ಬೆಂಗಳೂರಿನಲ್ಲಿ BBMP ಮಾದರಿಯಲ್ಲೇ ಹಾಸನಕ್ಕು ಬೇಕೇ ಬೇಕು ಧೂಳು ಹೀರುವ ಯಂತ್ರದ ವಾಹನಗಳು

0

ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ರಸ್ತೆ , ಚರಂಡಿ ಹಾಗೂ ಇತರೆ ಕಾಮಗಾರಿಗಳು ಪ್ರಗತಿಯಲ್ಲಿರೋದು ನಿಮಗೆ ಗೊತ್ತಿರುವ ವಿಷಯ !! ಇತ್ತೀಚೆಗೆ ಕೊರೋನಾ ವೈರಸ್ ಇಲ್ಲದೆಯು ಸಾರ್ವಜನಿಕ ವಲಯದಲ್ಲಿ ಕೆಮ್ಮು ಶೀತ ಗಂಟಲು ನೋವು ಹೆಚ್ಚು ಡಸ್ಟ್ ಅಲರ್ಜಿಗಳಿಂದಲೇ ಆಸ್ಪತ್ರೆಗಳು  , ಮೆಡಿಕಲ್ ನಲ್ಲಿ ಔಷಧಿ ಗಳಿಗಾಗಿ ಜನ ದುಂಬಾಲು ಬೀಳೋದು , ವಾರಕ್ಕೊಂದು ಎರಡು ರಜೆ ಹಾಕಿ ಮನೆಯಲ್ಲಿರೋದು ಸಾಮಾನ್ಯವಾಗಿದೆ .

ನಿಮಗೆ ತಿಳಿದಿರುವಂತೆ ಬೆಂಗಳೂರು / ಮೈಸೂರು ಮಾದರಿ ಬಿಬಿಎಂಪಿ ಟ್ರಕ್‌ಗಳನ್ನು ಧೂಳು ಗುಡಿಸುವ ಮತ್ತು ಹೀರಿಕೊಳ್ಳುವ ಯಂತ್ರಗಳನ್ನು ಪರಿಚಯಿಸಿದೆ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ಧೂಳು ಮುಕ್ತವಾಗಿ ಹಲವು ಏರಿಯಾ ಅಂಗಡಿ ಮುಂಗಟ್ಟುಗಳು , ಸಾರ್ವಜನಿಕ ಸ್ಥಳಗಳು ನಿಟ್ಟುಸಿರು ಬಿಟ್ಟುಕೊಂಡ ಓಡಾಡುವಂತಾಗಿದೆ.

ಇದು ಮೇಕ್ ಇನ್ ಇಂಡಿಯಾ ಯೋಜನೆಯಾಗಿದ್ದು, ನಿರ್ವಹಣೆ ಸುಲಭವಾಗಿದೆ ಎನ್ನುತ್ತಾರೆ ಅಲ್ಲಿನ ಪಾಲಿಕೆ ಅಧಿಕಾರಿಗಳು

ಈ ಟ್ರಕ್‌ಗಳು ರಾತ್ರಿಯಲ್ಲಿ ಕೆಲಸವನ್ನು ಅಲ್ಲಿ ಮಾಡುತ್ತವೆ ಮತ್ತು 5 ಇಂಚುಗಳಷ್ಟು ಕೊಳಕು ಮತ್ತು ಕಣಗಳನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುತ್ತದೆ

ಹಾಸನ ನಗರ ನಿತ್ಯ ಸಾವಿರಾರು ಜನ ತಮ್ಮ ಕೆಲಸ , ವ್ಯಾಪಾರ ವಹಿವಾಟು ನಿಮಿತ್ತ ದ್ವಿಚಕ್ರ , ಕಾರು , ಬಸ್ ಅಥವಾ ಗೂಡ್ಸ್ ವಾಹನದಲ್ಲಿ ತಾವು ಬೆಳೆದ ಪದಾರ್ಥಗಳು ಅಥವಾ ಇತರೆ ವಸ್ತುಗಳ ಹೊತ್ತು ಬರುವುದಲ್ಲದೆ , ಸಭೆ ಸಮಾರಂಭ ಇತೃ ಕಾರ್ಯಕ್ರಮ ಗಳ ನಿಮಿತ್ತ ಹಾಸನ ನಗರಕ್ಕೆ ಬಸ್ ನಲ್ಲಿ‌ಬರುವವರು‌ ಮೂಗಿ ಮುಚ್ಚಿ ಓಡಾಡುವ ಪರಿಸ್ಥಿತಿ ಬರಬಾರದು ., ಹಾಸನ ನಗರದ ಹತ್ತಾರು ಮುಖ್ಯ ಮತ್ತು ಅಪಧಮನಿಯ ರಸ್ತೆಗಳಲ್ಲಿ ಧೂಳು ಗುಡಿಸುವ ಮತ್ತು ಹೀರಿಕೊಳ್ಳುವ ಯಂತ್ರಗಳನ್ನು ನಿಯೋಜಿಸಿದರೇ ಒಳ್ಳೆಯದು ಎಂಬುದು ಸ್ಥಳೀಯ ಸಾರ್ವಜನಿಕರ ಸಲಹೆ.

ಪ್ರಸ್ತುತ, ರಸ್ತೆ ಬದಿಯ ಧೂಳು ಸುಮಾರು 40 ರಷ್ಟು ಕೊಳಕು ಗಾಳಿಗೆ ಕೊಡುಗೆ ನೀಡುತ್ತಿದೆ.  ಗುತ್ತಿಗೆ ಆಧಾರದ ಮೇಲೆ ಎರಡು ಡಸ್ಟ್ ಸ್ವೀಪಿಂಗ್ ಮತ್ತು ಹೀರಿಕೊಳ್ಳುವ ಯಂತ್ರಗಳಿಗೆ ಹಾಸನ ನಗರಸಭೆ ಒತ್ತು ನೀಡಿದರೆ .  ರಸ್ತೆಬದಿಯ ಧೂಳು ತೆಗೆಯಲು ನಗರಸಭೆ ಸುಮಾರು ಹೊಸ ಉದ್ಯೋಗ ಅವಕಾಶಕ್ಕೆ ವಿನಿಯೋಗಿಸಿ ಸಹಾಯ ಮಾಡಿದಂತಾಗುತ್ತದೆ. ಆದರೆ ಈಗ ಕಾರ್ಯಾಚರಣೆಯ ಮೇಲೆ ನಿಗಾ ಇಡುವುದಕ್ಕೆ ತಮ್ಮದೇ ಆದ ಸಾಕಷ್ಟು ಸಿಬ್ಬಂದಿಗಳಿದ್ದರೆ  ಟ್ರಕ್‌ಗಳನ್ನು ಪರಿಚಯಿಸಿ ನಗರ ಸ್ವಚ್ಚವಾಗಿಡಬಹುದು

ನಗರಸಭೆಗೆ ಇದು ಹೊರೆ ಎಂಬುದಾದರೆ ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಗುತ್ತಿಗೆದಾರರ ಮೂಲಕ ಟ್ರಕ್‌ಗಳನ್ನು ನಿರ್ವಹಿಸಿ ಜನಸ್ನೇಹಿ ಕೆಲಸಕ್ಕೆ ಮುಂದಾಗಬೇಕಿದೆ.

ಆದಷ್ಟು ಬೇಗ ಈ ಪ್ರಕ್ರಿಯೆಗೆ ಟೆಂಡರ್ ಕರೆದು, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ” ಟ್ರಕ್‌ಗಳು ದಿನಕ್ಕೆ ಇಂತಿಷ್ಟು ಕಿಮೀ ಕ್ರಮಿಸಿ ಮತ್ತು ರಾತ್ರಿಯಲ್ಲಿ ಮಾತ್ರ ಧೂಳನ್ನು ತೆರವುಗೊಳಿಸಲು ಕೆಲಸ ಮಾಡಿದರೇ.  ವಾಣಿಜ್ಯ, ಪ್ರಮುಖ ಮತ್ತು ಅಪಧಮನಿಯ ರಸ್ತೆಗಳು ಧೂಳು ಮುಕ್ತವಾಗಿ‌., ಹಗಲಿನಲ್ಲಿ ನೆಮ್ಮದಿಯಿಂದ ಸಾರ್ವಜನಿಕರ ವಲಯ ಸುಭೀಕ್ಷವಾಗಿ , ಆರೋಗ್ಯ ವಹಿವಾಟು ನಡೆಸಬಹುದು

ಮರಳು ಸೇರಿದಂತೆ 5 ಇಂಚು ಅಳತೆಯ ಸಣ್ಣ ಕಬ್ಬಿಣದ ತುಂಡುಗಳನ್ನು ಯಂತ್ರವು ಸಂಗ್ರಹಿಸಿ ಹೀರಿಕೊಳ್ಳುತ್ತದೆ.  ಒಂದು ದಿನದಲ್ಲಿ, ಇದು 250 ಕಿಲೋಗಳಷ್ಟು ಧೂಳನ್ನು ಸಂಗ್ರಹಿಸುತ್ತದೆ, ಅದನ್ನು ಡಂಪಿಂಗ್ ಯಾರ್ಡ್ ಮತ್ತು ಲ್ಯಾಂಡ್ಫಿಲ್ಗಳಿಗೆ ಕಳುಹಿಸಿ ವಿಂಗಡಿಸಬಹುದು.

ಸದ್ಯ ಈ ಯಂತ್ರಗಳ ಮೂಲಕ ನಾವು ರಸ್ತೆ ಬದಿಯ ಧೂಳಿನ ಕಣಗಳನ್ನು ತೆಗೆದುಹಾಕಬಹುದು ಮತ್ತು ವಾಯು ಮಾಲಿನ್ಯವನ್ನು ತಡೆಯಬಹುದು ಎಂದು ” TPS ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಜೋನಲ್ ಮ್ಯಾನೇಜರ್ ಮಹಾದೇವ ಭಟ್ ಹೇಳಿದರು.

ಇದು ಹಾಸನ್ ನ್ಯೂಸ್ ಸಮಾಜಿಕ ಸ್ವಾಸ್ಥ್ಯ ಸಲಹೆಯ ಕರೆ

LEAVE A REPLY

Please enter your comment!
Please enter your name here