ಎಚ್.ಪಿ.ಸಿ.ಎಲ್ ಪೈಪ್ ಲೈನ್ ಅಳವಡಿಕೆಗೆ – ವಿಜಯ್ ಭಾಸ್ಕರ್ ಸೂಚನೆ

0

ಹಾಸನ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಾದು ಹೋಗಿರುವ ಎಚ್.ಪಿ.ಸಿ.ಎಲ್ ಪೈಪ್ ಲೈನ್ ಸಮಸ್ಯೆ ಅಡ್ಡಿಯ ಬಗ್ಗೆ ಸೂಕ್ತ ಕ್ರಮವಹಿಸುವ ವಿಷಯ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಸೂಚನೆ ನೀಡಿದರು.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಇತರೆ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಹಾಸನ ತಾಲ್ಲೂಕಿನ ಬೊಮ್ಮನಹಳ್ಳಿ, ದೊಡ್ಡಬಸವನಹಳ್ಳಿ, ಕಂಚನಾಯಕನಹಳ್ಳಿ, ದೊಡ್ಡಹೊನ್ನನಹಳ್ಳಿ, ಬುಸ್ತಿನಹಳ್ಳಿ, ಕಸ್ತೂರಳ್ಳಿ, ಗೇಣಗೇರಿ, ಸಮುದ್ರಹಳ್ಳಿ, ಹಾಗೂ ಇತರೆ ಗ್ರಾಮಗಳ ಪೈಪ್ ಲೈನ್ ಅಳವಡಿಕೆಗೆ ರೈತರ ತಕರಾರುಗಳಿದ್ದು ಎಚ್.ಪಿ.ಸಿ.ಎಲ್ ಅಧಿಕಾರಿಯವರು ಪೊಲೀಸ್ ರಕ್ಷಣೆ ಪಡೆದು ಕ್ರಮಕೈಗೊಳ್ಳುವಂತೆ ತಿಳಿಸಿದರು’
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಮತ್ತು ಇನ್ನಿತರ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here