ಅರಸೀಕೆರೆ ನಗರದ ಸಂತೆ ಮೈದಾನ ; ಈ ಮಾರುಕಟ್ಟೆಯಲ್ಲಿ ನಿಲ್ಲುವುದಕ್ಕೂ ಹಾಗೂ ಕೂರುವುದುಕ್ಕೂ ಜಾಗ ಇಲ್ಲ

0

ಅರಸೀಕೆರೆ – ಇದು ನಗರದ ಸಂತೆ ಮೈದಾನ ಇಲ್ಲಿ ಸುಮಾರು ವರುಷಗಳಿಂದ ಪ್ರತಿ ಶುಕ್ರವಾರ ಸಂತೆ ನಡೆಯುತ್ತದೆ ಸಣ್ಣಪುಟ್ಟ ರೈತರು ತಾವು ಬೆಳೆದಂತ ತರಕಾರಿಗಳನ್ನು ನೇರವಾಗಿ ಮಾರಾಟ ಮಾಡುತ್ತಾರೆ ಹಾಗೂ ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗಳಿಂದ ಹೋಲ್ಸೇಲ್ ತರಕಾರಿ ವ್ಯಾಪಾರ ನಡೆಯುತ್ತದೆ, ಹಾಗೂ ಅರಸಿಕೆರೆ ತಾಲೂಕಿನ ಟೊಮೋಟೊ ಹಣ್ಣು ದೇಶದ ಹಲವು ರಾಜ್ಯಗಳಲ್ಲಿ ಹಾಗೂ ದೇಶದ ರಾಜ್ಯದಾನಿಯವರಿಗೂ ಕಳಸಲಾಗುತ್ತದೆ. ಆದರೆ ಇಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ.

ರೈತರು ತಾವು ಬೆಳೆದ ತರಕಾರಿ ಮಾರಬೇಕಾದರೆ ತಮ್ಮ ಮನೆಯಿಂದ ರಾತ್ರಿ 2 ಗಂಟೆಗೆ ಹೊರಡಬೇಕು. ಈ ಮಾರುಕಟ್ಟೆಯಲ್ಲಿ ನಿಲ್ಲುವುದಕ್ಕೂ ಹಾಗೂ ಕೂರುವುದುಕೂ ಜಾಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಮಾರುಕಟ್ಟೆಯಲ್ಲಿ ಓಡಾಡೋದಕ್ಕೂ ತೊಂದರೆಯಾಗುತ್ತದೆ ಹಾಗೂ ತರಕಾರಿಗಳನ್ನು ಕೂಚ್ಚೆಯಲಿ ಇಟ್ಟು ವ್ಯಾಪಾರ ಮಾಡಬೇಕಾಗುತ್ತದೆ. ಇಲ್ಲಿ ಶೌಚಾಲಯ ಇದ್ದರೂ ಅದು ಹಾಳಾಗಿ ಹೋಗಿದೆ ಉಪಯೋಗಿಸಲು ಯೋಗ್ಯಕರಾಗಿಲ್ಲ ಇಷ್ಟೆಲ್ಲಾ ತೊಂದರೆಗಳಿದ್ದರೂ ನಗರಸಭೆ ಹಾಗೂ ಎಪಿಎಂಸಿ ಅವರು ಕಂಡರೂ ಕಂಡರೆಯದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಪ್ರತಿದಿನ ಈ ಮಾರುಕಟ್ಟೆಗೆ ಬರುವವರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಇಡೀ ಶಾಪ ಹಾಕಿ ಹೋಗುತ್ತಿದ್ದಾರೆ.

ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಗಳು ಗಮನ ನೀಡಿ ದಯಮಾಡಿ ರೈತರಿಗೆ ಹಾಗೂ ಸಗಟು ವ್ಯಾಪಾರಸ್ಥರಿಗೆ ಈ ಅಸ್ವಚ್ಛತೆಯಿಂದ ಬಹಳ ತೊಂದರೆಯಾಗಿದ್ದು ರೈತರು ತಾವು ಬೆಳೆದ ತರಕಾರಿಯನ್ನು ಈ ಕೊಳಕು ನೀರಿನಲ್ಲಿ ಇಟ್ಟು ಮಾರಬೇಕಾಗಿದೆ ಹಾಗೂ ಇದನ್ನು ವ್ಯಾಪಾರ ಮಾಡುವ ಕೊಂಡುಕೊಳ್ಳುವ ಗ್ರಹಕರು ಈ ನೈರ್ಮಲಿದ ಸಮಸ್ಯೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಹಲವಾರು ಗಂಟಲು, ಮೂಗು ಹಾಗೂ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತವ ಪರಿಸ್ಥಿತಿ ಉಂಟಾಗಿದೆ ದಯಮಾಡಿ ಕೂಡಲೆ ಸ್ವಚ್ಛತೆಯನ್ನ ಹಾಗೂ ಸ್ಥಳದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ತರಕಾರಿಯನ್ನು ಕೂಡಲೇ ತೆರುಗೊಳಿಸಬೇಕು ಎಂದು ರೈತರು, ವರ್ತಕರು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here