ವಾಸದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಟ್ಟಣದ ಕಾಮತಿ ಗ್ರಾಮದಲ್ಲಿ ಇಂದು ನಡೆದಿದೆ. ತಾಲೂಕಿನ ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾಮತಿ ಗ್ರಾಮದ ರತ್ನಮ್ಮ ಸೋಮಣ್ಣ ಎಂಬ ವರಿಗೆ ಸೇರಿರುವ ಮನೆಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ದವರು ಆಗಮಿಸಿ ಹೆಚ್ಚಿನ ಅನಾ ಹುತ ತಪ್ಪಿಸಿದ್ದಾರೆ.ಕೆಇಬಿ ಇಲಾಖೆಯವರು ಪರಿಶೀಲನೆ ನಡೆಸಿದರು. ಸೊಸೈಟಿಗೆ ಹೆಬ್ಬಟ್ಟು ಕೊಡಲು ನಾವು ಹೋಗಿದ್ದೇವು. ಮಕ್ಕಳು ಅಂಗನವಾಡಿ, ಶಾಲೆಗೆ ಹೋಗಿದ್ದವು. ಮಕ್ಕಳು ಮನೆಯ ಲ್ಲಿಯೇ ಇರುತ್ತದ್ದವು ಇಂದು ಮಕ್ಕಳು ಇದ್ದಿದ್ದರೆ ದೇವರೇ ಗತಿ ಎಂದು ಮನೆ ಕಳೆದುಕೊಂಡ ಮಹಿಳೆ ಗೋಳಿಡುತ್ತಿದ್ದರು.
ವಿದ್ಯುತ್ ಅವಘಡದಿಂದ ಬೆಂಕಿ ಮನೆಗೆ ಹತ್ತಿಕೊಂಡಿದೆ ಎನ್ನಲಾಗಿದ್ದು ಮನೆಯಲ್ಲಿದ್ದ ಅಪಾರ ಲಕ್ಷಾಂತರೂ ವಸ್ತುಗಳು ಸುಟ್ಟುಕರಕಲಾಗಿವೆ. ಮನೆ ಕಳೆದು ಕೊಂಡು ಕುಟುಂಬ ಬೀದಿಪಾಲಾಗಿದ್ದು ನೊಂದ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದುಗ್ರಾಮಸ್ಥರು ಆಗ್ರಹಿಸಿದ್ದಾರೆ.