸ್ಥಳಕ್ಕೆ ಹೋಗಿದ್ದರು. ಈಗ ನೋಡಿದರೆ

ಹೆಣವಾಗಿ ವಾಪಸ್ ಬಂದಿದ್ದಾರೆ ಎಂದರೆ ನಂಬಲು ಸಾಧ್ಯತೆ ಎಂಬಂತಿದೆ ., ಅರಸೀಕೆರೆ ತಾಲ್ಲೂಕಿನ ಗಾಂಧಿನಗರ ಬಳಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟ ಪ್ರಕರಣದಲ್ಲಿ ರಾಂಗ್ ರೂಟ್ನಲ್ಲಿ ಬಂದ ಹಾಲಿನ ಲಾರಿಯೇ ಮುಖ್ಯ ದೋಷಿ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಲಾರಿ ಚಾಲಕ ಮಿಲ್ಕ್ ಟ್ಯಾಂಕರ್ ಅನ್ನು ರಾಂಗ್ ರೂಟ್ನಲ್ಲಿ ತಂದಿದ್ದರಿಂದ ಟೆಂಪೊ ಹಾಲಿನ ಲಾರಿ, ಸರ್ಕಾರಿ ಬಸ್ಗೆ ಡಿಕ್ಕಿ ಹೊಡೆಯಿತು. ಜಿಗ್-ಜಾಗ್ ರೀತಿಯಲ್ಲಿ ಟೆಂಪೊದ ಹಿಂದೆ ಮತ್ತು ಮುಂದೆ ಹಾನಿಯಾಯಿತು. ಹೀಗಾಗಿಯೇ ಸಾವಿನ ಸಂಖ್ಯೆ ಹೆಚ್ಚಾಯಿತು. ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಹಾಗೂ ಟೆಂಪೊ ಡಿಕ್ಕಿಯಾಗಿದ್ದರಿಂದ ಬಸ್ನಲ್ಲಿದ್ದ ಹಲವರಿಗೂ ಗಾಯಗಳಾಗಿವೆ ಎಂದು ಬಸ್ನಲ್ಲಿದ್ದ ಪ್ರಯಾಣಿಕ ಮತ್ತು ಅಪಘಾತದ ಪ್ರತ್ಯಕ್ಷದರ್ಶಿ ಜಾವಗಲ್ ಗ್ರಾಮದ ಯತೀಶ್ ಪ್ರತಿಕ್ರಿಯಿಸಿದರು. ಅಪಘಾತಕ್ಕೀಡಾದ ಟಿಟಿ ವಾಹನದಲ್ಲಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದರು. ನಿನ್ನೆ ರಾತ್ರಿ 10.50 ರ ವೇಳೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದರು. , ಅರಸೀಕೆರೆ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಾಲ್ವರು ಪುಟ್ಟ ಮಕ್ಕಳು ಮೃತಪಟ್ಟಿರುವುದು ಎಂಥವರ ಮನಸ್ಸನ್ನೂ ಕರಗಿಸುತ್ತಿದೆ. ಪುಟ್ಟ ಮಕ್ಕಳ ಮೃತದೇಹ ಕಂಡವರು ಬಿಕ್ಕಿಬಿಕ್ಕಿ ಅಳುತ್ತದ್ದಾರೆ. ನಿನ್ನೆ-ಮೊನ್ನೆಯವರೆಗೂ ಮನೆಯಂಗಳದಲ್ಲಿ ಆಡಿಕೊಂಡಿದ್ದ ಪುಟಾಣಿಗಳು ಎರಡು ದಿನಗಳ ಹಿಂದಷ್ಟೇ ಹಬ್ಬ ಮುಗಿಸಿ ಧರ್ಮಸ್ಥಳಕ್ಕೆ ಹೋಗಿದ್ದರು. ಈಗ ನೋಡಿದರೆ ಹೆಣಗವಾಗಿ ವಾಪಸ್ ಬಂದಿದ್ದಾರೆ ಎಂದು ಸಂಬಂಧಿಕರು ಒಂದೇ ಸಮನೆ ಅಳುತ್ತಿದ್ದಾರೆ. , ಅಪಘಾತದಲ್ಲಿ ಮೃತಪಟ್ಟ 9 ಜನರ ಪೈಕಿ 7 ಮಂದಿ ಸಾಲಾಪುರ ಗ್ರಾಮಕ್ಕೆ ಸೇರಿದವರು. ಇತರ ಇಬ್ಬರು ದೊಡ್ಡೇನಹಳ್ಳಿ ಗ್ರಾಮದವರು. ಧರ್ಮಸ್ಥಳ, ಸುಬ್ರಹ್ಮಣ್ಯ, ಹಾಸನಾಂಬೆ ದರ್ಶನ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ದೊಡ್ಡೇನಹಳ್ಳಿಯ ಮಕ್ಕಳಾದ ಧ್ರುವ (2) ಹಾಗೂ ತನ್ಮಯ್ (10), ಸಾಲಾಪುರದ ಲೀಲಾವತಿ (50), ಚೈತ್ರಾ (33), ಸಮರ್ಥ (10) ಡಿಂಪಿ (12), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತರು. ,

ದಸರಾ ರಜೆಯ ಹಿನ್ನೆಲೆಯಲ್ಲಿ ಅಣ್ಣ-ತಮ್ಮಂದಿರ ಕುಟುಂಬದ ಸದಸ್ಯರು ಮೊದಲೇ ಮಾತನಾಡಿದಂತೆ  ಒಂದೇ ವಾಹನದಲ್ಲಿ ಖುಷಿಯಾಗಿ ಧಾರ್ಮಿಕ ಪ್ರವಾಸ ಹೋಗಿದ್ದರು. ಅಪಘಾತದಲ್ಲಿ ದೊಡ್ಡಯ್ಯ ಹಾಗೂ ಪತ್ನಿ ಭಾರತಿ ಮೃತಪಟ್ಟಿದ್ದಾರೆ. ದೊಡ್ಡಯ್ಯ ಅವರ ಸಹೋದರ ರಮೇಶ್, ಅವರ ಪತ್ನಿ ಲೀಲಾವತಿ ಮತ್ತು ಮೊಮ್ಮಕ್ಕಳಾದ ಧ್ರುವ ಮತ್ತು ತನ್ಮಯ್ ಸಹ ಮೃತಪಟ್ಟಿದ್ದಾರೆ. ಈ ಇಬ್ಬರೂ ಮಕ್ಕಳ ತಾಯಿ ಮಂಜುಳಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟಿಟಿ ವಾಹನ ಚಲಾಯಿಸುತ್ತಿದ್ದ ದೊಡ್ಡಯ್ಯ ಅವರ ಪುತ್ರ ಶಶಿಕುಮಾರ್ ಸಹ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .,  ದೊಡ್ಡಯ್ಯ ಅವರ ಮತ್ತೊಬ್ಬ ಸಹೋದರ ಕುಮಾರಸ್ವಾಮಿ ಅವರ ಪುತ್ರಿ ಚೈತ್ರಾ ಮತ್ತು

ಚೈತ್ರಾ ಅವರ ಮಕ್ಕಳಾದ ಸಮರ್ಥ ಎಸ್.ರಾಯ್ ಮತ್ತು ಸೃಷ್ಟಿ ಕೂಡ ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಅವರ ಬಾವಮೈದುನನ ಮಗಳು ವಂದನಾ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಸಾಲಾಪುರದ ಏಳು ಹಾಗೂ ದೊಡ್ಡೇನಹಳ್ಳಿಯ ಇಬ್ಬರು ಸೇರಿದ್ದಾರೆ. ರಮೇಶ್ ಪುತ್ರಿ ಮಂಜುಳಾರನ್ನು ದೊಡ್ಡೇನಹಳ್ಳಿಯ ಸಂತೋಷ ಜೊತೆ ಮದುವೆ ಮಾಡಿಕೊಡಲಾಗಿತ್ತು., ತಾಯಿ ಜೊತೆ ಮಕ್ಕಳೊಂದಿಗೆ ಧಾರ್ಮಿಕ ಕ್ಷೇತ್ರದ ದರ್ಶನಕ್ಕೆ ಮಂಜುಳಾ ತೆರಳಿದ್ದರು. ಅಪಘಾತದಲ್ಲಿ ಮಂಜುಳಾರ ತಾಯಿ ಹಾಗೂ ಮಕ್ಕಳು ಸಾವನ್ನಪ್ಪಿದ್ದಾರೆ. ಕುಮಾರಸ್ವಾಮಿ ಪುತ್ರಿ ಚೈತ್ರಾ ಅವರ ಪತಿ ಶ್ರೀನಿವಾಸ್ ಎರಡು ವರ್ಷಗಳ ಹಿಂದಷ್ಟೇ ಕೊವಿಡ್ನಿಂದ ಮೃತಪಟ್ಟಿದ್ದರು. ಸಾರಿಗೆ ಇಲಾಖೆಯಲ್ಲಿ ಶ್ರೀನಿವಾಸ್ ಅವರ ಕೆಲಸವನ್ನು ಅನುಕಂಪದ ಆಧಾರದ ಮೇಲೆ ಚೈತ್ರಾ ಅವರಿಗೆ ಕೊಡಲಾಗಿತ್ತು. ಮುಂದಿನ ವಾರ ಅವರು ಕೆಲಸಕ್ಕೆ ಹಾಜರಾಗಬೇಕಿತ್ತು. ಆದರೆ

ಅದಕ್ಕೆ ಮೊದಲೇ ಅವರು ಮಕ್ಕಳ ಸಹಿತ ಮೃತಪಟ್ಟಿದ್ದು ಇಂದು ಕುಟುಂಬದ ಹಲವರನ್ನು ಮಣ್ಣು ಮಾಡುವುದೆಂದರೆ ವಿಧಿ ಅದೆಷ್ಟು ಕ್ರೂರ ಅಲ್ಲವೇ ?.,

ಅಪಘಾತದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದ ವ್ಯಕ್ತಪಡಿಸಿದ್ದು  ಟ್ವೀಟ್ ಇಂತಿದೆ :

ಒಂದು ದೊಡ್ಡ ಸುಖಿ ಕುಟುಂಬವೇ ಹೀಗೆ ದಿಡೀರ್ ಎಂದು ಕಣ್ಮರೆಯಾಗಿರುವುದು ಸಂಬಂಧಿಕರು, ಗೆಳೆಯರು, ಗ್ರಾಮಸ್ಥರಲ್ಲಿ ಯಾವ ರೀತಿ ಆಘಾತ ಉಂಟು ಮಾಡಿದೆ ಎಂದರೆ … ಅಪಘಾತದ ಸ್ಥಳದಲ್ಲಿ ಮೃತರ ಸಂಬಂಧಿ ರವಿಕುಮಾರ್ ಹೀಗೆಂದರು :

, ” ಇವರೆಲ್ಲರೂ ಶುಕ್ರವಾರ ಅಂದರೆ ಅಕ್ಟೋಬರ್ 14 ಶುಕ್ರವಾರ ಹಿರಿಯರ ಪೂಜೆ ಮುಗಿಸಿ ಶನಿವಾರ ಬೆಳಿಗ್ಗೆ ಧರ್ಮಸ್ಥಳಕ್ಕೆ ಹೋದರು. ಹೋಗುವ ಮೊದಲು ಮನೆಯ ಕೆಲಸಗಳ ಮುಗಿಸಿ, ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಅಪಘಾತದಲ್ಲಿ ಸಾವನ್ನಪ್ಪಿರುವ ಚೈತ್ರಾ ಹೊರಡುವ ಮೊದಲು ತನ್ನ ಗಂಡ, ಅಪ್ಪ, ಅಜ್ಜ, ಅಜ್ಜಿ ಎಲ್ಲರಿಗೂ ಪೂಜೆ ಮಾಡಿ ಹೋದಳು. ಬರುವಾಗ ಹೀಗೆ ಆಗುತ್ತೆ ಎಂದು ಯಾರಿಗೆ ತಾನೇ ಗೊತ್ತು ಎಂದು ಅವರು ಅಳುತ್ತ ಬೇಸರ ವ್ಯಕ್ತಪಡಿಸಿದರು . ,‌ ” ಯಾವ ದೇವರಿಗೂ ಕಣ್ಣಿಲ್ಲ ಸಾರ್. ದೇವರನ್ನು ದೂರೋದೋ ಅಥವಾ ಗ್ರಹಚಾರವನ್ನ ದೂರೋದೋ, ಏನು ಮಾಡೋದು ” ಎಂದರು ಅಳಲು ಆರಂಭಿಸಿದರು. ‘ನಾವೆಲ್ಲರೂ ಒಂದೇ ಕುಟುಂಬದ ರಕ್ತ ಸಂಬಂಧಿಗಳು. ಸಮರ್ಥನಿಗೆ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಟ್ಟಿದ್ದೇವು. ನನ್ನ ತಮ್ಮ ಎರಡು ವರ್ಷದ ಹಿಂದೆ ಕೋವಿಡ್ನಿಂದ ತೀರಿಕೊಂಡಿದ್ದ. ಇವತ್ತು ಅವನ ಮಕ್ಕಳು ತೀರಿಕೊಂಡಿದ್ದಾರೆ. ಇಂಥ ಪರಿಸ್ಥಿತಿ ಯಾವ ಕುಟುಂಬಕ್ಕೂ ಬರಬಾರದು‌’ ಎಂದು ಅವರು ಅಳಲು ಆರಂಭಿಸಿದರು., ಭೀಕರ ಸರಣಿ ಅಪಘಾತ ಕಂಡು ಸುತ್ತಮುತ್ತಲ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮುಂಜಾನೆಯಿಂದಲೇ

ಸಾವಿರಾರು ಜನರು ಸ್ಥಳಕ್ಕೆ ದೌಡಾಯಿಸಿದ್ದು ಭೀಕರ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಿಲ್ಲ. ಸರಣಿ ಅಪಘಾತಕ್ಕೆ ಈ ನಿರ್ಲಕ್ಷ್ಯವೂ ಕಾರಣ ಎಂದು ಸ್ಥಳದಲ್ಲಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. , ಅಘತಾತದ ತೀವ್ರತೆಗೆ ಟಿಟಿ ವಾಹನವು ಗುರುತು ಸಿಗದಂತೆ ಅಪ್ಪಚ್ಚಿಯಾಗಿದ್ದು . ಎದುರು ಬರುತ್ತಿದ್ದ ಹಾಲಿನ ಟ್ಯಾಂಕರ್ಗೆ ಟಿಟಿ ಮೊದಲು ಡಿಕ್ಕಿ ಹೊಡೆಯಿತು. ಅದಕ್ಕೆ ಹಿಂದಿನಿಂದ ಬಂದ್ KSRTC ಬಸ್ ಸಹ ಗುದ್ದಿದಾಗ ನಡುವೆ ಸಿಲುಕಿದ ಟಿಟಿ ನಜ್ಜುಗುಜ್ಜಾಗಿದೆ.

ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ 14 ಮಂದಿ ಇನ್ನೆರೆಡು ಕಿಲೋಮೀಟರ್ ಸಂಚರಿಸಿದ್ದರೆ ಇವರು ಸ್ವಗ್ರಾಮ ಸಾಲಾಪುರ ತಲುಪುತ್ತಿದ್ದರು ಎಂದರೆ ಸಾವು ಯಾವ ರೀತಿ ಅಟ್ಟಾಡಿಸಿದೆ ಎನಿಸುತ್ತದೆ .,

ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ. ಅಪಘಾತದಲ್ಲಿ ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದರೆ , ಹಾಸನ ಲೋಕಸಭಾ ಕ್ಷೇತ್ರದ ಸದಸ್ಯರು ಆದ ಪ್ರಜ್ವಲ್ ರೇವಣ್ಣ ಸಂತಾಪ ವ್ಯಕ್ತಪಡಿಸಿದ್ದು ಹೀಗೆ :

ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿ ಗಾಂಧಿ ನಗರ ಗ್ರಾಮದ ಬಳಿ ತಡರಾತ್ರಿ KSRTC ಬಸ್, TT ವಾಹನ ಹಾಗೂ ಹಾಲಿನ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 5 ಮಕ್ಕಳು ಸೇರಿದಂತೆ 9 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ವಿಷಯ ತಿಳಿದು ತೀವ್ರ ದುಃಖವಾಗಿದೆ.

TT ವಾಹನದಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿ ಅಲ್ಲಿಂದ ಹಾಸನಾಂಬೆಯ ದರ್ಶನ ಪಡೆದು ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಹಾಗೂ ಗಾಯಾಳುಗಳೆಲ್ಲರೂ ಶೀಘ್ರವೇ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಜಿಲ್ಲಾಡಳಿತ ಆಸ್ಪತ್ರೆಯಲ್ಲಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಶೀಘ್ರವಾಗಿ ಮುಗಿಸಿ ಸಂಬಂಧಿಕರಿಗೆ ಹಸ್ತಾಂತರ ಮಾಡಲು ಜಿಲ್ಲಾ ವೈಧ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ.

ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಹಾಗೂ ಅಗತ್ಯ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ವೈದ್ಯರೊಂದಿಗೆ ಚರ್ಚಿಸಿರುತ್ತೇನೆ. ಮೃತರ ಕುಟುಂಬಕ್ಕೆ ಹಾಗೂ ಗಾಯಳುಗಳಿಗೆ ರಾಜ್ಯ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತೇನೆ ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here