ಆಲೂರು ತಾಲ್ಲೂಕಿನ
ಕೆ.ಹೊಸಕೋಟೆ ಹೋಬಳಿ,ಮಲ್ಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿತ್ತಗಳಲೆ ರಸ್ತೆಯ ಶಂಕುಸ್ಥಾಪನೆಯನ್ನು ಆಲೂರು-ಸಕಲೇಶಪುರ- ಕಟ್ಟಾಯ ಕ್ಷೇತ್ರದ ಶಾಸಕ ಹೆಚ್ .ಕೆ ಕುಮಾರಸ್ವಾಮಿ ನೆರವೇರಿಸಿದರು. ಕೆ.ಹೊಸಕೋಟೆ ಮುಖ್ಯರಸ್ತೆಯಿಂದ ಕಿತ್ತಗಳಲೆ ವರೆಗಿನ ಕಾಂಕ್ರಿಟ್ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಬೆಳಗೋಡು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಮಲ್ಲಾಪುರ ಗ್ರಾ.ಪಂ ಅಧ್ಯಕ್ಷೆ ಮಮತ ಅಣ್ಣೇಗೌಡ, ಉಪಾಧ್ಯಕ್ಷ ಶರತ್ ಕುಮಾರ್, ಸದಸ್ಯರಾದ ಕಮಲಮ್ಮ ,ಭುವನೇಶ್, ಅಕ್ಷತಾ ಮತ್ತು ಇತರ ಸದಸ್ಯರು ಹಾಗೂ ಜೆಡಿಎಸ್ ಮುಖಂಡರಾದ ಯೋಗೇಶ್,ಅಣ್ಣೇಗೌಡ, ಸದಾನಂದ,ಪ್ರಕಾಶ್,ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಪೂರ್ಣ ಹದಗೆಟ್ಟಿದ್ದ ಕಿತ್ತಗಳಲೆ ರಸ್ತೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ ಯವರಿಗೆ ಕಿತ್ತಗಳಲೆ, ಹ್ಯಾರಗಳಲೆ, ಕಿತ್ತಗೆರೆ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.