ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು. ಕೊಳಲು ಶ್ರೀ_ಗೋಪಾಲಕೃಷ್ಣ ಸ್ವಾಮಿದೇವಸ್ಥಾನ, ದೇವಿಗೆರೆ, ಹಾಸನ

0

ಹಾಸನ ಹಿಂದೆ ಹೊಯ್ಸಳ ಸಾಮ್ರಾಜ್ಯವಾಗಿದ್ದು, ಹೊಯ್ಸಳರ ಕಾಲದಲ್ಲಿ ಬಹಳಷ್ಟು ದೇವಸ್ಥಾನಗಳು ನಿರ್ಮಾಣಗೊಂಡವು. ಆ ದೇವಸ್ಥಾನಗಳಲ್ಲಿ ಈ ದೇವಿಗೆರೆಯ ಶ್ರೀವೇಣುಗೋಪಾಲ ಸ್ವಾಮಿ ದೇವಸ್ಥಾನ ಕೂಡ ಒಂದು. ಈ ದೇವಾಲಯವನ್ನು ಸುಮಾರು ಕ್ರಿ.ಶ.1206ಕ್ಕೆ ಮುಂಚೆ ನಿರ್ಮಾಣ ಮಾಡಿರಬಹುದು ಎಂದು ಅಂದಾಜಿಸಿದರು.

ಈ ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಶಾಸನಗಳು ಇದುವರೆಗೂ ಸಿಕ್ಕಿಲ್ಲ. ನಮ್ಮ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿರುವ ಉಡುಪಿ ಶ್ರೀಕೃಷ್ಣ, ಗುರುವಾಯೂರು ಕೃಷ್ಣ ವಿಗ್ರಹಗಳಿಗಿಂತಲೂ ಬಹಳ ವಿಶೇಷ ಕೆತ್ತನೆಯುಳ್ಳ ವೇಣುಗೋಪಾಲನ ವಿಗ್ರಹ ಕಾಣಸಿಗುವುದು ಹೊಯ್ಸಳರ ನಾಡಾದ ಈ ಹಾಸನದಲ್ಲಿ ಮಾತ್ರ. ಈ ವೇಣುಗೋಪಾಲ ವಿಗ್ರಹದ ಪ್ರಭಾವಳಿಯಲ್ಲಿ ಗೋವುಗಳ ಕಥಾ ಸಾರಾಂಶ ಸಾರುವ ಕೆತ್ತನೆ ಹಾಗೂ ಸರ್ಪದ ಎಡೆಯಾಕಾರದ ಬಳ್ಳಿಯ ಕೆತ್ತನೆಯು ಬಹಳ ವಿಶೇಷವಾಗಿದೆ. ಈ ವಿಗ್ರಹ ಸುಮಾರು ಮೂರರಿಂದ ನಾಲ್ಕು ಅಡಿ ಎತ್ತರದವರೆಗೂ ಇದೆ.

ಈ ರೀತಿಯ ವಿಗ್ರಹವನ್ನು ಹೋಲುವಂತ ವಿಗ್ರಹ ಮತ್ತೆ ಕಾಣಸಿಗುವುದು ಚಿಕ್ಕಮಗಳೂರು ಜಿಲ್ಲೆಯ ಸಣ್ಣ ಗ್ರಾಮವಾಗಿರುವ ಬೆಳವಾಡಿಯ ಹೊಯ್ಸಳ ಕಾಲದ ವೀರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ. ದಕ್ಷಿಣ ಗರ್ಭಗೃಹದಲ್ಲಿರುವ ವೇಣುಗೋಪಾಲ ವಿಗ್ರಹ ತ್ರಿಭಂಗದಲ್ಲಿದ್ದು, ಕೊಳಲನ್ನು ಊದುತ್ತಿರುವಂತೆ ರಚಿತವಾಗಿದೆ. ಹೊಯ್ಸಳ ದೇವಾಲಯಗಳಲ್ಲಿ ಕಂಡುಬರುವ ಕೃಷ್ಣನ ವಿಗ್ರಹಗಳಲ್ಲಿ ಈ ವೇಣುಗೋಪಾಲ ವಿಗ್ರಹಗಳು ಹೆಚ್ಚು ಸುಂದರವಾಗಿವೆ ಮತ್ತು ಇಲ್ಲಿ ಭೇಟಿ ನೀಡಿದ ಬಹಳಷ್ಟು ಭಕ್ತರು ನಮಗೆ ಒಳ್ಳೆಯದಾಗಿದೆ ಎಂದು ಹೇಳುತ್ತಾರೆ. ಹಾಸನದ ಈ ವೇಣುಗೋಪಾಲ ಸ್ವಾಮಿಯ ಪಕ್ಕದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹವು ಸಹ ಇದೆ.

LEAVE A REPLY

Please enter your comment!
Please enter your name here