ಖಾಸಗಿ ಕ್ಲಿನಿಕ್‌ಗಳ ಮೇಲೆ ದಿಡೀರ್ ದಾಳಿ ನಡೆಸಿ ಖಡಕ್ ಎಚ್ಚರಿಕೆ ನೀಡಿದ ಟಿಹೆಚ್‌ಒ ಡಾ.ಪುಷ್ಪಲತಾ.

0

ಹಾಸನ : ಜಿಲ್ಲೆಯ ಅರಕಲಗೂಡು ಪಟ್ಟಣದ ಹಲವು ಖಾಸಗಿ ಕ್ಲಿನಿಕ್,ಲ್ಯಾಬ್‌ಗಳ ಮೇಲೆ ಬುಧವಾರ ದಿಡೀರ್ ದಾಳಿ ನಡೆಸಿದ ತಾಲೂಕು ವೈದ್ಯಾಧಿಕಾರಿ ಡಾ.ಪುಷ್ಪಲತಾ ಅವರು ನಿಯಮಗಳನ್ನು ಉಲ್ಲಂಘನೆ ಮಾಡಿರುವ ವೈದ್ಯರು,ಮಾಲೀಕರ ವಿರುದ್ಧ ನೋಟಿಸ್ ಜಾರಿಮಾಡಿ ಎಚ್ಚರಿಕೆ ನೀಡಿದರು.


ಪಟ್ಟಣದ ಕೃಷ್ಣ ಕ್ಲಿನಿಕ್,ಸಂಜೀವಿನಿ ಕ್ಲಿನಿಕ್ ಮತ್ತು ಧನ್ವಂತರಿ ಕ್ಲಿನಿಕ್‌ಗಳಿಗೆ ಭೇಟಿನೀಡಿದ ಟಿಹೆಚ್‌ಒ,ವೈದ್ಯರು ನಡೆಸುತ್ತಿರುವ ಅವೈಜ್ಞಾನಿಕ ಚಿಕಿತ್ಸೆ ಕ್ರಮ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಚಿಕಿತ್ಸೆಗೆ ಬರುವ ರೋಗಿಗಳು,ಸಾರ್ವಜನಿಕರಿಗೆ ಕಲ್ಪಿಸದೇ ಇರುವ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.


ಎಸ್‌ಬಿಐ ಶಾಖೆ ಎದುರು ನಡೆಸುತ್ತಿರುವ ಕೃಷ್ಣ ಕ್ಲಿನಿಕ್‌ನ ವೈದ್ಯರು,ಮಾಲೀಕರು ಬಾಳೆ ಕಾಯಿ ಮಂಡಿಯ ಹೆಸರಿನ ಕೊಠಡಿಯಲ್ಲಿ ಅನಗತ್ಯವಾಗಿ ಕಾಟ್‌ಗಳನ್ನು ಹಾಕಿ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ಕೊಡಲಾಗುತ್ತಿದೆ.ಕುಡಿಯುವ ನೀರು,ಶೌಚಾಲಯ ವ್ಯವಸ್ಥೆ ಇಲ್ಲ.ಒಂದು ಕೊಠಡಿಯಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಮಲಗಿಸಿ ಡ್ರಿಪ್ ಸೇರಿದಂತೆ ಇತರೆ ಚಿಕಿತ್ಸೆ ಕೊಡಲಾಗುತ್ತಿದೆ.ಜನರು ಉಸಿರುಕಟ್ಟಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ.ಪುಷ್ಟಲತಾ ಆಕ್ರೋಶ ವ್ಯಕ್ತಪಡಿಸಿದರು.


ಟೆಂಪೋ ಸ್ಟಾö್ಯಂಡ್ ಬಳಿಯ ಧನ್ವಂತರಿ ಕ್ಲಿನಿಕ್ ಮಾಲೀಕರು ಆಯುರ್ವೇದ ವೈದ್ಯರನ್ನು ಬಳಕೆ ಮಾಡಿಕೊಂಡು ಅಲೋಪತಿ ಚಿಕಿತ್ಸೆಯನ್ನು ಕೊಡುತ್ತಿರುವುದು ಕಂಡುಬಂದಿದೆ.ಇಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಎಎನ್‌ಎಂ ತರಬೇತಿ ಆಗಿಲ್ಲ.ಆದರೂ ಕೂಡ ಇವರ ಇಂಜೆಕ್ಸನ್ ಸೇರಿ ಇತರೆ ಕೆಲಸಗಳನ್ನು ಮಾಡಿಸಲಾಗುತ್ತಿದೆ.ಇಲ್ಲಿಯೂ ಕೂಡ ರೋಗಿಗಳಿಗೆ ಶೌಚಾಲಯ ಸೌಲಭ್ಯವಿಲ್ಲ.ಇಲ್ಲಿಗೆ ಬರುವ ಜನರು ಸರಕಾರಿ ಸುಲಭ ಶೌಚಾಲಯವನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿದೆ.ಅಲ್ಲದೆ ಚಿಕಿತ್ಸೆಗೆ ಬಳಕೆ ಮಾಡಿಕೊಂಡ ಅನುಪಯುಕ್ತ ವಸ್ತುಗಳನ್ನು ಪಕ್ಕದಲ್ಲಿ ಸುಡಲಾಗುತ್ತಿರುವುದು ಸಹ ಕಂಡುಬಂದಿದೆ.ಮೆಡಿಕಲ್ ಬಯೋವೇಸ್ಟ್ಗಳನ್ನು ವಿಂಗಡಣೆ ಮಾಡದೇ ಸುಡಲಾಗುತ್ತಿದೆ ಎಂದು ಹೇಳಿದರು.


ಲಕ್ಷಿö್ಮ ಕಾಂಪ್ಲೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಕ್ಲಿನಿಕ್ ಕೂಡ ಯಾವುದೇ ನಿಯಮಗಳನ್ನು ಪಾಲಾನೆ ಮಾಡದೆ ವೈದ್ಯರಿಂದ ಜನರಿಗೆ ಚಿಕಿತ್ಸೆ ಕೊಡಲಾಗುತ್ತಿದೆ.ಇಲ್ಲಿ ಯಾವುದೇ ಮೂಲ ಸೌಕರ್ಯ ಜನರಿಗೆ ಸಿಗುತ್ತಿಲ್ಲ.ಇಲ್ಲಿ ಇರುವ ಕಿರಿದಾದ ಸ್ಥಳದಲ್ಲಿ ಕಾಟ್,ಲ್ಯಾಬ್ ನಿರ್ಮಾಣಮಾಡಿಕೊಂಡು ಚಿಕಿತ್ಸೆ ಕೊಡುತ್ತಿದ್ದಾರೆ.ಇವರಿಗೂ ಕೂಡ ಎಚ್ಚರಿಕೆ ನೀಡಲಾಗಿದೆ ಎಂದರು.


ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ 31 ಕ್ಲಿನಿಕ್‌ಗಳು ಹಾಗೂ4 ಲ್ಯಾಬ್‌ಗಳು ಅನುಮತಿ ಪಡೆದಿದ್ದು, ಇನ್ನು 5 ಅನುಮತಿ ಪಡೆಯಬೇಕಿದೆ.ಈ ಎಲ್ಲಾ ಖಾಸಗಿ ಕ್ಲಿನಿಕ್,ಲ್ಯಾಬ್‌ಗಳಲ್ಲಿ ವೈದ್ಯಕೀಯ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.ವಿಶೇಷವಾಗಿ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಸರಿಯಾಗಿ ಮಾಡಿಲ್ಲ.ದರಪಟ್ಟಿ ಪ್ರಕಟಣೆ ಮಾಡುವುದು ಕಡ್ಡಾಯವಾಗಿದೆ.ಇದನ್ನು ಸಹ ಹಾಕಿಲ್ಲ.

ಈ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗಿದೆ.ಇನ್ನು ಮುಂದೆ ನಿಯಮಗಳನ್ನು ಉಲ್ಲಂಘನೆ ಮಾಡುವ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗುವುದು,ಲ್ಯಾಬ್‌ಗಳ ಬಗ್ಗೆಯೂ ವರದಿ ನೀಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ತಿಳಿಸಿದರು.


ಅರಕಲಗೂಡು ಪಟ್ಟಣದ ಎಸ್‌ಬಿಐ ಶಾಖೆ ಎದುರಿನ ಕೃಷ್ಣಕ್ಲಿನಿಕ್‌ಗೆ ಟಿಹೆಚ್‌ಒ ಭೇಟಿನೀಡಿ ಮೂಲಸೌಕರ್ಯ ಕಲ್ಪಿಸದೇ ಇರುವ ಬಗ್ಗೆ ವೈದ್ಯರು,ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿರುವುದು.
ನಿಲ್ದಾಣ ಬಳಿಯ ಧನ್ವಂತರಿ ಕ್ಲಿನಿಕ್‌ನವರು ವೈದ್ಯಕೀಯ ತ್ಯಾಜ್ಯವನ್ನು ಸಾರ್ವಜನಿಕರ ಸ್ಥಳದಲ್ಲಿ ಸುಡುತ್ತಿರುವುದನ್ನು ಕಂಡು ಟಿಹೆಚ್‌ಒ ಆಕ್ರೋಶ ವ್ಯಕ್ತಪಡಿಸಿದರು. -ಕೃಷಿ ಸಹಾಯಕ ನಿರ್ದೇಶಕ ರಮೇಶ್‌ಕುಮಾರ್

LEAVE A REPLY

Please enter your comment!
Please enter your name here