ಮಳೆ ನೀರು ಬೀಳುವ ಸಮಯ ಮತ್ತು ಬಿದ್ದ ಸ್ಥಳದಲ್ಲಿಯೇ ಸಂಗ್ರಹಿಸಿ – ಹಾಸನ ಜಿಲ್ಲಾಧಿಕಾರಿ

0

ಹಾಸನ ಫೆ. 22(ಹಾಸನ್_ನ್ಯೂಸ್ !, ಮಳೆ ನೀರನ್ನು ಸಂಗ್ರಹಿಸಲು ಬನ್ನಿ ಸಂಘಟಿತರಾಗೋಣ ಎಂದು ಯುವ ಜನರಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಳೆ ನೀರು ಬೀಳುವ ಸಮಯ ಮತ್ತು ಬಿದ್ದ ಸ್ಥಳದಲ್ಲಿಯೇ ಸಂಗ್ರಹಿಸಿ ಎಂಬ ಜಿಲ್ಲಾ ಮಟ್ಟದ ಪೋಸ್ಟರ್‍ನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಎ ಪರಮೇಶ್‍ರವರು ಬಿಡುಗಡೆ ಮಾಡಿದರು.
ನಾವು ನೀರನ್ನು ಉಚಿತ ಅಥವಾ ಅಗ್ಗವಾಗಿ ದೊರಕುವ ಸಂಪನ್ಮೂಲವೆಂದು ಪರಿಗಣಿಸಿ ಅದನ್ನು ಹೆಚ್ಚಾಗಿ ಬಳಸುತ್ತಾ ಹೋದರೆ ಯಾವುದೇ ಅತ್ಯುತ್ತಮ ನೀತಿಗಳು ಮತ್ತು ತಂತ್ರಜ್ಞಾನವು ಸಹ ಭವಿಷ್ಯದಲ್ಲಿ ನಮಗೆ ಸಹಾಯ ಮಾಡಲಾರವು ಎಂದು ಜಿಲ್ಲಾಧಿಕಾರಿ ತಿಳಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಮಳೆ ನೀರನ್ನು ಸಂಗ್ರಹಿಸಲು ತಡೆಒಡ್ಡುಗಳು, ಇಂಗು ಗುಂಡಿಗಳು ನಿರ್ಮಿಸುವುದು, ಮನೆಗಳು/ಕಟ್ಟಡಗಳು ಛಾವಣಿಗಳ ನೀರನ್ನು ಕೋಯ್ಲು ಮಾಡುವುದು ಕೆರೆಕಟ್ಟೆಗಳಲ್ಲಿ ನೀರನ್ನು ಸಂಗ್ರಹಿಸುವ ಬಗ್ಗೆ ಯುವ ಜನರನ್ನು  ಪ್ರೇರೆಪಿಸಿ ಜಾಗೃತಿ ಮೂಡಿಸಬೇಕೆಂದು ಗ್ರಾಮೀಣ ಪ್ರದೇಶದ ಜನರಿಗೆ ಕರೆ ನೀಡಿದರು.
ಈ ವೇಳೆಯಲ್ಲಿ ಎನ್.ವೈ.ಕೆ ಯ ಜಿಲ್ಲಾ ಯುವಜನಾಧಿಕಾರಿ ಅಭಿಶೇಕ್,ರಾಷ್ಟೀಯ ಪ್ರಶಸ್ತಿ ವಿಜೇತರಾದ ಬಿ.ಟಿ ಮಾನವ ಮತ್ತಿತರು ಹಾಜರಿದ್ದರು.

LEAVE A REPLY

Please enter your comment!
Please enter your name here