15 ವರ್ಷಗಳ ನಂತರ ಸೀಗೇನಾಡಿನ ದೇವಿರಮ್ಮನಕೆರೆಯು ತುಂಬಿ ತುಳುಕಾಡುತ್ತಿದೆ
ಸೀಗೆರೆಕೆರೆಯೋ ಕಳೆದ 15 ವರ್ಷಗಳಿಂದ ಎಷ್ಟೇ ಮಳೆ ಬಂದರೂ ಭರ್ತಿಯಾಗಿರಲಿಲ್ಲ ಈ ವರ್ಷ ಭರ್ತಿಯಾಗಿದೆ ಸುತ್ತಮುತ್ತ ಹಳ್ಳಿಯ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ ಅತಿ ಹೆಚ್ಚಾಗಿ ಸೀಗೆ ನಾಡಿನ ಜನರಿಗೆ ಸಂತೋಷ ಆನಂದಾಯಕವಾಗಿ ಖುಷಿ ತಂದುಕೊಟ್ಟಿದೆ
ಕಳೆದ 15 ವರ್ಷಗಳ ಹಿಂದೆ ಒಂದೇ ರಾತ್ರಿಗೆ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಹೋಗಿತ್ತು ಅದೇ ರೀತಿ 15 ವರ್ಷಗಳ ನಂತರ ಮತ್ತೆ ಸಾಬೀತಾಗಿದೆ ಮತ್ತೆ ಈ ಬಾರಿ ಕೋಡಿ ಹೋಗುತ್ತಿದೆ








ಸುತ್ತಮುತ್ತ ಹಳ್ಳಿಯ ಜನರ ಆಸೆ ಏನಂದರೆ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ಅವರ ಹಾಗೂ ಶ್ರೀ ದೇವಿರಮ್ಮನವರ ಆಶೀರ್ವಾದ ದಿಂದ ಪ್ರತಿ ವರ್ಷವೂ ಇದೇ ರೀತಿ ಮಳೆ ಚೆನ್ನಾಗಿ ಆಗಿ ಬೆಳೆ ಚೆನ್ನಾಗಿ ಬರಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ
ಇದು ಹಾಸನ ಮತ್ತು ಹಳೇಬೀಡು ಹೋಗುವ ಮಾರ್ಗ ಮಧ್ಯೆ ಸಿಗುವಂತ ಊರು ಹಾಸನದಿಂದ ಬರಿ 12 ಕಿ.ಮೀ ದೂರದಲ್ಲಿ ಇದೆ ಸೀಗೆಗುಡ್ಡಕ್ಕೆ ಹೋಗುವ ಪ್ರವಾಸಿಗರಿಗೆ ಒಳ್ಳೆಯ ದಾರಿಯಾಗಿದೆ ಈ ಮಾರ್ಗದಲ್ಲಿ ಸಂಚರಿಸಿದರೇ ಛಾಯಾಚಿತ್ರಕರಿಗೆ ಛಾಯಾಗ್ರಾಣ ಮಾಡಲು ಒಳ್ಳೆಯ ಸ್ಥಳವಾಗಿದೆ