ಈ ವಿದ್ಯುತ್ ಕಂಬ ಬದಲಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

0

ಹಾಸನ : ಕಸಬಾ ಹೋಬಳಿ ಕಂದಲಿ ಗ್ರಾಮ  ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಈಚಲಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಕೆಟ್ಟು ಕೆರವಾಗಿರುವ ಬೀದಿ ದೀಪದ ಕಂಬ ಸಾರ್ವಜನಿಕರ ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವ ಈ ವಿದ್ಯುತ್ ಕಂಬ


ಸರಿ ಸುಮಾರು 2 ಮೂರು ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಇದ್ದು ಇಲ್ಲಿನ  ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮಕ್ಕೆ ನೇಮಕ ವಾಗಿರುವ  ಲೈನ್ ಮ್ಯಾನ್ ಮತ್ತು ಇವರ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದು ವರ್ಷಗಳೆ ಕಳೆದಿದೆ ಆದರೆ ಅಧಿಕಾರಿಗಳ  ಅಸಡ್ಡೆಯ ವರ್ತನೆಯಿಂದ ಇದನ್ನು ದುರಸ್ತಿ ಗೊಳಿಸುವ / ಬದಲಿ ಕಂಬ ನೆಡುವ ಗೋಜಿಗೆ  ಹೋಗದೆ ಇರುವುದು ನಮ್ಮ ದುರ್ದೈವ ದಿನನಿತ್ಯ ನಡೆದಾಡುವ ಗ್ರಾಮಸ್ಥರು ಮತ್ತು ಶಾಲಾ ಮಕ್ಳಳು ಅಪಾಯವನ್ನು ಹತ್ತಿರದಲ್ಲೇ ಮೈಗೆ ಅಂಟಿಕೊಂಡು ಓಡಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ ಮುಂದೆ

ಏನಾದರು ಅಪಾಯ ಸಂಭವಿಸುವುದಕ್ಕಿಂತ ಮುಂಚೆಯೇ ಇದಕ್ಕೆ  ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮದಲ್ಲಿ ಇದೆ ಸ್ಥಿತಿಯಲ್ಲಿ ಇರುವ ಸುಮಾರು 4 ರಿಂದ 5 ವಿದ್ಯುತ್ ಕಂಬಗಳನ್ನು ಬದಲಾಯಿಸಿ ಆಗುವ ಅನಾಹುತವನ್ನು ತಪ್ಪಿಸಬೇಕು ಎಂದು ಸ್ಥಳೀಯ ಮುತುವರ್ಜಿ ಗ್ರಾಮಸ್ಥರು ಈ ಮೂಲಕ ಆಗ್ರಹಿಸಿದ್ದಾರೆ

#CESCOMUPDATESHASSAN #cescomhassan #cescom #hassan #hassannews #kandhli

LEAVE A REPLY

Please enter your comment!
Please enter your name here