ಶಬರಿಮಲೈ/ ಹಾಸನ.ನ.11/2020 : (ಹಾಸನ್_ನ್ಯೂಸ್): ” ಕರ್ನಾಟಕ ರಾಜ್ಯದಿಂದ ಕೇರಳ ರಾಜ್ಯದ ಶ್ರೀ ಕ್ಷೇತ್ರ ಶಬರಿಮೈಗೆ ತೆರಳುವ ಭಕ್ತಾದಿಗಳು/ಯಾತ್ರಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್-19 ಹಿನ್ನಲೆಯಲ್ಲಿ ಕೇರಳ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಅನುಸರಿಸಲೇಬೇಕು ” – ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು

ಕೇರಳ ರಾಜ್ಯದ ಶಬರಿಮಲೈನಲ್ಲಿ ಜರುಗುವ 2020-21ನೇ ಸಾಲಿನ ಮಂಡಲ-ಮಕರವಿಳಕ್ಕು ವರ್ಷದ ಕಾರ್ಯಕ್ರಮಕ್ಕೆ ತೆರಳುವ ಭಕ್ತಾದಿಗಳು/ಯಾತ್ರಾರ್ಥಿಗಳು https://sabarimalaonline.org/ ವೆಬ್‍ಸೈಟ್‍ನ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡಿರುವವರಿಗೆ ಅನುಮತಿಸಿದ ನಂತರದಲ್ಲಿ ಮಾತ್ರ ಶಬರಿಮಲೈ ದರ್ಶನಕ್ಕೆ ಅವಕಾಶ ಇರುತ್ತದೆ.
ಪ್ರಥಮವಾಗಿ ಪ್ರತಿದಿನ ಒಂದು ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ವಾರಾಂತ್ಯದಲ್ಲಿ ಪ್ರತಿದಿನ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇರುತ್ತದೆ. ಅದರಂತೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ಇರುತ್ತದೆ.
ಭೇಟಿ ನೀಡುವ 48 ಗಂಟೆ ಅವಧಿಯ ಮೊದಲು ಕೋವಿಡ್-19 ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಪ್ರವೇಶ ಸ್ಥಳದಲ್ಲಿ (ಪ್ರತಿ ಜನಕ ಪರೀಕ್ಷೆ)ಗೆ ಅವಕಾಶ ಕಲ್ಪಿಸಲಾಗಿದ್ದು, ಅದರ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕಾಗಿರುತ್ತದೆ.

ಹತ್ತು ವರ್ಷಗಳ ಒಳಪಟ್ಟು ಮತ್ತು 60-65 ವರ್ಷಗಳಿಗೆ ಮೇಲ್ಪಟ್ಟವರಿಗೆ ಹಾಗೂ https://sabarimalaonline.org/(ಅನಾರೋಗ್ಯದ/ಕಾಯಿಲೆಯ ಲಕ್ಷಣಗಳು) ಇರುವಂತಹವರಿಗೆ ಯಾತ್ರಾ ಪ್ರದೇಶಕ್ಕೆ ಅನುಮತಿ ಇರುವುದಿಲ್ಲ.
ಬಿ.ಪಿ.ಎಲ್. ಕಾರ್ಡ್, ಆಯುಷ್ಮಾನ್ ಕಾರ್ಡ್ ಹಾಗೂ ಇತ್ಯಾದಿ ಕಾರ್ಡ್ ಹೊಂದಿರುವವರು ಯಾತ್ರೆಗೆ ತೆರಳುವ ಸಮಯದಲ್ಲಿ ಅದನ್ನು ಹೊಂದಿರಬೇಕು.

ತುಪ್ಪದ ಅಭಿಷೇಕ, ಪಂಪಾನದಿ ಸ್ನಾನ, ಸನ್ನಿದಾನಂನಲ್ಲಿ ರಾತ್ರಿ ತಂಗುವುದು ಹಾಗೂ ಪಂಪಾ ಮತ್ತು ಗಣಪತಿ ಕೋವಿಲ್‍ಗೆ ಅವಕಾಶವಿರುವುದಿಲ್ಲ.

ಯಾತ್ರಾರ್ಥಿಗಳು ಪ್ರಯಾಣಕ್ಕೆ ಎರುಮೆಲು ಮತ್ತು ವೇದಸಾರಿಕ್ಕರ ಮಾರ್ಗದಲ್ಲಿ ಮಾತ್ರ ಅವಕಾಶವಿರುತ್ತದೆ.
ಈ ಎಲ್ಲಾ ನಿಯಮಗಳನ್ನು ಶಬರಿಮಲೈಗೆ ತೆರಳುವ ಯಾತ್ರರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು ” – ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು

ಬಿ.ಇ, ಬಿಸಿಎ, ಎಂಸಿಎ, ಬಿಎಸ್ಸಿ ಮತ್ತು ಡಿಪ್ಲೊಮಾ ದವರಿಗೆ …
ಸಂಪರ್ಕಿಸಿ ಮಾಹಿತಿಗಾಗಿ: ಶ್ರೀ ಭಾಸ್ಕರ್ 7204629966,
ಶ್ರೀ ಸುರೇಂದ್ರ ವಿ.ಕೆ 9844454966
• ಪ್ರೋಗ್ರಾಂ 👇
ರಿಯಾಕ್ಟ್ ಡೆವಲಪರ್
ಪೈಥಾನ್ ಜಾಂಗೊ ಡೆವಲಪರ್
ಡೇಟಾ ವಿಜ್ಞಾನಿ
ಫುಲ್ ಸ್ಟಾಕ್ ಡೆವಲಪರ್
hassan : Assured job opportunities of ctc 5-12 LPA.
for B.E , BCA, MCA, BSC & DIPLOMA…
contact info: mr bhaskar 7204629966,
Mr surendra v.k 9844454966
program offered
React developer
Python django developer
Data scientist
Full stack developer