ಅಜ್ಜಿ ತಾತಂದಿರಿಗೂ ಫೇವರೆಟ್ ಆಯ್ತು ಟಗರು ಪಲ್ಯ
ಟಗರು ಪಲ್ಯ ಬಗ್ಗೆ ಡಾಲಿಗೆ ಪಾಠ ಮಾಡ್ತಿದ್ದಾರೆ ನೋಡಿ ತಾತ
ಡಾಲಿ ಪಿಚ್ಚರ್ ಅಡಿಯಲ್ಲಿ ನಿರ್ಮಾಣ ಆಗಿರುವಂತಹ ಟಗರುಪಲ್ಯ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.. ಟಗರುಪಲ್ಯ ಸಿನಿಮಾದಲ್ಲಿ ನಾಗಭೂಷಣ್ ನಾಯಕನಾಗಿ ಅಭಿನಯ ಮಾಡಿದ್ದು ಅಮೃತ ಪ್ರೇಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ… ಸಿನಿಮಾ ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ… ಟಗರುಪಲ್ಯ ಸಿನಿಮಾ ಈಗಾಗಲೇ ಮನೆಮನೆಗೂ ತಲುಪಿದೆ.. ಇದೆ ಅಕ್ಟೋಬರ್ 27ರಂದು ಸಿನಿಮಾ ತೆರೆಗೆ ಬರುತ್ತಿದ್ದು ಈ ಬಗ್ಗೆ ಜನರು ಮಾತನಾಡುತ್ತಿದ್ದಾರೆ
ಇತ್ತೀಚಿಗಷ್ಟೇ ನಟ ಡಾಲಿ ಧನಂಜಯ್ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾಗ ಹಿರಿಯರು ಒಬ್ಬರು ಡಾಲಿಯನ್ನ ಭೇಟಿ ಮಾಡಿ ಟಗರುಪಲ್ಯ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.. ಟಗರುಪಲ್ಯ ಸಿನಿಮಾ ಬಗ್ಗೆ ಡಾಲಿ ಹೇಳಲು ಹೊರಟಾಗ ಅವರೇ ಟಗರುಪಲ್ಯ ಸಿನಿಮಾ ಬರ್ತಾ ಇದೆ ನನಗೆ ಗೊತ್ತಿದೆ ನಾವು ನೋಡುತ್ತೇವೆ ಎಂದು ಹೇಳಿ ಡಾಲಿ ಧನಂಜಯ್ ಅವರಿಗೆ ಹಾಗೂ ಅವರ ಸಿನಿಮಾಗೆ ಆಶೀರ್ವಾದ ಮಾಡಿದ್ದಾರೆ…. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು ಇದೇ ವಾರ ತೆರೆಗೆ ಬರುತ್ತಿರುವಂತಹ ಟಗರುಪಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಕೂಡ ಕಾತುರದಿಂದ ಕಾದಿದ್ದಾರೆ