ಸಮಸ್ತ ಹಾಸನ ಕ್ರೈಸ್ತ ಬಾಂಧವರಿಗೆ ಮರಿಯ ಜಯಂತಿ ಹಬ್ಬದ ಶುಭಾಶಯಗಳು

0

ಹಾಸನ : ಸೆ.8 : ಕ್ರೈಸ್ತ ರಲ್ಲಿ ‘ ಮರಿಯ ಜಯಂತಿ ‘ ಎಂಬುದು ಯೇಸುವಿನ ತಾಯಿ ಮರಿಯಮ್ಮ ಅವರ ಜನ್ಮದಿನಾಚರಣೆ ,‌ಪ್ರತಿ ವರ್ಷ ಸೆ.8 ರಂದು ಆಚರಿಸುತ್ತಾರೆ .,  ಕೋವಿಡ್ ಭೀತಿ ಕಾರಣ ಕಳೆದ ಎರಡು ವರ್ಷಗಳಿಂದ ಸರಳವಾಗಿ ಹಾಸನದ ಹಲವು ಕ್ರೈಸ್ತ ಧರ್ಮಕೇಂದ್ರಗಳಲ್ಲಿ ಆಚರಣೆ ನಡೆಯುತ್ತಿದ್ದು , ಇಂದು ಕೂಡ ಒಂದು ಅದ್ದೂರಿ ಹಬ್ಬದ ಒಂದು ಪ್ರಾರ್ಥನಾ ಕೂಟದ ಒರತಾಗಿ , ಕೋವಿಡ್ ನಿಯಮಾನುಸಾರ ಭಕ್ತಾದಿಗಳಿಗೆ ಹಲವು ವಿಂಗಡನಾ ಪೂಜಾ ವಿಧಿ ವಿಧಾನಕ್ಕೆ ಧರ್ಮಗುರು ಶ್ರೀ ಫಾ.ಪ್ಯಾಟ್ರಿಕ್ ಜೊಹಾನಸ್ ಅವಕಾಶ ಮಾಡಿಕೊಟ್ಟರು .,

ಹಬ್ಬದ ವೈಶಿಷ್ಟ್ಯ : ಇಂದು ಕ್ರೈಸ್ತ ರು ಈ ಹಬ್ಬವನ್ನು ಕುಟುಂಬ ಹಬ್ಬವಾಗಿ , ಮಹಿಳೆಯರ ಹಬ್ಬವಾಗಿ , ರೈತರು ಬೆಳೆದ ಹೊಸ ಬೆಳೆಗಳ ಆಶೀರ್ವದಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವ ಆಚರಣೆಯಾಗಿ ನೆರವೇರಿಸುತ್ತಾರೆ .

ಈ ಸಂದರ್ಭದಲ್ಲಿ ಮಾತನಾಡಿದ ಹಾಸನ ಎನ್ ಆರ್ ವೃತ್ತದಲ್ಲಿರುವ ಸಂತ ಅಂತೋಣಿಯವರ ಧರ್ಮ ಕೇಂದ್ರ ಗುರು ಫಾ.ಪ್ಯಾಟ್ರಿಕ್ ಜೊಹಾನಸ್ ಮಾತನಾಡಿ :

” ಮರಿಯಾ ಜಯಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಭು ಯೇಸು ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ಮೇರಿಮಾತೆ ಶಾಂತಿ ಸಮಾಧಾನ ದೊಂದಿಗೆ ಆರೋಗ್ಯ ಭಾಗ್ಯ ದೊಂದಿಗೆ ಹಾಗೂ ಪ್ರೀತಿ ನೆಮ್ಮದಿಯ ಆಶೀರ್ವಾದದೊಂದಿಗೆ ಹೇರಳವಾಗಿ ಅನುಗ್ರಹಿಸಲಿ , ರೈತರ ಶ್ರಮಕ್ಕೆ ಅವರ ಬಾಳು ಬೆಳಗಲಿ ಇದರಿಂದ ದೇಶ ಸಮೃದ್ದವಾಗಲಿ , ಹಾಗೂ ಕೋವಿಡ್ ವೈರಸ್ ತೀವ್ರತೆ ಕಡಿಮೆಯಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಲಾಗದಿರಲಿ ಎಂದು ಇಂದಿನ ಬಲಿ ಪೂಜಾ ಸಮಯದಲ್ಲಿ ನಿಮಗೋಸ್ಕರ ವಿಶೇಷವಾಗಿ ಪ್ರಾರ್ಥಿಸುತ್ತೇನೆ. ಪ್ರಾರ್ಥನಾ ಪೂರ್ವಕ ಶುಭಾಶಯಗಳು ” – ಫಾದರ್ ಪ್ಯಾಟ್ರಿಕ್ ಜೋನಸ್ ರಾವ್

LEAVE A REPLY

Please enter your comment!
Please enter your name here