ಸಕಲೇಶಪುರ ಪಟ್ಟಣದ ಕಾಲೇಜುಗಳಲ್ಲಿ ಯಶಸ್ವಿ ಲಸಿಕಾ ಮೇಳ

0

ಸಕಲೇಶಪುರ ಪಟ್ಟಣದ ಹಲವಾರು ಕಾಲೇಜುಗಳಲ್ಲಿ ಲಸಿಕಾ ಮೇಳ

ಸಕಲೇಶಪುರ : ಪಟ್ಟಣದ ಸ್ಟಿಯರ್ ಕಾಲೇಜಿನಲ್ಲಿ ಲಸಿಕೆ ಮೆಳ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ ಜಯಕುಮಾರ್ ಅವರು ಕಾಲೇಜಿನ ವಿದ್ಯಾರ್ಥಿಗಳಲ್ಲಿ ತಿಳಿಯಪಡಿಸುವುದೇನೆಂದರೆ ಆದಷ್ಟು ಜಾಗೃತರಾಗಿ ಇರಬೇಕು .

ಕಳೆದ 2ವರ್ಷದಿಂದ ಬಂದಂಥ ಕೋವಿಡ್ ಗಿಂತ ಅಪಾಯಕಾರಿಯಾಗಿದೆ. ಓಮಿಕರ್ನ್ ವೈರಸ್ ಅತಿ ವೇಗವಾಗಿ ಹರಡುತ್ತದೆ .

ಇದರಿಂದ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಡಬೇಕು .
ಸರ್ಕಾರದ ಆದೇಶದಂತೆ ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ .

ನಮ್ಮ ತಾಲ್ಲೂಕಿನಲ್ಲಿ ವೈರಸ್ಸನ್ನು ತಡೆಗಟ್ಟಲು ವಿದ್ಯಾರ್ಥಿಗಳು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು .

ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದಂಥ ಸ್ನೇಹಿತರು ಸಂಬಂಧಿಕರು ಯಾರೇ ಆಗಿರಲಿ ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು .

ಆಗ ಮಾತ್ರ ವೈರಸ್ ಅನ್ನು ತಡೆಗಟ್ಟಲು ಸಾಧ್ಯವಾಗುತ್ತದೆ .
ವಿದ್ಯಾರ್ಥಿಗಳು ಶಿಸ್ತು ಮತ್ತು ಸಂಯಮದಿಂದ ವರ್ತಿಸಬೇಕು .

ನಾನು ಆರೋಗ್ಯದಿಂದ ಇದ್ದೇನೆ ನನಗೆ ಯಾವ ರೋಗ ಲಕ್ಷಣಗಳು ಇಲ್ಲ ಎಂದು ಮಾಸ್ಕ್ ಹಾಕುವುದಿಲ್ಲ ಎಂದು ಹೇಳಬಾರದು .ಹೆಚ್ಚಿನದಾಗಿ ಯುವಕರು ಮತ್ತು ಯುವತಿಯರಿಗೆ ಹೆಚ್ಚಾಗಿ ಕಾಣಿಸುತ್ತದೆ ಆದ್ದರಿಂದ ಆದಷ್ಟು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು .

ತಾಲ್ಲೂಕು ವೈದ್ಯಾಧಿಕಾರಿ ಡಾ “ಮಹೇಶ್ ಅವರು ಮಾತನಾಡಿ ಕೇಂದ್ರ ಸರ್ಕಾರದ ಆದೇಶದಂತೆ 15 ರಿಂದ 18 ವರ್ಷದವರೆಗೆ ಆದೇಶ ಮಾಡಲಾಗಿದೆ .

ಅದರಂತೆ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ನಾವು ತೆರಳಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವ್ಯಾಕ್ಸಿನ್ ನೀಡುತ್ತಿದ್ದೇವೆ .

ಈಗಾಗಲೇ ಹಲವು ದೇಶಗಳು ಈ ವೈರಸ್ ನಿಂದ ತತ್ತರಿಸಿದೆ .
ವಿದ್ಯಾರ್ಥಿಗಳು ಇದನ್ನು ಕಡೆಗಣಿಸಬಾರದು .ವೈದ್ಯಾಧಿಕಾರಿಗಳು ಹಗಲಿರುಳು ಎನ್ನದೆ ತಮ್ಮ ಮನೆಯ ಸಿಬ್ಬಂದಿಗಳನ್ನು ದೂರಮಾಡಿ ಶ್ರಮಿಸುತ್ತಿದ್ದಾರೆ .

ಮುಂದಿನ ಪೀಳಿಗೆಗೆ ವಿದ್ಯಾರ್ಥಿಗಳ ಸಮೂಹವೇ ಮಾದರಿಯಾಗಬೇಕು. ಆದಷ್ಟೂ ಸುರಕ್ಷಿತರಾಗಿರಿ ಬೇರೆಯವರನ್ನು ಸುರಕ್ಷಿತರಾಗಿರಲು ಮಾದರಿಯಾಗಿ ಇದನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ಶಿಕ್ಷಕ ವರ್ಗ ಸರಕಾರಿ ವೈದ್ಯಾಧಿಕಾರಿಗಳ ಸಿಬ್ಬಂದಿಗಳು ಮತ್ತು ತಾಲ್ಲೂಕು ಆಡಳಿತ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here