ಹಾಸನ / ಸಕಲೇಶಪುರ : ಸಕಲೇಶಪುರದ ಮಳಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು (ಸೆ.7) ಎರಡು ಮನೆಗಳಿಗೆ ಒಂದೇ ಹೊತ್ತಿನಲ್ಲಿ ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಭರಣಗಳನ್ನು ದೋಚಿದ ಘಟನೆ ನಡೆದಿದೆ
ಸಕಲೇಶಪುರದಲ್ಲಿ ಐಗ್ರೋ ಕೊಬ್ಬರಿ ಎಣ್ಣೆ ವಿತರಕರಾಗಿರುವ ಮಂಜುನಾಥ್ ಹಾಗೂ ಕೃಷಿ ತೋಟದಲ್ಲಿ ಕಾರ್ಮಿಕರಾಗಿರುವ ಲೋಹಿತಾಕ್ಷಿಯವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಘಟನೆ ವಿವರ :
ಮಂಜುನಾಥ್ ರವರು ತನ್ನ ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಅವರ ಪತ್ನಿ ಆ ಊರಿನಲ್ಲಿ ನಡೆಯುವ ಚಾಮುಂಡೇಶ್ವರಿ ದೇವಸ್ಥಾನದ ಪೂಜೆಗೆ ಮಧ್ಯಾಹ್ನ ತೆರಳಿದ್ದರು.
ಆ ಸಂದರ್ಭದಲ್ಲಿ ಮಧ್ಯಾಹ್ನ ಮಂಜುನಾಥ್ ಮನೆಗೆ ಬಂದಾಗ ಮನೆ ಹಿಂದಿನ ಬಾಗಿಲಿನ ಬೋಲ್ಟ್ ಗಳನ್ನು ಮುರಿಯಲಾಗಿತ್ತು.
ಬಳಿಕ ಅವರ ಮನೆಯಲ್ಲಿದ್ದ ಬೀರುವಿನ ಬಾಗಿಲನ್ನು ಮುರಿದು 2 ಜೊತೆ ಓಲೆ, 2 ಉಂಗುರ 48 ಸಾವಿರ ಹಣ ಕಳ್ಳತನ ಮಾಡಲಾಗಿದೆ.





ಘಟನೆ 2: ಮಂಜುನಾಥ್ ಮನೆಯ ಪಕ್ಕದಲ್ಲಿ ಲೋಹಿತಾಕ್ಷಿ ಮನೆಯಿದೆ. ಆ ಮನೆಯಲ್ಲಿ ಇಂದು ಮಧ್ಯಾಹ್ನ ಬೀಗ ಮುರಿದು ಕಳ್ಳತನ ಮಾಡಿ 35 ಗ್ರಾಂ ಮಾಂಗಲ್ಯ ಸರ, 3 ಜೊತೆ ಕಿವಿ ಓಲೆ, 2 ಉಂಗುರ ಹಾಗೂ ಒಂದು ಜೊತೆ ಕಾಲು ಚೈನ್ ಹಾಗೂ 50 ಸಾವಿರ ಹಣವನ್ನು ಕಳ್ಳರು ಕದ್ದಿದ್ದಾರೆ.
ಪೊಲೀಸ್ ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.