ಒಂದು ಸೀಟು ಗೆಲ್ಲೋದು ಕಷ್ಟ ಅವರಿಗೆ, ಹಾಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಬರುತ್ತಿದ್ದಾರೆ

0

ಮೋದಿ ಪ್ರಧಾನಿ ಆಗ್ತಾರೆ ಅಂತ ಅವರು ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಗೆ ಸಹಾಯ ಮಾಡ್ತಿನಿ ಎಂಬ ಮೈತ್ರಿಗೆ ಒಪ್ಪಿದರೆ ಅವರು ಬದಲಾಗಿದ್ದಾರೆ ಎಂದರ್ಥ, ಪಕ್ಷ ಉಳಿಸಿಕೊಳ್ಳೋಕೆ ಮೈತ್ರಿ ಮಾಡಿಕೊಳ್ಳೋಕೆ ಬಂದರೆ ಜೆಡಿಎಸ್ ಉಳಿಸೋಕೆ ನಾವ್ ಯಾಕ್ ಸಹಕಾರ ಮಾಡಬೇಕು ?? ಮೋದಿ ಮತ್ತೆ ಪ್ರಧಾನಿ ಆಗ್ತಾರೆ ಅಂದ್ರೆ ನಮ್ಮ ಶತ್ರು ಆದರೂ ಮೈತ್ರಿ ವಿಚಾರದಲ್ಲಿ ನಾವು ನಂಬುತ್ತೇವೆ, ಯಾರೋ ತಮ್ಮ ಪಕ್ಷದ ರಾಜಕೀಯ ಅಸ್ತಿತ್ವ ಹೋಗ್ತಾ ಇದೆ ಅದನ್ನು ಉಳಿಸಿಕೊಳ್ಳುತ್ತೇವೆ ಎಂದು ಕೊಂಡರೆ, ಅದು ಬತ್ಲಬಿ ರಾಜಕಾರಣ ಆಗತ್ತೆ !

ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ, ಹಾಸನದಲ್ಲಿ ಅವರ ಕುಟುಂಬದ ಅಭ್ಯರ್ಥಿಯಾದರೆ ?? ನಾಲ್ಕು ತಿಂಗಳ ಹಿಂದೆ ನಮ್ಮ ಪಕ್ಷದ ವಿರುದ್ಧ ಚುನಾವಣೆ ಮಾಡಿ, ಇದೀಗ ಬಿಜೆಪಿ ಅವರು ನಮಗೆ ಓಟು ಹಾಕುತ್ತಾರೆ ಎಂದರೆ, ರಾಜಕಾರಣ ಗಣಿತವಲ್ಲ, ರಸಾಯನಶಾಸ್ತ್ರ, ಆ ರಸಾಯನಶಾಸ್ತ್ರ ಹಾಸನದಲ್ಲಿ ಮಾತ್ರ ನಡೆಯಲ್ಲ. ಯಾವ ಪ್ರೀತಮ್ ಗೌಡನ ರಾಜಕೀಯದಿಂದ ಮುಗಿಸೋ ಯೋಚನೆ ಯೋಜನೆ ಮಾಡಿದ್ದರೋ, ಅವರ ಕಾರ್ಯಕರ್ತರು ಬಂದು ವೋಟ್ ಹಾಕಿಸಿ ಕೊಡಿ ಎಂಬ ಮನಸ್ಥಿತಿ ಹೇಗೆ ಬರುತ್ತದೆ ? ಒಂದು ಸೀಟು ಗೆಲ್ಲೋದು ಕಷ್ಟ ಅವರಿಗೆ, ಹಾಗಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಬರುತ್ತಿದ್ದಾರೆ – ಪ್ರೀತಮ್ ಜೆ ಗೌಡ (ಮಾಜಿ ಶಾಸಕರು, ಹಾಸನ ವಿಧಾನಸಭಾ ಕ್ಷೇತ್ರ , ಬಿಜೆಪಿ)

LEAVE A REPLY

Please enter your comment!
Please enter your name here