ಸಕಲೇಶಪುರ: ಕಳೆದ 6 ದಿನಗಳ ಹಿಂದೆ ತಾಲೂಕಿನ ಸುಳ್ಳಕ್ಕಿ ಸಮೀಪ ಬೈಕ್ ಹಾಗೂ ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ನಲ್ಲಿದ್ದ ಹೊಸಹಳ್ಳಿ ಗ್ರಾಮದ ಜಗದೀಶ್ (45) ಸ್ಥಳದಲ್ಲೆ ಮೃತಪಟ್ಟರೆ, ಅವರ ಪುತ್ರ ಪ್ರೀತಮ್ (22) ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಅವರು ಸಹ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಯುವಕನ ಅಂತ್ಯಸಂಸ್ಕಾರ ಇಂದು ಸಂಜೆ ಹೊಸಹಳ್ಳಿ ಗ್ರಾಮದಲ್ಲಿ ನಡೆಯಲಿದೆ. ಒಂದು ವಾರದಲ್ಲಿ ತಂದೆ ಹಾಗೂ ಮಗನನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಕುಟುಂಬ ಸಂಪೂರ್ಣವಾಗಿ ಶೋಕ ಸಾಗರದಲ್ಲಿ ಮುಳುಗಿದೆ.