ಹಾಸನ : ರಾಜ್ಯದಲ್ಲಿ ತಾಪಮಾನ ದಿನೇ ದಿನೇ ಏರುತ್ತಿದೆ. ಬೇಸಿಗೆಯ ಧಗೆಯೂ ಹೆಚ್ಚುತ್ತಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ತಾಪಮಾನ 33 ರಿಂದ 40 ಡಿಗ್ರಿ ಸೆಲ್ಸಿಯಸ್ಸ್ ಆಸುಪಾಸಿನಲ್ಲಿದೆ. ,
ಹಾಸನದಲ್ಲಿ ಇಂದು ( Apr8) ಶುಕ್ರವಾರ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖ ಲಾಗಿದ್ದರು ., ಮುಂದಿನವಾರ . 12,13 ಮಂಗಳವಾರ, ಬುಧವಾರ ಬರೋಬ್ಬರಿ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಹಾಸನದಲ್ಲಿ ಧಗೆ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ.
ಬೆಂಗಳೂರು 35 , ಚಿಕ್ಕಮಗಳೂರು 34 , ಮೈಸೂರು 34 , ಮಂಗಳೂರು 33 , ಮಂಡ್ಯ 35 , ಮಡಿಕೇರಿ 31, ಬಳ್ಳಾರಿ 39.3, ರಾಯಚೂರು 39.2, ಗದಗ 37 ಮತ್ತು ಚಿತ್ರದುರ್ಗದಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಈ ವರ್ಷ ಕರ್ನಾಟಕದಲ್ಲಿ ವಾಡಿಕೆ ಗಿಂತ ತಾಪಮಾನ ಹೆಚ್ಚಾಗಿಲ್ಲವಾದರೂ . ಸತತ ವಾಗಿ ವಾಡಿಕೆಗಿಂತ ಹಾಸನದಲ್ಲಿ ಬಿಸಿ ಗಾಳಿ ಹೆಚ್ಚು ಉಂಟಾಗುತ್ತಿದೆ. ಇನ್ನೂ ಅಂತಹ ಪರಿಸ್ಥಿತಿ ಸೃಷ್ಟಿಯಾಗಿಲು ಜಿಲ್ಲೆಯಲ್ಲಿ ಮರಗಳಸಂಖ್ಯೆ ಕಡಿಮೆಯಾಗಿ ಗಾಳಿ ಕಡಿಮೆಯಾಗಿರೋದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಕರಾವಳಿ ಪ್ರದೇಶದಲ್ಲಿ ವಾಯುಬಾರ ಕುಸಿತವಾಗುವುದರಿಂದ ಮುಂದಿನ ಶನಿವಾರ ಹಾಸನದಲ್ಲಿ ಬಿರುಗಾಳಿ, ಗುಡುಗು, ಸಿಡಿಲಿ ನಿಂದ ಕೂಡಿದ ಮಳೆಯಾಗುವ (60%) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಸರಿಯಾಗಿ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಬಂದರಷ್ಟೆ ಹಾಸನದಲ್ಲಿ ಬಿಸಿಲ ಬೇನೆಯಿಂದ ಉಳಿಗಾಲ , ಬಡವರ ಊಟಿ ಯಾಗಿ ಉಳಿಯಲು ಮರಗಳೆ ಆಧಾರ. ಮುಂದಿನ ಭವಿಷ್ಯ