ಹಾಸನ: ಹಾಸನ -ಸಕಲೇಶಪುರ-ಮಾರೇನಹಳ್ಳಿ ರಾಷ್ಟೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಇಂದು ಮೊದಲನೇ ತ್ರೆöÊಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಕಳೆದ ದಿಶಾ ಸಭೆಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಮಾತು ನೀಡಿದ್ದೀರಿ ಆದರೆ ಇದುವರೆಗೂ ಕೆಸಲ ಮುಗಿಸದೆ ವಿಳಂಬ ಮಾಡುತ್ತಿದ್ದಿರಿ ಸದರಿ ಕಾಮಗಾರಿಯನ್ನು ಪ್ರಥಮ ಆದ್ಯತೆ ಮೇರೆಗೆ ಮಾಡುವಂತೆ ತಿಳಿಸಿದರು.
ಹಾಸನ –ಮಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಬರುವ ಕದಬಳ್ಳಿಯಿಂದ ಹಾಸನದ ನಡುವೆ ಇರುವ ಗೌಡಗೆರೆ, ಜೋಗಿಪುರ, ಮಲ್ಲವನಹಳ್ಳಿ, ಬೂಕನಬೆಟ್ಟ, ಚಿಕ್ಕಗೊಂಡನಹಳ್ಳಿ ಹಾಗೂ ನಾಗತಿಹಳ್ಳಿ ಬಳಿ ಅವಘಾಡಗಳನ್ನು ತಪ್ಪಿಸಲು ಜನ ಜಾನುವಾರು ಓಡಾಟಕ್ಕೆ ಸಹಕಾರಿಯಾಗುವಂತೆ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮವಹಿಸಲು ಹಾಗೂ ಸಂಸದರಾದ ಪ್ರಜ್ವಲ್ ರೇವಣ್ಣ ಶಾಸಕರಾದ ಹೆಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೇಲೂರು-ಚಿಕ್ಕಮಗಳೂರು ರೈಲ್ವೇ ಕಾಮಗಾರಿಯನ್ನು ಪ್ರಾರಂಭಿಸಿ ಎಂದು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಸಂಸದರು ಅಗತ್ಯವಿದ್ದಲ್ಲಿ ಪೊಲೀಸ್ ರಕ್ಷಣೆ ಪಡೆದು ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾತನಾಡಿ ಕಾಮಗಾರಿಗಳು ವಿಳಂಬವಾಗದಂತೆ ಪೂರ್ಣಗೊಳಿಸಲು ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಲು ತಿಳಿಸಿದರು.
ಮಳೆ ಕೊರತೆಯಿಂದ ಜಲಾಶಯಗಳಿಂದ ಬೆಳೆ ಬೆಳೆಯಲು ಸಾಕಷ್ಟು ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ರೈತರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿ ಇಲ್ಲದಿದ್ದರೆ ರೈತರು ಬೆಳೆ ಬೆಳೆದು ನೀರಿನ ಕೊರತೆಯಿಂದನಷ್ಟ ಅನುಭವಿಸಬೇಕಾಗುತ್ತದೆ ಎಂದು ಸಂಸದರು ತಿಳಿಸಿದರು.
ಇದಕ್ಕೆ ಶಾಸಕರಾದ ಹೆಚ್. ಡಿ. ರೇವಣ್ಣನವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ ಸೂರಜ್ ರೇವಣ್ಣ ಅವರು ಧ್ವನಿ ಗೂಡಿಸಿ ರೈತರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಇದರ ಬಗ್ಗೆ ಬೀಗಿ ಕ್ರಮವಹಿಸಲು ಶಾಸಕರಾದ ಹೆಚ್. ಡಿ. ರೇವಣ್ಣನವರು ತಿಳಿಸಿದರಲ್ಲದೆ, ಕುಡಿತದಿಂದ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಮರ್ಡರ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಎಂದರು.
ಅಕ್ರಮ ಮಧ್ಯ ಮಾರಾಟ ತಡೆಯಲು ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಪ್ರಕರಣ ದಾಖಲಿಸುತ್ತಿಲ್ಲ ಈ ನಿಟ್ಟಿನಲ್ಲಿ ನಿಗಾವಹಿಸಿ ಎಂದು ಸಂಸದರು ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಮಾತನಾಡಿ ಮರ್ಡರ್ ಪ್ರಕರಣಗಳ ತನಿಖೆಯಲ್ಲಿ ಗಮನಿಸಿದಾಗ ಹೆಚ್ಚು ಪ್ರಕರಣಗಳಲ್ಲಿ ಕುಡಿತದಿಂದ ಆಗಿರುವುದು ಕಂಡು ಬಂದಿದೆ ಎಂದರು.
ಜೆ ಜೆ. ಎಂ. ನಲ್ಲಿ ಕೆಲಸ ಪೂರ್ಣ ಗೊಂಡಿರುವ ಬಗ್ಗೆ ವರದಿ ನೀಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದುರುದ್ದೇಶದಿಂದ ವರದಿ ನೀಡದಿದ್ದರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪರಿಶೀಲನೆ ಮಾಡಿ ಕಾನೂನು ರೀತಿಯಲ್ಲಿ ನೋಟೀಸ್ ನೀಡಿ ಮಾಹಿತಿ ಕೇಳಿ ನಂತರ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳಿಂಗೆ ಯಾವುದೇ ಅಡೆತಡೆ ನೀಡದೆ ಕೆಲಸಕ್ಕೆ ಸಹಕಾರ ನೀಡಬೇಕು ಎಂದು ಸೂಚಿಸಿದರು.
ಕೃಷಿಕರು ಬೆಳೆಗಳಿಗೆ ನೀರು ಬಳಕೆಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜಿನ ವೇಳಾ ಪಟ್ಟಿಯನ್ನು ಕೃಷಿ ಇಲಾಖೆ ಹಾಗೂ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ನೋಟಿಸ್ ಬೋರ್ಡ್ಗಳಲ್ಲಿ ಮಾಹಿತಿ ಪ್ರಕಟಿಸಲು ಕ್ರಮವಹಿಸಲು ಕೆ. ಪಿ. ಟಿ. ಎಲ್. ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕರಾದ ಹೆಚ್.ಡಿ.ರೇವಣ್ಣ ನವರು ಹಾಗೂ ಸಿ. ಎನ್ ಬಾಲ ಕೃಷ್ಣ ಅವರು ಮಾತನಾಡಿ ಮಳೆಯಾಶ್ರಿತ ಬೆಳೆಗಳು ನೆಲಕಚ್ಚುತ್ತಿದ್ದು ಇದನ್ನು ಗಂಭೀರ ಪರಿಗಣಿಸಿ ರೈತರ ಬೆಳೆಗೆ ನೀರಾಯಿಸಲು ಅಗತ್ಯ ವಿದ್ಯುತ್ ಕಲ್ಪಿಸಬೇಕು ಎಂದು ತಿಳಿಸಿದರು.
ಮೈಸೂರಿನಿಂದ ದೆಹಲಿಗೆ ತೆರಳುವ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಹೊಳೆನರಸೀಪುರದಲ್ಲಿ ನಿಲುಗಡೆಗೆ ಅವಕಾಶ ದೊರೆತಿದೆ ಎಂದು ಹೆಚ್.ಡಿ.ರೇವಣ್ಣ ಅವರು ತಿಳಿಸಿದರು.
ಮೊರಾರ್ಜಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಶಾಲೆಗಳಲ್ಲಿ ಉಳಿಕೆ ಸೀಟುಗಳನ್ನು ಹಣ ಪಡೆದು ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರುಗಳು ಬರುತ್ತಿವೆ ಇಂತಹ ಅಧಿಕಾರಿಗಳ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಹೆಚ್.ಡಿ.ರೇವಣ್ಣನವರು ತಿಳಿಸಿದರು.
ಪಶುಪಾಲನಾ ಇಲಾಖೆ ಜನವರಿಯಿಂದ ಇಲ್ಲಿಯವರೆಗೆ ಜಾನುವಾರುಗಳಿಗೆ ಅಗತ್ಯ ಔಷಧಿಗಳನ್ನು ನೀಡಿಲ್ಲ ಎಂದು ಪ್ರಶ್ನೀಸಿದ ಸಂಸದರು ರೈತರು ತೊಂದರೆ ಅನುಭವಿಸುತ್ತಿದ್ದಾರೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ ಬೀದಿ ನಾಯಿಗಳ ಹಾವಳಿಯಿಂದ ಮಾರಣಾಂತಿಕ ಘಟನೆಗಳು ಸಂಭವಿಸುತ್ತಿವೆ ಎಂದರು.
ಬೀದಿ ನಾಯಿಗಳ ಹಾವಳಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ಸಂಸದರು ಸೂಚಿಸಿದರು.
ಶಾಸಕರಾದ ಸ್ವರೂಪ್ ಅವರು ಮಾತನಾಡಿ ಕೋಳಿ ಅಂಗಡಿಗಳ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡುತ್ತಿರುವ ಕಾರಣ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಬಿ.ಆರ್.ಪೂರ್ಣಿವ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.