ಏಕಾಂಗಿ ಹೋರಾಟಗಾರ ತೀರ್ಥಪ್ಪ ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು

0

ತೀರ್ಥಪ್ಪ ಮಾತನಾಡಿ, ತಾಲ್ಲೂಕಿನ ಕೆಸಗೋಡು ಗ್ರಾಮದಲ್ಲಿ ಇರುವಂಥ ಸರ್ಕಾರಿ ಆಸ್ಪತ್ರೆ ತೀವ್ರ ಹದಗಟ್ಟಿದ್ದು, ದನ ಹಾಗೂ ನಾಯಿಗಳ ವಾಸಸ್ಥಾನವಾಗಿದೆ ಎಂದು ದೂರಿದರು. ಅಧಿಕಾರಿಗಳು ಸಮಸ್ಯೆ ಆಲಿಸುತ್ತಿಲ್ಲ, ಬಿಕ್ಕೋಡು, ನಾಗೇನಹಳ್ಳಿ ಹಾಗೂ ಗೆಂಡೇಹಳ್ಳಿ ಆಸ್ಪತ್ರೆಗಳು ಸಹ ಅವ್ಯವಸ್ಥೆಯಿಂದ ಕೂಡಿವೆ. ರಾತ್ರಿ ಸಮಯದಲ್ಲಿ ಏನಾದರೂ ತೊಂದರೆಯಾದರೆ ಒಬ್ಬ ವೈದ್ಯರೂ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರಿಗೆ ಹೇಳಿದರೂ ಗಮನ ಹರಿಸುತ್ತಿಲ್ಲ, ಮಲೆನಾಡು ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ

LEAVE A REPLY

Please enter your comment!
Please enter your name here