13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಕೋರ್ಟ್ ಕಟ್ಟಡಕ್ಕೆ ಚಾಲನೆ ನೀಡಿದ ಅರಸೀಕೆರೆ ಶಾಸಕ ಕೆಎಂಎಸ್

0

ಅರಸೀಕೆರೆ ನಗರದಲ್ಲಿ  ನ್ಯಾಯಾಂಗ ಇಲಾಖೆಯ ಕೋರ್ಟ್‌  ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಇಂದು ಚಾಲನೆ ನೀಡಿದರು.
ರೂ.13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಕಟ್ಟಡದಲ್ಲಿ 6 ಕೋರ್ಟ್ ಹಾಲ್ ಗಳನ್ನು ನಿರ್ಮಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎನ್.ಡಿ.ಪ್ರಸಾದ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದ ಕೇಶವಮೂರ್ತಿ,  ಮುಖಂಡರಾದ ಮಾಜಿ ತಾ.ಪಂ. ಸದಸ್ಯ ಕೃಷ್ಣೇಗೌಡ, ಮೈಲನಹಳ್ಳಿ ಗುರು. ಯಾದಾಪುರ ತೇಜು, ಗುತ್ತಿಗೆದಾರರಾದ ಅಪೂರ್ವ ನಿರ್ಮಾಣ ಸಂಸ್ಥೆಯವರು ಹಾಜರಿದ್ದರು.

ಇಂದು #ಮಾಡಾಳು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ3054 ಯೋಜನೆಯಡಿ ರಾಜ್ಯ ಹೆದ್ದಾರಿ ನಿರ್ವಹಣಾ ವೆಚ್ಚದಲ್ಲಿ ಸುಮಾರು ರೂ.4.5 ಕೋಟಿ ವೆಚ್ಚದಲ್ಲಿ ಹುಳಿಯಾರು ಕೇರಳಾಪುರ ರಸ್ತೆಯ ಅರಸೀಕೆರೆ ತಾಲ್ಲೂಕಿನ ಗಡಿಯಿಂದ ಅಗ್ಗುಂದವರಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಮಾಡಲಾಯಿತು,,
ಈ ಸಂದರ್ಭದಲ್ಲಿ  ಈ ಮೊದಲು ಹುಳಿಯಾರು ಕೇರಳಾಪುರ ರಸ್ತೆಯು ಭಾರತ ಮಾಲಾ ಯೋಜನೆಯಡಿ ಸೇರಿದ್ದು4 ಪಥದ ರಸ್ತೆ ನಿರ್ಮಾಣವಾಗಬೇಕಿತ್ತು, ಆದರೆ ರಸ್ತೆ ಮಾರ್ಗ ಬದಲಾಗಿದ್ದರಿಂದ ನಮ್ಮ ಕ್ಷೇತ್ರದ ಅರಸೀಕೆರೆಯಿಂದ ತಾಲ್ಲೂಕು ಗಡಿವರಗೆ  ರಸ್ತೆ ಅಭಿವೃದ್ಧಿಯಾಗದೆ ಹಾಳಾಗಿದೆ..ಸರ್ಕಾರದಲ್ಲಿ ಅನುದಾನ ಲಭ್ಯವಿರಲಿಲ್ಲ,ಆದರೂ ಹೋರಾಟ ಮಾಡಿ ಸದರಿ ರಸ್ತೆಗೆ ಅನುದಾನ ತಂದಿದ್ದೇನೆ.ಈಗ ರಸ್ತೆ ಅಭಿವೃದ್ಧಿ ಆಗಲಿದೆ ಎಂದರು.. ಆದರ್ಶ ಗ್ರಾಮ ಯೋಜನೆಯಡಿ ಇಡೀ ಮಾಡಾಳು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ, ಮನೆ ಮನೆಗೆ ಗಂಗೆ ಯೋಜನೆಯಡಿ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಿದ್ದು, ಕಾಮಗಾರಿ ಕೆಲವೇ ದಿನಗಳಲ್ಲಿ ಮುಗಿಯಲಿದೆ…ನನ್ನ ಉದ್ದೇಶ ಅಭಿವೃದ್ಧಿ ಎಂದರು.
ಮಾಜಿ ಜಿ.ಪಂ.ಸದಸ್ಯ ಮಾಡಾಳು ಸ್ವಾಮಿ ಮಾತನಾಡಿ ಶಾಸಕರು ಹೋರಾಟ ಮಾಡಿ ವಿವಿಧ ಯೋಜನೆಗಳಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ ನಾವು ಅವರಿಗೆ ಅಭಾರಿಯಾಗಿದ್ದೇವೆ ಎಂದು ತಿಳಿಸಿದೆ
ಈ ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನೀತ, ಉಪಾಧ್ಯಕ್ಷ ಗಂಗಾಧರ, ಸೊಸೈಟಿ ಅಧ್ಯಕ್ಷ ನಟೇಶ್, ತಾ.ಪಂ.ಮಾಜಿ ಸದಸ್ಯೆ ವನಜಾ ಪ್ರಕಾಶ್, ರಾಂಪುರ ಗ್ರಾ.ಪಂ. ಅಧ್ಯಕ್ಷ   ಸುರೇಶ್ ,ಡಿ.ಎಂ.ಕುರ್ಕೆ ಸುರೇಶ್, ನಂಜುಂಡಶೆಟ್ಟಿ ಮಾಜಿ ವರದಿಗಾರರಾದ ಶಿವಲಿಂಗಪ್ಪ, ಮುಖಂಡರಾದ  ಕೊಡ್ಲಿ ಬಸವರಾಜು, ಶಶಿವಾಳ ಗಂಗಾಧರ್, ವಿಜಿ, ದಾಸಪ್ಪ, ಶಿವದ್ವಜ್, ಮಹೇಶ್, ಮೈಲಾರಪ್ಪ ಗುತ್ತಿಗೆದಾರ ಬಸವರಾಜು, ಇಲಾಖೆ ಎ.ಇ.ಇ ನಟೇಶ್ ಹಾಜರಿದ್ದರು…

LEAVE A REPLY

Please enter your comment!
Please enter your name here