ವಾಟೆಹೊಳೆ ಜಲಾಶಯದಿಂದ ಆ 10 ರಿಂದ ನಾಲೆಗಳಿಗೆ ನೀರು ಬಿಡುಗಡೆ

0

ಹಾಸನ : ವಾಟೆಹೊಳೆ ಜಲಾಶಯದಿಂದ 2023 ನೇ ಸಾಲಿನ ಖಾರಿಫ್ ಬೆಳಗ್ಗೆ 10.08.2023 ರಿಂದ 9.12.2023ರ ವರೆಗೆ ಒಟ್ಟು 120 ದಿನಗಳ ಅವಶ್ಯಕತೆಗೆ ತಕ್ಕಂತೆ ಕಟ್ಟು ನೀರು ಪದ್ದತಿಯಲ್ಲಿ ವಾಟೆಹೊಳೆ ಜಲಾಶಯದಿಂದ ವಿತರಣಾ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದು ವಾಟೆಹೊಳೆ ಜಲಾಶಯ ಯೋಜನ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅರುಣ್ ಕುಮಾರ್ ಹೆಚ್.ಇ. ತಿಳಿಸಿದ್ದಾರೆ.

ವಾಟೆಹೊಳೆ ಬಲದಂಡೆ ನಾಲೆಯ 0.00 ದಿಂದ 37 ನೇ ಕಿ.ಮೀ. 1 ರಿಂದ 34 ನೇ ವಿತರಣಾ ನಾಲೆ, ನಾಕಲಗೂಡು ಶಾಖಾ ನಾಲೆಯ 0.00 ದಿಂದ 5 ನೇ ಕಿ.ಮೀ. 1 ರಿಂದ 5 ನೇ ವಿತರಣಾ ನಾಲೆ ಹಾಗೂ ವಾಟೆಹೊಳೆ ಎಡದಂಡೆ ನಾಲೆ 0.00 ದಿಂದ 10 ನೇ ಕಿ.ಮೀ.1 ರಿಂದ 5 ನೇ ವಿತರಣಾ ನಾಲೆಗೆ ಅವಶ್ಯಕತೆಗೆ ತಕ್ಕಂತೆ ಕಟ್ಟು ನೀರು ಪದ್ಧತಿಯಂತೆ ನೀರು ಬಿಡಲಾಗುವುದು ಎಂದು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here