ಸಕಲೇಶಪುರ: ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ನಾಳೆ ಅ.1

0

ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಹಾಗೂ ಇದರ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಅಕ್ಟೋಬರ್ 1 ರಂದು ತಾಲ್ಲೂಕಿನ ಆನೇಮಹಲ್ ಗ್ರಾಮದಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ

9ನೇ ವರ್ಷದ ಆಚರಣೆಯನ್ನು ಆನೇಮಹಲ್‌ ಸುರಭಿ ನೆಕ್ಟ್‌ ಹೋಟೆಲ್‌ ಮುಂಭಾಗ ಮಾಡಲಾಗುತ್ತಿದೆ. ನಮ್ಮ ರಾಷ್ಟ್ರದ ರಪ್ತು ಮಾರುಕಟ್ಟೆಯ ವಾಣಿಜ್ಯ ವ್ಯವಹಾರಗಳಲ್ಲಿ ಹೆಚ್ಚು ಆದಾಯ ತಂದುಕೊಡುವ ಕಾಫಿ, ಈ ಭಾಗದ ಜನರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕಾಫಿ ಬೆಳೆಯನ್ನು ನಂಬಿಕೊಂಡು ಲಕ್ಷಾಂತರ ಬೆಳೆಗಾರರು, ಕಾರ್ಮಿಕರ ಕುಟುಂಬಗಳಿವೆ. ಆದ್ದರಿಂದ ಕಾಫಿ ನಡೆದು ಬಂದ ಹಾದಿ, ಕಾಫಿ ಬೆಳೆಯಿಂದ ಪರಿಸರಕ್ಕೆ ಕೊಡುಗೆ, ಕಾಫಿಯಿಂದ ಮನುಷ್ಯದ ಆರೋಗ್ಯ, ಕಾಫಿ ಕೃಷಿ, ಸಂಸ್ಕರಣೆ, ಮಾರುಕಟ್ಟೆ, ಸಂಶೋಧನೆ ಈ ಎಲ್ಲಾ ವಿಷಯಗಳ ಮುಕ್ತವಾದ ಚರ್ಚೆ, ಮಾಹಿತಿ ಹಂಚಿಕೆ ನಡೆಯಲಿದೆ.

ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ. ಸಂದೇಶ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಸಿಮೆಂಟ್ ಮಂಜು, ಹೆಚ್‌.ಕೆ. ಸುರೇಶ್‌, ಎ. ಮಂಜು, ಗಾಯಕ ಚಂದನ್‌ ಶೆಟ್ಟಿ, ನಿವೇದಿತಾ ಚಂದನ್‌ಶೆಟ್ಟಿ ಹಾಗೂ ಕಿರುತೆರೆ ನಟ ನಟಿಯರಾದ ಚಂದನ್‌ ಹಾಗೂ ನೇಹಾ ಗೌಡ ಚಂದನ್‌ ಭಾಗವಹಿಸಲಿದ್ದಾರೆ

LEAVE A REPLY

Please enter your comment!
Please enter your name here