ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

0

ಬೇಲೂರು: ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ, ಬಿಳಗುಲಿ ಗ್ರಾಮದ ಬಳಿ ನಡೆದಿದೆ. ಬಸವಶೆಟ್ಟಿ (60) ಮೃತ ವ್ಯಕ್ತಿ. ಅಂದಲೆ ಗ್ರಾಮದ ಬಸವಶೆಟ್ಟಿ ಕಳೆದ ಹತ್ತು ದಿನಗಳ ಹಿಂದೆ ಕಾಣೆಯಾಗಿದ್ದರು. ಈ ಬಗ್ಗೆ ಬಸವಶೆಟ್ಟಿ ಮನೆಯವರು ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು.

ಭಾನುವಾರ ಅಂದಲೆ ಗ್ರಾಮದಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಅರೇಹಳ್ಳಿ ಹೋಬಳಿ, ಬಿಳಗುಲಿ ಗ್ರಾಮದ బళి ಬಸವಶೆಟ್ಟಿ ಶವ ಪತ್ತೆಯಾಗಿದ್ದು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here