ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಮುಸ್ಲಿಮೇತರ ಬಾಂಧವರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.

0

ಕನ್ನಡದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ
ಪ್ರಥಮ ಬಹುಮಾನ: 10,000/-ರೂ.
ದ್ವಿತೀಯ ಬಹುಮಾನ: 7,000/-ರೂ.
ತೃತೀಯ ಬಹುಮಾನ: 5,000/-ರೂ.

ವಿಷಯ:
“ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ”

ನಿಯಮಗಳು ಮತ್ತು ನಿಬಂಧನೆಗಳು
(ಪ್ರಬಂಧದ ಕುರಿತು ಈ ಹಿಂದಿನ ಪ್ರಕಟಣೆಯನ್ನು ರದ್ದುಗೊಳಿಸಲಾಗಿದೆ. ಹೊಸ ನಿಯಮಗಳು ಹೀಗಿವೆ.)

 1. ಈ ಪ್ರಬಂಧ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ಮುಸ್ಲಿಮೇತರ ಬಾಂಧವರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
 2. ಪ್ರಬಂಧವು ಸ್ವತಂತ್ರ ಹಾಗೂ ಸ್ವರಚಿತವಾಗಿರಬೇಕು. ಹಾಗೂ ಈ ಮುನ್ನ ಎಲ್ಲಿಯೂ ಪ್ರಸಾರ ಅಥವಾ ಪ್ರಕಟವಾಗಿರಬಾರದು.
 3. ಪ್ರಬಂಧವು ಸ್ಪಷ್ಟ ಕನ್ನಡ ಭಾಷೆಯಲ್ಲಿ ಸ್ವಂತ ಹಸ್ತಾಕ್ಷರಗಳಲ್ಲಿ ಬರೆದಿರಬೇಕು, ಜೆರಾಕ್ಸ್ ಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ.
 4. ಪ್ರಬಂಧವು A4 ಹಾಳೆಯ ಕನಿಷ್ಟ 4 ಪುಟಗಳು ಗರಿಷ್ಟ 5 ಪುಟಗಳಿಗೆ ಸೀಮಿತವಾಗಿರಬೇಕು.
 5. ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಪುಟದಲ್ಲಿ ಬರೆದು ಭಾವಚಿತ್ರವನ್ನು ಲಗತ್ತಿಸಿರಬೇಕು.
 6. ಪ್ರಬಂಧವನ್ನು ಕೊನೆಯ ದಿನಾಂಕದ ಒಳಗೆ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವ ಸಹಜ ಅಂಚೆ ಅಥವ ಕೋರಿಯರ್ ಮೂಲಕ ತಲುಪಿಸಬೇಕು.
 7. ಸಂಘಟನೆಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
 8. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
 9. ಪ್ರಬಂಧಗಳು ತಲುಪಿಸಲು ಕೊನೆಯ ದಿನಾಂಕ: 5-12-2020.
 10. ಪ್ರಬಂಧಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು (ಪ್ರವಾದಿ ಮುಹಮ್ಮದ್ (ಸ) ಜೀವನ ಮತ್ತು ಸಂದೇಶ, 250 ರೂ. ಲೋಕಾನುಗ್ರಹಿ ಪ್ರವಾದಿ
  ಮುಹಮ್ಮದ್ (ಸ), 120 ರೂ. ಮುಹಮ್ಮದ್ (ಸ) ಎಲ್ಲರಿಗಾಗಿ, 60 ರೂ. ಲೋಕನಾಯಕ ಪ್ರವಾದಿ ಮುಹಮ್ಮದ್ (ಸ), 10 ರೂ.) ಓದಲು
  ಬಯಸುವವರಿಗೆ 50% ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ನೀಡಲಾಗುವುದು.
  ವಿಳಾಸ: ಇಸ್ಲಾಮಿಕ್ ಸೆಂಟರ್, ಹೆಚ್.ಎನ್ ಪುರ ರಸ್ತೆ,ಕೆನರಾ ಬ್ಯಾಂಕ್ ಹಿಂಭಾಗ, ಹಾಸನ. 573201.
  ಬಹುಮಾನ ವಿತರಣಾ ಸಮಾರಂಭ, ದಿನಾಂಕ: 20-12-2020.
  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9886008670, 8217667375
  ಜಮಾಅತೆ ಇಸ್ಲಾಮೀ ಹಿಂದ್, ಹಾಸನ.

LEAVE A REPLY

Please enter your comment!
Please enter your name here