ಅವೈಜ್ಞಾನಿಕವಾಗಿ ರಾಮನಾಥಪುರ ಕಸ ವಿಲೇವಾರಿ ಘಟಕ ನಿರ್ವಹಣೆ ಆರೋಪ. ಗ್ರಾಮಸ್ಥರ ತೀವ್ರ ಆಕ್ರೋಶ. ಘಟಕ ಸ್ಥಳಾಂತರಿಸುವಂತೆ ಬಾರಿ ಒತ್ತಾಯ. ಮಲ ತಂದು ಸುರಿಯುತ್ತಿರುವುದಕ್ಕೆ ತೀವ್ರ ಯಾವ ಗ್ರಾಮಸ್ಥರು ವಿರೋಧ ಮಾಡೋದಿಲ್ಲ ಹೇಳಿ

0

ಅರಕಲಗೂಡು: ತಾಲೂಕಿನ ಬಿಳಗೂಲಿ- ರಾಮನಕೊಪ್ಪಲು ಬಳಿ ಸ್ಥಾಪಿಸಿರುವ ಘನ ತ್ಯಾಜ್ಯ ನಿರ್ವಹಣಾ ಘಟಕ ರದ್ದುಗೊಳಿಸುವಂತೆ ಬುಧವಾರ ಗ್ರಾಮಸ್ಥರು ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಘಟಕದ ಪಕ್ಕದ ಬಡವಾಣೆ ರಸ್ತೆಯಲ್ಲಿ ಆಹೋರಾತ್ರಿ ಧರಣಿ ಕೈಗೊಂಡಿರುವ ಗ್ರಾಮಸ್ಥರು, ಮಹಿಳೆಯರು ಘನ ತ್ಯಾಜ್ಯ ನಿರ್ವಹಣಾ ಘಟಕದ ಬಳಿ ತೆರಳಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.


ಕಳೆದ 2017ರಲ್ಲಿ ಗ್ರಾಮದ ಸರ್ವೆ ನಂ. 119ರಲ್ಲಿ 4 ಎಕರೆ ಜಾಗದಲ್ಲಿ ಕಾವೇರಿ ನದಿಯಿಂದ ನೀರೆತ್ತಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವುದಾಗಿ ಅಧಿಕಾರಿಗಳು ಸುಳ್ಳುನೆಪ ಹೇಳಿಕೊಂಡು ಗ್ರಾಮಸ್ಥರ ಮನವೊಲಿಸಿ ಸರ್ವೆ ಕಾರ್ಯ ನಡೆಸಿ ನಂತರ ಘನ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಿದ್ದಾರೆ. ಘಟಕದಲ್ಲಿ ಹಸಿ ಕಸ ಒಣ ಕಸ ವಿಂಗಡಿಸದೆ ಸುರಿದು ಬೆಂಕಿ ಹಚ್ಚಲಾಗಿದೆ. ಟಾಯ್ಲೆಟ್ ಮಲವನ್ನು ತಂದು ಸುರಿಯಲಾಗುತ್ತಿದೆ. ಪರಿಣಾಮವಾಗಿ ಸುತ್ತಮುತ್ತಲಿನ ವಾತವಾರಣ ಕಲುಷಿತವಾಗಿ ಗಬ್ಬೆದ್ದು ಹೋಗಿದೆ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ಆರೋಪಿಸಿದರು.


ಘಟಕದಲ್ಲಿ ಕಸ ಕಡ್ಡಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಹರಡಿ ಹದ್ದು ಕಾಗೆ ನಾಯಿಗಳ ಕಾಟ ಹೆಚ್ಚಿದೆ. ಘಟಕದ ಸುತ್ತಮುತ್ತ ಕೃಷಿ ಹೊಲದಲ್ಲಿ ರೈತಾಪಿ ವರ್ಗದ ಜನರು ಕೆಲಸ ಮಾಡಲಾಗದೆ ಉಸಿರುಗಟ್ಟುವ ವಾತಾವರಣವಿದ್ದು ಮೂಗು ಮುಚ್ಚಿ ತಿರುಗಾಡಬೇಕಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಕೃಷಿ ಜಮೀನು ಸೇರುತ್ತಿದ್ದು ಬೆಳೆಯ ಆಹಾರ ಕೂಡ ವಿಷವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ತ್ಯಾಜ್ಯ ನಿರ್ವಹಣಾ ಘಟಕದ ಪಕ್ಕದಲ್ಲೇ ಜನವಸತಿ ಬಡಾವಣೆ ಇದೆ. ಪ್ರತಿನಿತ್ಯ ಮಲ ತ್ಯಾಜ್ಯಗಳಿಂದ ಗಬ್ಬೆದ್ದು ದುರ್ವಾಸನೆ ಬೀರುತ್ತಿರುವ ಘಟಕದಿಂದಾಗಿ ನಿವಾಸಿಗಳು ವಾಸಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಘಟಕಕ್ಕೆ ಹೊಂದಿಕೊAಡ ಜಾಗದಲ್ಲಿ ಗ್ರಾಮಸ್ಥರು ಒಗ್ಗೂಡಿ ದೇವರ ಹಬ್ಬ ನಡೆಸುತ್ತಾರೆ. ಘಟಕದಲ್ಲಿ ತ್ಯಾಜ್ಯ ಕಲುಷಿತವಾಗಿ ಅಂತರ್ಜಲ ಕೊಳವೆ ಬಾವಿ ಸೇರುತ್ತಿದ್ದು ಜನರು ಕಲುಷಿತ ನೀರು ಸೇವಿಸಬೇಕಾಗಿದೆ. ಇತ್ತ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ನೀಡಲಿಲ್ಲ.

ನೀರಿನ ಟ್ಯಾಂಕ್ ನಿರ್ಮಿಸುವುದಾಗಿ ಸುಳ್ಳು ಹೇಳಿ ಗ್ರಾಮಸ್ಥರ ವಿರೋಧದ ನಡುವೆ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಿ ಊರಿನ ನಿವಾಸಿಗಳಿಗೆ ತೊಂದರೆ ನೀಡಲಾಗಿದೆ. ಕೂಡಲೇ ಘಟಕವನ್ನು ಸ್ಥಗಿತಗೊಳಿಸಬೇಕು. ಅಲ್ಲಿತನಕ ಅಹೋರಾತ್ರಿ ಧರಣಿ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.


ಮುಖಂಡರಾದ ಮಹದೇಶ, ರಾಮೇಗೌಡ, ರೇವಣ್ಣ, ಸ್ವಾಮಿಗೌಡ, ಕರಿ ಕಾಳೇಗೌಡ, ನಾಗಣ್ಣ, ಚಿಕ್ಕೇಗೌಡ, ಪಾಪೇಗೌಡ, ಅಶ್ವತ್ಥ, ಸರೋಜಮ್ಮ, ಗೀತಾ, ಮಂಜಮ್ಮ, ಮಂಜೇಗೌಡ, ಕುಮಾರ, ದೊಡ್ಡಯ್ಯ, ದ್ಯಾವೇಗೌಡ, ರಾಜೇಗೌಡ, ಲವ, ನಿಂಗೇಗೌಡ, ಅರವಿಂದ, ಶಿವಣ್ಣ, ನಿಂಗರಾಜು, ರಮೇಶ್, ಸುಬ್ರಹ್ಮಣ್ಯ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here