ಹಾಸನ ಮಾ.17(ಹಾಸನ್_ನ್ಯೂಸ್ !, ಅಬಕಾರಿ ವಸ್ತುಗಳ ಅಕ್ರಮ ಸಾಗಾಣೆ ಸಂಬಂಧ ಅಬಕಾರಿ ಇಲಾಖೆಯಿಂದ ವಿವಿಧ ಪ್ರಕರಣಗಳಲ್ಲಿ ಜಪ್ತಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳನ್ನು ಮಾ.30 ರಂದು ಬೆಳಗ್ಗೆ 11 ಗಂಟೆಗೆ ಅಬಕಾರಿ ಉಪ ಅಧೀಕ್ಷಕರು, ಹಾಸನ ಉಪ ವಿಭಾಗ, ಅಬಕಾರಿ ಉಪ ಅಧೀಕ್ಷಕರು, ಹಾಸನ/ ಸಕಲೇಶಪುರ ಉಪ ವಿಭಾಗ ಇವರ ನೇತೃತ್ವದಲ್ಲಿ ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು ಎಂದು ಹಾಸನ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ವಾಹನಗಳ ವಿವರ : ಹಾಸನ ವಲಯ ನಂ.1 ರಲ್ಲಿ ಟಿ.ವಿ.ಎಸ್, ಎಕ್ಸ್ ಎಲ್ ಹೆವಿ ಡ್ಯೂಟಿ ಕೆ.ಎ-13-ಇಡಿ-2269, ಹಾಸನ ವಲಯ ನಂ.02 ರಲ್ಲಿ ಪಲ್ಸರ್ ಬೈಕ್ ಕೆಎ-43-ಇ-0063, ಹೊಂಡಾ ಶೈನ್ ಬೈಕ್ ಕೆ.ಎ-14 ಡಬ್ಲ್ಯೂ-5036, ಟಿ.ವಿ.ಎಸ್ ಎಕ್ಸೇಲ್ ಸೂಪರ್ ಕೆಎ-13-ಇಎಫ್-2982, ಅರಸೀಕರೆ ವಲಯದಲ್ಲಿ ಟಿ.ವಿ.ಎಸ್. ಎಕ್ಸೇಲ್ ಸೂಪರ್ ಕೆ.ಎ-13-ಇಎಫ್-2982, ಬಜಾಜ್ ಡಿಸ್ಕ್‍ವರಿ -125 ಕೆಎ-13-ಇಬಿ-8387, ಚನ್ನರಾಯಪಟ್ಟಣ ಹೊಂಡಾ ಎವಿಯೆಟರ್ ಕೆ.ವಿ-04- ಹೆಚ್.ಸಿ -0813, ಹೊಂಡಾ ಡ್ರೀಮ್ ಯುಗ ಕೆ.ಎ-13-ಇಡಿ-2335, ಟಿ.ವಿ.ಎಸ್ ಎಕ್ಸೇಲ್ ಸೂಪರ್ ಕೆ.ಎ-13-ಇಡಿ-1464, ಸಕಲೇಶಪುರ ವಲಯದಲ್ಲಿ ಹಿರೋ ಹೊಂಡಾ ಸ್ಪ್ಲೇಂಡರ್ ಪ್ಲಸ್ ಕೆಎ-04-ಇಯು-7333, ಅರಕಲಗೂಡು ವಲಯದಲ್ಲಿ ಹಿರೋ ಹೊಂಡಾ ಸ್ಪ್ಲೆಂಡರ್ ಕೆ.ಎ-02-ಇಡಿ-9865, ಹೊಳೆನರಸೀನಪುರ ಟಾಟಾ ಏಸ್ ಜೀಪ್ ಗೂಡ್ಸ್ ಕೆಎ-13-ಸಿ-5662 ವಾಹನಗಳನ್ನು ಹರಾಜು ಮಾಡಲಾಗುವುದು.
ವಾಹನಗಳನ್ನು ಪರಿಶೀಲಿಸುವವರು ಮೇಲ್ಕಂಡ ಕಚೇರಿಯಲ್ಲಿ ಖುದ್ದು ಹಾಜರಾಗಿ ಪರಿಶೀಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂ 08172-268706 ಗೆ ಸಂಪರ್ಕಿಸಬಹುದಾಗಿದೆ.