ಕಾಡಾನೆ ಹಾವಳಿ: ಹೋರಾಟಗಾರ ಮಂಜುನಾಥ್ ಮನೆಗೆ ದಿಡೀರ್ ಭೇಟಿ ನೀಡಿದ ಸಂಸದ ಪ್ರಜ್ವಲ್ ರೇವಣ್ಣ

0

ಪ್ರಕರಣ ದಾಖಲಾಗಿ ಜೈಲು ಸೇರಿದ್ದ 11 ಜನರು

ಸಕಲೇಶಪುರ : ಕಾಡಾನೆ ದಾಳಿಯಿಂದ ಮೃತ ಪಟ್ಟ ಮಹಿಳೆಯ ಕುಟುಂಬದ ಪರವಾಗಿ ನ್ಯಾಯ ಕೇಳಲು ತೆರಳಿದ್ದ ವೇಳೆ ಬಂಧನವಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಹೋರಾಟಗಾರ ಯಡೇಹಳ್ಳಿ ಆರ್ ಮಂಜುನಾಥ್ ಮನೆಗೆ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿ ಮಾತುಕತೆ ನೆಡೆಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ,ಪ್ರಜಾಪ್ರಭುತ್ವದಲ್ಲಿ ಶಾಂತಿ ರೂಪದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದನ್ನು ಕಸಿಯುವ ಪ್ರಯತ್ನ ಯಾರು ಕೂಡ ಮಾಡಬಾರದು. ಮಂಜುನಾಥ್ ರವರು ಪಕ್ಷ ಬೇರೆ ಮರೆತು ಹೋರಾಟ ನಡೆಸುವ ವ್ಯಕ್ತಿಯಾಗಿದ್ದಾರೆ. ಆಡಳಿತ ವ್ಯವಸ್ಥೆ ಹಾಗೂ ಸರ್ಕಾರದ ಲೋಕಗಳು ಕಂಡು ಬಂದಾಗ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ. ಸಂಸದನಾಗಿ ನನ್ನ ಮೇಲು ಕೂಡ ಕೆಲವು ಬಾರಿ ಪ್ರತಿಭಟನೆ ನಡೆಸಿರುವುದು ಉಂಟು ಈ ರೀತಿ ತಾಲೂಕಿನಲ್ಲಿ ಅಭಿವೃದ್ಧಿಗಾಗಿ ತಮ್ಮದೇ ಶೈಲಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವುದನ್ನು ನಾವೆಲ್ಲರೂ ಮನ ಕಂಡಿದ್ದೇವೆ ಇಂಥ ಹಿರಿಯ ಹೋರಾಟಗಾರರ ಮೇಲೆ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳಿಸಿದ್ದು ಅಕ್ಷಮ್ಯ.

ನನ್ನ ವಿರುದ್ಧವು ಹೋರಾಟ ನಡೆಸಿದಾಗ ನಾನು ಅದನ್ನು ಸಲಹೆಯಾಗಿ ಸ್ವೀಕರಿಸಿದ್ದೇನೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಧಿಕಾರ ಇದೆಯೆಂದು ದುರ್ಬಳಕೆ ಮಾಡಿಕೊಂಡು ಹಗೆ ಸಾಧಿಸುವುದು ತಪ್ಪು. ಅವರ ಹೋರಾಟಗಳನ್ನು ಗಮನಿಸಿ ಅದರಿಂದ ಉಪಯುಕ್ತ ಮಾಹಿತಿಗಳನ್ನು ಪಡೆದು ಕೆಲಸ ಮಾಡಿದ್ದೇನೆ ಹೊರತು ವೈಶಮ್ಯ ಸಾಧಿಸಲು ಮುಂದಾಗಿಲ್ಲ ಎಂದರು. ರೈತರು ಬೆಳೆಗಾರರ ಹಾಗೂ ಜನರ ಪರವಾಗಿ ಹೋರಾಟ ನಡೆಸಿದ ಮಂಜುನಾಥ್ ಅವರ ಕಠಿಣವಾದ ಸೆಕ್ಷನ್ ಹಾಕಿದ್ದಾರೆ ಎಂಬುವುದರ ಬಗ್ಗೆ ತಿಳಿದುಕೊಳ್ಳಲು ನಾಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ.

ಮಂಜುನಾಥ್ ರವರು ಧೈರ್ಯಗೆಡುವ ಅವಶ್ಯಕತೆ ಇಲ್ಲ ಅವರೊಂದಿಗೆ ನಾವೆಲ್ಲರೂ ಇದ್ದೇವೆ. ಈ ಪ್ರಕರಣದ ಹಿಂದೆ ಹಲವಾರು ಅನುಮಾನಗಳಿವೆ ಬಂಧಿತರಾದ 11 ಜನರ ಪೈಕಿ ಎರಡು ಮೂರು ಜನರ ಮೇಲೆ ಇದ್ದಂತಹ ಗಂಭೀರವಾದ ಆರೋಪಗಳಲ್ಲಿ ಸೇರಿಸಿ ಪ್ರಕರಣ ದಾಖಲು ಮಾಡುವಾಗ ಯಡೇಹಳ್ಳಿ ಮಂಜುನಾಥ್ ಅವರನ್ನು ಸೇರಿಸಿ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.

ಡೈನಮಿಕ್ ಎಸ್.ಪಿ

ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವರಿಷ್ಠಾಧಿಕಾರಿಗಳು ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಬಾರಿ 38 ಕೊಲೆ ನಡೆದಿದ್ದವು ಈ ಬಾರಿ ಅದನ್ನು 19ಕ್ಕೆ ಇಳಿಸಿದ್ದಾರೆ. ಜಿಲ್ಲೆಯಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿರುವ ಡೈನಮಿಕ್ ಎಸ್ ಪಿ ಯಾಗಿದ್ದಾರೆ. ಆದರೆ ಕೆಲವೊಂದು ಸೂಕ್ಷ್ಮತೆ ಅರಿತುಕೊಳ್ಳಲು ವಿಫಲರಾಗಿದ್ದಾರೆ ಎಂದೆನಿಸುತ್ತದೆ. ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ 78 ಜನರು ಮೃತಪಟ್ಟಿದ್ದಾರೆ. ಈ ಭಾಗದ ಜನರ ಆಕ್ರೋಶ ಮುಗಿಲೆದ್ದಿದ್ದು ಈ ವಿಚಾರದಲ್ಲಿ ಎಸ್ಪಿ ಹರಿರಾಮ್ ಶಂಕರ್ ಅವರು ಗಮನಹರಿಸಬೇಕಾಗಿದೆ.

ಅರಣ್ಯ ಸಚಿವರ ವಿರುದ್ಧ ಆಕ್ರೋಶ

ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಅಕ್ಕ ಪಕ್ಕದ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ ಅತಿ ಹೆಚ್ಚು ಕಾಡಾನೆ ಬಾದಿತ ಪ್ರದೇಶ ಸಕಲೇಶಪುರಕ್ಕೆ ಭೇಟಿ ನೀಡಿರುವುದು ದುರಂತವಾಗಿದೆ. ಇಲ್ಲಿ ಬೆಳೆ ಜೊತೆಗೆ ಮನುಷ್ಯರ ಪ್ರಾಣ ಹಾನಿ ಕೂಡ ಹೆಚ್ಚಾಗುತ್ತಿದೆ ಈ ಬಗ್ಗೆ ಸೌಜನ್ಯಕಾದರೂ ಅರಣ್ಯ ಸಚಿವರು ಭೇಟಿ ನೀಡಬೇಕಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂರು ಅರಣ್ಯ ಸಚಿವರನ್ನು ಕಂಡಿದ್ದೇವೆ ಆದರೆ ಪರಿಹಾರ ಮಾತ್ರ ಶೂನ್ಯ. ಕೂಡಲೇ ಅರಣ್ಯ ಸಚಿವರು ತಾಲೂಕಿಗೆ ಭೇಟಿ ನೀಡಿ ಕಾಡಾನೆ ಹಾವಳಿ ಬಗ್ಗೆ ಕೂಲಂಕುಶವಾಗಿ ಅಧ್ಯಯನ ನಡೆಸಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ

ಕಾಡಾನೆ ವಿಚಾರದಲ್ಲಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಈ ಕುರಿತಂತೆ ತಾಲೂಕಿನಲ್ಲಿ ಸಭೆಯನ್ನು ಏರ್ಪಡಿಸಿ ರೈತರು ಬೆಳೆಗಾರರು ಹಾಗೂ ಸಾರ್ವಜನಿಕರೊಂದಿಗೆ ಮುಕ್ತ ಸಮಾಲೋಚನೆ ನಡೆಸಿ ಸಲಹೆಯನ್ನು ಸ್ವೀಕರಿಸಿ ಸರ್ಕಾರ ಅದನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಸಭೆ ನಡೆಸುವ ನೆಪದಲ್ಲಿ ಸಮಯ ವ್ಯರ್ಥ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.ಇಡೀ ದಿನ ತಾಲೂಕಿನಲ್ಲಿದ್ದು ಹೋಬಳಿ ಅವರು ಸಮಸ್ಯೆಗಳನ್ನು ಆಲಿಸಿದಾಗ ಮಾತ್ರ ಇಲ್ಲಿನ ಸಂಕಷ್ಟ ಹರಿವಿಗೆ ಬರಲಿದೆ.

ನಾವು ಮಾತನಾಡಿದರೆ ಅದನ್ನು ರಾಜಕೀಯವಾಗಿ ಸರ್ಕಾರ ಪರಿಗಣಿಸುತ್ತದೆ. ಆದ್ದರಿಂದ ಖುದ್ದು ಸರ್ಕಾರವೇ ಇಲ್ಲಿಗೆ ಬಂದರೆ ಸಮಸ್ಯೆಯ ನಿಜ ಸ್ವರೂಪ ತಿಳಿಯಲಿದೆ.ಇಲ್ಲಿನ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಎದೆಯಲಿ ಯಾವ ರೀತಿ ಆಕ್ರೋಶದ ಇದೆ ತಿಳಿಯಲು ಸರ್ಕಾರ ಮುಂದಾಗದಿರುವುದೇ ಬೇಸರದ ಸಂಗತಿ.ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನದಲ್ಲಿ ಇಬ್ಬರು ಕಾಡಾನೆ ತುಳಿತಕ್ಕೆ ಸಾವನಪ್ಪಿದ್ದಾರೆ ಇದುವರೆಗೂ 78 ಜನರು ಪ್ರಾಣ ಕಳೆದುಕೊಂಡಿದ್ದಾರೆ ಅರಣ್ಯ ಮಂತ್ರಿಗಳು ಕೂಡಲೇ ತಾಲೂಕಿಗೆ ಭೇಟಿ ನೀಡಿ ಇಲ್ಲಿಯೇ ವಾಸ್ತವ್ಯ ಹೂಡಿ ಜನರ ನಾಡಿಮಿಡಿತ ಅರಿಯಲು ಮುಂದಾಗಬೇಕೆಂದು ಸಲಹೆ ನೀಡಿದರು.
ತಾಲೂಕಿನ ಹೋರಾಟಗಾರರು ನ್ಯಾಯಯುತ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಧೈರ್ಯಗೆಡುವ ಅವಶ್ಯಕತೆ ಇಲ್ಲ ಎಂದು ಹೋರಾಟಗಾರರಿಗೆ ಅಭಯ ನೀಡಿದರು.

ಈ ಸಂಧರ್ಭದಲ್ಲಿ ಬೆಳೆಗಾರರ ಸಂಘದ ಖಜಾಂಚಿ ಚಂದ್ರಶೇಖರ್, ಬೇಲೂರು ಪ್ಲಾಂಟರ್ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್, ವಕೀಲ ಕವನ್ ಗೌಡ,ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
[6:53 pm, 30/08/2023] Aadi St Joseph: ಗೃಹಲಕ್ಷ್ಮಿ ಯೋಜನೆಗೆ ಹಾಸನದಲ್ಲಿ ಡಿಸಿ ಚಾಲನೆ

ಪ್ರೊಜೆಕ್ಟರ್ ಮೂಲಕ ವೀಕ್ಷಣೆಗೆ ಸೀಮಿತವಾದ ಕಾರ್ಯಕ್ರಮ ಜನಪ್ರತಿನಿಧಿಗಳ ಗೈರು

ಹಾಸನ: ನಗರದ ಶ್ರೀ ಆದಿಚುಂಚನಗಿರಿ ಸಮುದಾಯಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಮದ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಗೃಹಜ್ಯೋತಿ ಯೋಜನೆಯ ಅನುಷ್ಠಾನ ಹಾಗೂ ಚಾಲನಾ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಆರ್. ಮೋಹನ್ ಹಾಜರು ಆಗಿರುವುದು ಬಿಟ್ಟರೆ ಜನಪ್ರತಿನಿಧಿಗಳ ಗೈರಿನಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ನಂತರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮ ವೀಕ್ಷಣೆಗೆ ಮಾತ್ರ ಸೀಮಿತವಾಯಿತು.

   ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೇಳೆ ಸರಿಯಾಗಿ ಪ್ರೊಜೆಕ್ಟರ್ ಮೂಲಕ ವೀಕ್ಷಣೆ ಮಾಡುತ್ತಲೇ ಹಾಸನದಲ್ಲಿ ಜಿಲ್ಲಾಧಿಕಾರಿಗಳು ಕೂಡ ಚಾಲನೆ ಕೊಟ್ಟರು. ನಂತರ ಪ್ರತಿಜ್ಞಾ ವಿಧಿಯನ್ನು ಎದ್ದುನಿಂತು ಆಲಿಸಿದರು. ಇದಾದ ಬಳಿಕ ಅರ್ಹರಿಗೆ ಗೃಹಲಕ್ಷ್ಮಿ ಯೋಜನೆಯ ೨ ಸಾವಿರ ರೂಗಳು ಖಾತೆಗೆ ನೇರವಾಗಿ ಜಮೆ ಮಾಡುವ ಕಾರ್ಯಕ್ರಮವನು ಸಿಎಂ ನೆರವೇರಿಸಿದರು. ಪ್ರೊಜೆಕ್ಟರ್ ಮತ್ತು ಟಿವಿ ಮೂಲಕ ಪೂರ್ಣ ಕಾರ್ಯಕ್ರಮವನ್ನು ಅಧಿಕಾರಿಗಳು ವೀಕ್ಷಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಯಾವ ಶಾಸಕರು ಪಾಲ್ಗೊಳ್ಳಲಿಲ್ಲ.

   ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಪೂರ್ಣಿಮ, ನಗರಸಭೆ ಅಧ್ಯಕ್ಷರಾದ ಆರ್. ಮೋಹನ್, ಆಯುಕ್ತ ಸತೀಶ್ ಕುಮಾರ್, ಯೋಜನಾಧಿಕಾರಿ ಬಿ.ಎ. ಜಗದೀಶ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಕಾರಿಗಳು ಮತ್ತು ಇತರರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here