ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ

0

ಹಾಸನ : ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಮಧು ಪಿ. ಹಾಗೂ ಡಾ. ಯಶಸ್‌ಗೌಡ ಟಿ.ಜಿ. ಅವರು, ಅಮೆರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ನೆ ದ ‌ ಲ್ಯಾಂಡ್ ಮೂಲದ ಪ್ರಕಾಶನ ಸಂಸ್ಥೆ ಎಲ್ಸಿಯರ್ ಹೊರತರುವ ವಿಶ್ವದ ಅಗ್ರ 2 ಪ್ರತಿಶತ ವಿಜ್ಞಾನಿಗಳ ಪಟ್ಟಿಯ ಮೆಟೀರಿಯಲ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.

ಕಾಂಪೋಸಿಟ್ಸ್ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಡಾ. ಮಧು ಪಿ, ಅವರ 75 ಹಾಗೂ ಡಾ.ಯಶಸ್‌ಗೌಡ ಟಿ.ಜಿ. ಅವರ 35 ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇಬ್ಬರೂ ಅಂತಾರಾಷ್ಟ್ರೀಯ ಸಂಶೋಧನಾ ಸಮಾವೇಶಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಡಾ. ಮಧು ಪಿ. ಅವರು ಕಳೆದ ವರ್ಷ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

LEAVE A REPLY

Please enter your comment!
Please enter your name here