ಕಾವೇರಿಗಾಗಿ ಕರ್ನಾಟಕ ಬಂದ್. ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಬಂಧನ

0

ಹಾಸನ : ಕಾವೇರಿಗಾಗಿ ಕರ್ನಾಟಕ ಬಂದ್. ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಬಂಧನ. ಹಾಸನ ನಗರ ಬಸ್ ನಿಲ್ದಾಣದಲ್ಲಿ ಬಸ್ ಪಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು. ಹೋರಾಟಗಾರರನ್ನು ಎಳೆದೊಯ್ದ ಪೊಲೀಸರು. ಕನ್ನಡಪರ ಸಂಘಟನೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ, ಪ್ರತಿಭಟನಾನಿರತರನ್ನು ಬಂಧಿಸಿ ಕರೆದೊಯ್ದ ಪೊಲೀಸರು. ಪೊಲೀಸರ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ. ಪ್ರತಿಭಟನಾಕಾರರನ್ನು ಎತ್ತಿಕೊಂಡು ಪೊಲೀಸ್ ವಾಹನದಲ್ಲಿ ಕರೆದೊಯ್ದ ಪೊಲೀಸರು.

ಹಾಸನದಲ್ಲಿ ಹೋರಾಟಗಾರರ ವಿರೊಧದ ನಡುವೆಯು ಬಸ್ ಸಂಚಾರ ಆರಂಭ. ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭ. ಬಸ್ ಸಂಚಾರ ಮಾಡದಂತೆ ಹಾಗೂ ಪ್ರಯಾಣಿಕರು ಬಸ್‌ನಲ್ಲಿ ತೆರಳದಂತೆ ಹೋರಾಟಗಾರರ ಮನವಿ. ಆದರೆ ಪೊಲೀಸರ ಭದ್ರತೆಯಲ್ಲಿ ಬಸ್ ಸಂಚಾರ ಶುರುಮಾಡಿದ ಪೊಲೀಸರು. ಬಸ್ ಇದ್ದರೂ ಬಹಳ ವಿರಳ ಸಂಖ್ಯೆಯಲ್ಲಿ ಇರುವ ಪ್ರಯಾಣಿಕರು. ನಿತ್ಯವು ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರಿರುತ್ತಿದ್ದ ಹಾಸನದ ಬಸ್ ನಿಲ್ದಾಣ ಖಾಲಿ ಖಾಲಿ. ಕೆಲವೇ ಕೆಲವು ಪ್ರಯಾಣಿಕರಿದ್ದರು ಸಂಚಾರ ನಡೆಸುತ್ತಿರುವ ಸಾರಿಗೆ ಬಸ್.

LEAVE A REPLY

Please enter your comment!
Please enter your name here