ನೆರೆ ರಾಜ್ಯಗಳಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಕಡ್ಡಾಯ: ಡಾ. ಸುಧಾಕರ್ ಸೂಚನೆ

0

ಹಾಸನ ಫೆ. (ಹಾಸನ್_ನ್ಯೂಸ್ !, ನೆರೆ ರಾಜ್ಯಗಳಲ್ಲಿ ಕೋವಿಡ್ 19 ಪ್ರಕರಣ ಹೆಚ್ಚುತ್ತಿರುವುದರಿಂದ ಕರ್ನಾಟಕದಲ್ಲಿ ಗರಿಷ್ಠ ಜಾಗೃತಿ ವಹಿಸುವುದು ಅಗತ್ಯವಿದ್ದು ಕೇರಳ, ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರನ್ನು ತಪಸಾಣೆಗೆ ಒಳಪಡಿಸಿ ಅಥವಾ ಪರೀಕ್ಷಾ ವರದಿ ಪಡೆದುಕೊಳ್ಳಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ|| ಸುಧಾಕರ್  ಅವರು ಸೂಚನೆ  ನೀಡಿದ್ದಾರೆ.


ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡೀಯೋ ಸಂವಾದ ನಡೆಸಿ ಮಾತನಾಡಿದ ಅವರು ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ  ಕಳೆದ 72 ಗಂಟೆಯೊಳಗಿನ ಪಡೆದ  ಆರ್.ಟಿ.ಪಿ. ಸಿ. ಆರ್. ಪರೀಕ್ಷೆಯ ನೆಗೆಟಿವ್ ವರದಿ  ಪಡೆದ  ನಂತರ ಹೋಟೇಲ್ ರೆಸಾರ್ಟ್, ಹೋಮ್ ಸ್ಟೇಗಳಿಗೆ  ಮಾತ್ರ ಪ್ರವೇಶ ನೀಡಬೇಕೆಂದು ಸೂಚಿಸಿದರು.
ವಸತಿ ನಿಲಯ ಹಾಗೂ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳು ಮತ್ತು ಭೋದಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಗಳನ್ನು ಬಳಸಬೇಕು ಎಂದರಲ್ಲದೆ ಮದುವೆಗಳು,  ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹೆಚ್ಚು ಜನ ಸೇರುವಂತಹ ಸ್ಥಳಗಳಲ್ಲಿ  ಮಾರ್ಷಲ್ ಗಳನ್ನು ನೇಮಿಸುವಂತೆ ಡಾ||. ಸುಧಾಕರ್ ಅವರು  ಸೂಚಿಸಿದರು.
     ವಸತಿ ನಿಲಯ, ವಸತಿಯುತ, ಶೈಕ್ಷಣಿಕ ಸಂಸ್ಥೆಗಳಲ್ಲಿ ಏಕ ಕಾಲಕ್ಕೆ 5 ಕಿಂತ ಹೆಚ್ಚಿನ ಕೋವಿಡ್ ಸೋಂಕು ಪ್ರಕರಣಗಳು ಕಂಡುಬಂದಲ್ಲಿ ಅಂತಹ ಪ್ರದೇಶವನ್ನು ಕಂಟೈನ್ಮೆಂಟ್ ವಲಯ  ಎಂದು ಗುರುತಿಸಿ ಅಗತ್ಯ ಕ್ರಮ ಕೈಗೊಳಬೇಕು ಸೋಂಕು ದೃಡಪಟ್ಟ 7 ದಿನಗಳ ನಂತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳನ್ನು ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಪುನಃ ಒಳಪಡಿಸಿ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ  ಜಾವೇದ್ ಅಖ್ತರ್ ಅವರು ಮಾತನಾಡಿ ಬೆಳಗಾವಿ, ಮೈಸೂರು, ಕೊಡಗು, ಬೆಂಗಳೂರು ಗಡಿ ಭಾಗಗಳು  ಹಾಗೂ ಹೊರ ರಾಜ್ಯಗಳಿಂದ ಬರುವಂತವರಿಗೆ  ರ್ಯಾಂಡಮ್ ಪರೀಕ್ಷೆಯನ್ನು ಮಾಡುವಂತೆ  ಹಾಗೂ ವಾಹನಗಳಲ್ಲಿ ಆಗಮಿಸುವವರನ್ನು ಥರ್ಮಲ್ ಸ್ಯಾನಿಂಗ್ ಮೂಲಕ ಪರೀಕ್ಷೆಗೆ ಒಳಪಡಿಸಿ ಎಂದು ನಿರ್ದೇಶನ ನೀಡಿದರು.
ವಿಡೀಯೋ ಸಂವಾದ ನಂತರ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ ಬೇರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರಿಗೆ  ಕಳೆದ 72 ಗಂಟೆಯೊಳಗೆ ಮಾಡಿಸಿದ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ವರದಿ ಪಡೆಯಬೇಕು ಎಂದು  ಸಾರಿಗೆ ಇಲಾಖೆ  ಅಧಿಕಾರಿಗಳಿಗೆ ಸೂಚಿಸಿದರು. 
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಿ.ಎ ಪರಮೇಶ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ, ಹಿಮ್ಸ್ ನಿರ್ದೇಶಕರಾದ ಪಿ.ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ|| ಸತೀಸ್, ಆರ್.ಸಿ.ಎಚ್. ಅಧಿಕಾರಿ ಡಾ|| ಕಾಂತರಾಜ್, ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here