ಸಕಲೇಶಪುರ ರಸ್ತೆ ಅಗಲೀಕರಣ ಅಲ್ಲಿ ಕ್ಯಾಂಟಿನ್ ಜೀವನ ನಡೆಸುತ್ತಿದ್ದವರಿಗೆ ಬೇರೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ

0

ಸಕಲೇಶ್ವರಸ್ವಾಮಿ ಮೊಬೈಲ್ ಕ್ಯಾಂಟಿನ್ ಸಂಘದ ವತಿಯಿಂದ ಸಕಲೇಶಪುರ ಟೌನ್, ಹಾಸನ ಜಿಲ್ಲೆ. ಇಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದವರು ರಸ್ತೆ ಅಗಲೀಕರಣ ನಡೆಯುತ್ತಿರುವ ಕಾರಣ ದಿನಾಂಕ :07/12/2021 ಉಪವಿಭಾಗಾಧಿಕಾರಿಗಳು, ಸಕಲೇಶಪುರ ಉಪವಿಭಾಗ ಸಕಲೇಶಪುರ. ಇವರಿಗೆ ಮನವಿ ಸಲ್ಲಿಸಿ ಸಹಾಯ ಕೇಳುತ್ತಿರುವುದು

ವಿಷಯ : ಸಕಲೇಶಪುರದ ಹಳೇ ತಹಸೀಲ್ದಾರ್‌ರವರ ಕಛೇರಿಯ ಖಾಲಿ ಆವರಣದಲ್ಲಿ ತಾತ್ಕಾಲಿಕವಾಗಿ ಮೊಬೈಲ್ ಕ್ಯಾಂಟಿನ್ ನಡೆಸಿಕೊಂಡು, ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಕೋರಿ.

ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ನಮ್ಮ ಸಂಘದ ಸದಸ್ಯರು, ಕಳೆದ 30-40 ವರ್ಷಗಳ ಹಿಂದಿನಿಂದಲೂ, ಸಕಲೇಶಪುರ ಪಟ್ಟಣದಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸಿಕೊಂಡು ಇದರಿಂದ ಸಿಗುವ ಅಲ್ಪ ಪ್ರಮಾಣದ ಆಧಾಯದಲ್ಲಿ ನಮ್ಮ ಕುಟುಂಬಸ್ಥರ ಜೀವನ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ರಕ್ಷಣೆ, ಹಣಕಾಸಿನ ಹೊಂದಾಣಿಕೆಗಳನ್ನು ಮಾಡಿಕೊಂಡು, ಸ್ವಾವಲಂಬಿಯಾಗಿ ಜೀವನ ನಿರ್ವಹಣೆ ಮಾಡಿಕೊಂಡು ಬಂದಿರುತ್ತೇವೆ.

ಹಾಗೂ ಬದಲಾದ ಪರಿಸ್ಥಿತಿಯಲ್ಲಿ ನಾವುಗಳು ಹಾಅ ಸಕಲೇಶಪುರ ಹಳೇ ಬಸ್ ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮುಂಭಾಗದ ಖಾಲಿ ಜಾಗದಲ್ಲಿ ಮೊಬೈಲ್ ಕ್ಯಾಂಟಿನ್ ವ್ಯವಹಾರ ನಡೆಸಿಕೊಂಡು ಬಂದಿರುತ್ತೇವೆ. ಆದರೆ ಮುಂದಿನ ದಿನಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವು ಪ್ರಾರಂಭವಾದ ನಂತರ, ಸಾರ್ವಜನಿಕರ ಹಿದೃಷ್ಟಿಯಿಂದ ನಮ್ಮ ಮೊಬೈಲ್ ಕ್ಯಾಂಟಿನ್ ವ್ಯವಹಾರಕ್ಕೆ ಬದಲಿ ಸ್ಥಳದ ಅವಶ್ಯಕತೆ ಇರುತ್ತದೆ. ಅಲ್ಲದೆ, ನಾವುಗಳು ವ್ಯಾಪಾರ ನಡೆಸಿಕೊಂಡಿದ್ದ ಸ್ಥಳದಲ್ಲಿ ದಿನಾಂಕ 06.12.2021ರಂದು ಸಕಲೇಶಪುರ ತಾಲ್ಲೂಕಿನ ದಅತ ಮುಖಂಡರು, ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಯನ್ನು ನಿರ್ಮಾಣ ಮಾಡಿರುವುದರಿಂದ, ನಮ್ಮ ವ್ಯಾಪಾರ ಸಮಯದಲ್ಲಿ ಸಾರ್ವಜನಿಕರಿಂದ ಗೊತ್ತೋ, ಗೊತ್ತಿಲ್ಲದೋ ಸಂಭವಿಸಬಹುದಾದ ಅಚಾತ್ರ್ಯದಿಂದಾಗಿ, ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ನಮ್ಮ ಸಂಘದ ತೀರ್ಮಾನದಂತೆ ನಾವುಗಳು, ಪಕ್ಕದಲ್ಲಿರುವ ಹಳೆಯ ತಾಲ್ಲೂಕು ಕಛೇರಿಯ ತೆರವಾಗಿರುವ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಮೊಬೈಲ್ ಕ್ಯಾಂಟಿನ್ ನಡೆಸಿಕೊಂಡು ಹೋಗಲು ಅವಕಾಶ ಮಾಡಿಸಿಕೊಡುವಂತೆ ಅತ್ಯಂತ ವಿನಯಪೂರ್ವಕವಾಗಿ ಪ್ರಾರ್ಥಿಸುತ್ತಾ, ನಮ್ಮ ಸ್ವಾವಲಂಭಿ ಜೀವನಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.

-ಸಕಲೇಶ್ವರಸ್ವಾಮಿ ಮೊಬೈಲ್ ಕ್ಯಾಂಟಿನ್ ಸಂಘ

LEAVE A REPLY

Please enter your comment!
Please enter your name here