“ವಿದ್ಯಾರ್ಥಿ ಯಶವಂತ್ ಬಲಿತೆಗೆದುಕೊಂಡ ಸಾರಿಗೆ ಬಸ್”
ಕುರುವಂಕ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಯಶವಂತ್(14) ಬಂಧುಗಳ ಬೈಕಿನಲ್ಲಿ ಅರಸೀಕೆರೆಯಿಂದ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದ, ಹಿಂಬದಿಯಿಂದ ಬಂದ ಸಾರಿಗೆ ಬಸ್ ಎದುರಿನಿಂದ ಬರುತ್ತಿದ್ದ ಕಾರಿಗೆ ಸ್ಥಳ ನೀಡಲು ನಿರ್ಲಕ್ಷದಿಂದ ವೇಗವಾಗಿ ಪಕ್ಕಕ್ಕೆ ಸರಿದ ಪರಿಣಾಮ ಇಬ್ಬರು ಕೆಳಗೆ ಬಿದ್ದು ವಿದ್ಯಾರ್ಥಿಯ ತಲೆ ಮೇಲೆ ಬಸ್ ಮುಂದಿನ ಚಕ್ರ ಹರಿದಿದೆ ಎನ್ನಲಾಗಿದೆ. ಜಾಜೂರು ಸಮೀಪ ನಡೆದ ಘಟನೆ ನಡೆದಿದೆ.
ಈ ಹಿಂದೆಯೂ ಸಾರಿಗೆ ಸಂಸ್ಥೆ ಬಸ್ ತಾಲ್ಲೂಕಿನಲ್ಲಿ ಈರ್ವರು ವಿದ್ಯಾರ್ಥಿಗಳನ್ನು ಬಲಿತೆಗೆದುಕೊಂಡಿದ್ದ ನ್ನು ಇಲ್ಲಿ ಸ್ಮರಿಸಬಹುದು. ಯಶ್ವಂತ್ ತಂದೆಗೆ ನಾಲ್ವರು ಮಕ್ಕಳಿದ್ದು ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು. ಯಶವಂತ್ ಅಗಲಿಕೆಯಿಂದ ಪೋಷಕರು ದುಃಖಸಾಗರದಲ್ಲಿ ಮುಳುಗಿದ್ದಾರೆ.
ಬಾಲಕನ ಅಗಲಿಕೆಗೆ ಶಾಸಕ ಕೆ ಎಂ ಶಿವಲಿಂಗೇಗೌಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿಳಿಚೌಡಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಲಕ್ಷ್ಮಣ ಬಳೂಟಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಮೂರ್ತಿ, ಹಾಗೂ ನಿರ್ದೇಶಕರುಗಳು, ಸಿ ಆರ್ ಪಿ ಗಳು, ಬಿ ಆರ್ ಪಿ ಗಳು, ಮತ್ತು ಶಿಕ್ಷಣ ಸಂಯೋಜಕರು, ಶಾಲೆಯ ಪೋಷಕರು, ಶಾಲಾಭಿವೃದ್ಧಿ ಸಮಿತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣಕುಮಾರ್ ಹಾಗೂ ಪದಾಧಿಕಾರಿಗಳು, ಶಾಲೆಯ ಶಿಕ್ಷಕವರ್ಗ ಸಂತಾಪ ವ್ಯಕ್ತಪಡಿಸಿದ್ದಾರೆ.
Home Hassan Taluks Arsikere ಹಿಂಬದಿಯಿಂದ ಬಂದ ಸಾರಿಗೆ ಬಸ್ ಎದುರಿನಿಂದ ಬರುತ್ತಿದ್ದ ಕಾರಿಗೆ ಸ್ಥಳ ನೀಡಲು ನಿರ್ಲಕ್ಷ? ಒಂದು ಸಾವು